ಅಫ್ಘಾನಿಸ್ತಾನಕ್ಕೆ ಭಾರತದಿಂದ ವೈದ್ಯಕೀಯ ನೆರವು
ನವದೆಹಲಿ, 20 ಆಗಸ್ಟ್ (ಹಿ.ಸ.): ಆ್ಯಂಕರ್:ಮಾನವೀಯ ನೆರವಿನ ಭಾಗವಾಗಿ ಭಾರತವು ಗುರುವಾರ ಅಫ್ಘಾನಿಸ್ತಾನಕ್ಕೆ ಅಗತ್ಯ ಔಷಧಗಳು ಹಾಗೂ ವೈದ್ಯಕೀಯ ಸಾಮಗ್ರಿಗಳ ಹೊಸ ಕಂತನ್ನು ಕಳುಹಿಸಿದೆ. ಕಾಬೂಲ್‌ನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಈ ವೈದ್ಯಕೀಯ ನೆರವನ್ನು ಹಸ್ತಾಂತರಿಸಲಾಗಿದೆ. ಅಫ್ಘಾನಿಸ್ತಾನದ ಜನರೊಂದಿಗೆ
भारत से अफगानिस्तान को चिकित्सीय सहायता मिली ।


ನವದೆಹಲಿ, 20 ಆಗಸ್ಟ್ (ಹಿ.ಸ.):

ಆ್ಯಂಕರ್:ಮಾನವೀಯ ನೆರವಿನ ಭಾಗವಾಗಿ ಭಾರತವು ಗುರುವಾರ ಅಫ್ಘಾನಿಸ್ತಾನಕ್ಕೆ ಅಗತ್ಯ ಔಷಧಗಳು ಹಾಗೂ ವೈದ್ಯಕೀಯ ಸಾಮಗ್ರಿಗಳ ಹೊಸ ಕಂತನ್ನು ಕಳುಹಿಸಿದೆ.

ಕಾಬೂಲ್‌ನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಈ ವೈದ್ಯಕೀಯ ನೆರವನ್ನು ಹಸ್ತಾಂತರಿಸಲಾಗಿದೆ. ಅಫ್ಘಾನಿಸ್ತಾನದ ಜನರೊಂದಿಗೆ ಭಾರತ ಹೊಂದಿರುವ ದೀರ್ಘಕಾಲದ ಹಾಗೂ ಬಲಿಷ್ಠ ಆರೋಗ್ಯ ಸಹಭಾಗಿತ್ವವನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಫ್ಘಾನಿಸ್ತಾನದ ಆರೋಗ್ಯ ಸೇವೆಗಳನ್ನು ಬಲಪಡಿಸುವುದು ಹಾಗೂ ಅಲ್ಲಿನ ನಾಗರಿಕರಿಗೆ ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಈ ನೆರವಿನ ಪ್ರಮುಖ ಉದ್ದೇಶವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande