ಅತಿಯಾದ ಮೊಬೈಲ್ ಬಳಕೆಯಿಂದ ಕುತ್ತಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ
ಮೈಸೂರು, 14 ಆಗಸ್ಟ್ (ಹಿ.ಸ.): ಆ್ಯಂಕರ್:ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರು ಅತಿಯಾದ ಮೊಬೈಲ್ ಬಳಕೆ ಹಾಗೂ ತಪ್ಪಾದ ಭಂಗಿಯಲ್ಲಿ ಗಂಟೆಗಟ್ಟಲೆ ಗೇಮ್ ಆಡುವುದು ಮತ್ತು ರೀಲ್ಸ್ ವೀಕ್ಷಿಸಿದ ಪರಿಣಾಮ ಕುತ್ತಿಗೆಗೆ ಗಂಭೀರ ಸಮಸ್ಯೆ ಉಂಟಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಆಸ್ಪತ
ಶಕೀಲಾ


ಮೈಸೂರು, 14 ಆಗಸ್ಟ್ (ಹಿ.ಸ.):

ಆ್ಯಂಕರ್:ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಅವರು ಅತಿಯಾದ ಮೊಬೈಲ್ ಬಳಕೆ ಹಾಗೂ ತಪ್ಪಾದ ಭಂಗಿಯಲ್ಲಿ ಗಂಟೆಗಟ್ಟಲೆ ಗೇಮ್ ಆಡುವುದು ಮತ್ತು ರೀಲ್ಸ್ ವೀಕ್ಷಿಸಿದ ಪರಿಣಾಮ ಕುತ್ತಿಗೆಗೆ ಗಂಭೀರ ಸಮಸ್ಯೆ ಉಂಟಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಕುತ್ತಿಗೆಗೆ ಬೆಂಬಲ ನೀಡುವ ಕಾಲರ್ ಧರಿಸಿರುವ ಶಕೀಲಾ, ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಹಾಸಿಗೆಯಲ್ಲಿ ಮಲಗಿ ಸತತ ನಾಲ್ಕು ಗಂಟೆಗಳ ಕಾಲ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದೆ. ಬಳಿಕ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಗಂಟೆಗಟ್ಟಲೆ ರೀಲ್ಸ್ ನೋಡುತ್ತಿದ್ದೆ. ತಪ್ಪಾದ ಭಂಗಿಯಲ್ಲಿ ಮೊಬೈಲ್ ಬಳಸಿದ್ದರಿಂದ ಕುತ್ತಿಗೆಯ ನರಗಳಿಗೆ ತೀವ್ರ ಹಾನಿಯಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು ಎಂದು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಗೆ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚವಾಗಿದೆ. ಸದ್ಯ ಹಾಸಿಗೆಯಿಂದ ಏಳುವುದು, ಕುಳಿತುಕೊಳ್ಳುವುದು ಹಾಗೂ ಊಟ ಮಾಡಲು ಸಹ ಇತರರ ನೆರವು ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೊಬೈಲ್ ಉಪಯುಕ್ತ ಸಾಧನವಾದರೂ ಅತಿಯಾಗಿ ಬಳಸಬಾರದು. ಮಕ್ಕಳು ಮೊಬೈಲ್ಗೆ ಹೆಚ್ಚು ಅವಲಂಬಿತರಾಗದಂತೆ ಪೋಷಕರು ಎಚ್ಚರ ವಹಿಸಬೇಕು. ಅನಗತ್ಯವಾಗಿ ಗಂಟೆಗಟ್ಟಲೆ ಮೊಬೈಲ್ ಬಳಸುವುದರಿಂದ ಸಮಯದ ಜತೆಗೆ ಆರೋಗ್ಯವೂ ಹಾಳಾಗಬಹುದು ಎಂದು ಶಕೀಲಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande