ಕಾಂಗ್ರೆಸ್ ಇಂದು ಹೊಸ ಮುಸ್ಲಿಂ ಲೀಗ್ ಆಗಿದೆ: ನಿತಿನ್ ನವೀನ್
ನವದೆಹಲಿ, 20 ಆಗಸ್ಟ್ (ಹಿ.ಸ.): ಆ್ಯಂಕರ್:ವಂದೇ ಮಾತರಂ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕಾಂಗ್ರೆಸ್ ಈಗ ‘ಹೊಸ ಮುಸ್ಲಿಂ ಲೀಗ್’ನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ತನ್ನ ಅವಮಾನಕರ ನಿಲ
नितिन नवीन, भाजपा अध्यक्ष


ನವದೆಹಲಿ, 20 ಆಗಸ್ಟ್ (ಹಿ.ಸ.):

ಆ್ಯಂಕರ್:ವಂದೇ ಮಾತರಂ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕಾಂಗ್ರೆಸ್ ಈಗ ‘ಹೊಸ ಮುಸ್ಲಿಂ ಲೀಗ್’ನಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ತನ್ನ ಅವಮಾನಕರ ನಿಲುವಿಗೆ ಇದೀಗ ಅಧಿಕೃತ ನಿರ್ಣಯದ ರೂಪ ನೀಡಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪಕ್ಷದ ವೇದಿಕೆಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ನಿರ್ಧರಿಸಿರುವುದು ಇದಕ್ಕೆ ಸಾಕ್ಷಿ ಎಂದು ನಿತಿನ್ ನವೀನ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕೆಲ ದಿನಗಳ ಹಿಂದೆ ಇದೇ ರೀತಿಯ ಅವಮಾನ ವ್ಯಕ್ತಿಯೊಬ್ಬರ ವರ್ತನೆಯಲ್ಲಿ ಕಂಡುಬಂದಿತ್ತು. ಆಗ ಕಾಂಗ್ರೆಸ್ ಅದನ್ನು ಕಾಕತಾಳೀಯ ಎಂದು ಹೇಳಿ ವಿಷಯವನ್ನು ತಳ್ಳಿಹಾಕಿತ್ತು. ಆದರೆ ಈಗ ಅದೇ ನಿಲುವು ಕಾಂಗ್ರೆಸ್‌ನ ಅಧಿಕೃತ ನೀತಿಯಾಗಿ ಮಾರ್ಪಟ್ಟಿದೆ ಎಂದು ಟೀಕಿಸಿದ್ದಾರೆ.

‘ಭಾರತ ಮಾತೆ’ಯ ಪವಿತ್ರ ಸ್ತುತಿಯಾದ ‘ವಂದೇ ಮಾತರಂ’ಗೆ ಅವಮಾನ ಮಾಡುವುದು, ಅದನ್ನು ಪ್ರೇರಣೆಯಾಗಿ ಸ್ವೀಕರಿಸಿ ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರಿಗೆ ಮಾಡಿದ ಅವಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ಇದು ಕೇವಲ ರಾಜಕೀಯ ಸಮರ್ಥನೆಯಲ್ಲ, ಮತಬ್ಯಾಂಕ್ ರಾಜಕಾರಣದ ಸ್ಪಷ್ಟ ಉದಾಹರಣೆಯಾಗಿದೆ. ಮತಬ್ಯಾಂಕ್‌ಗಾಗಿ ಕಾಂಗ್ರೆಸ್ ಪದೇಪದೇ ರಾಷ್ಟ್ರೀಯ ಸ್ವಾಭಿಮಾನದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ ಎಂದು ನಿತಿನ್ ನವೀನ್ ಆರೋಪಿಸಿದ್ದಾರೆ.

ಕಾಂಗ್ರೆಸ್‌ನ ಇಂತಹ ನಿಲುವು ರಾಷ್ಟ್ರೀಯ ಭಾವನೆಗಳಿಗೆ ವಿರುದ್ಧವಾಗಿದ್ದು, ಪಕ್ಷವು ಇಂದು ‘ಹೊಸ ಮುಸ್ಲಿಂ ಲೀಗ್’ನಂತೆ ವರ್ತಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande