ಕೋಲಾರದಲ್ಲಿ ನಾಗಲಾಪುರ ಮಠದ ಶ್ರೀಗಳಿಂದ ಶ್ರಾವಣ ಮಾಸ ಆಚರಣೆ
ಕೋಲಾರದಲ್ಲಿ ನಾಗಲಾಪುರ ಮಠದ ಶ್ರೀಗಳಿಂದ ಶ್ರಾವಣ ಮಾಸ ಆಚರಣೆ
ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕೋಲಾರದಲ್ಲಿ ಶ್ರಾವಣ ಶಿವಸಂಜೆ ಕಾರ್ಯಕ್ರಮ ಆರಂಭಿಸಿದರು.


ಕೋಲಾರ, 14 ಆಗಷ್ಟ್ (ಹಿ.ಸ.):

ಆ್ಯಂಕರ್: ಶ್ರಾವಣ ಮಾಸದ ಪ್ರಯುಕ್ತ ಕೋಲಾರ ನಗರದ ಅರಳೇಪೇಟೆಯಲ್ಲಿನ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನಾಗಲಾಪುರ ಮಠದ ಶ್ರೀಗಳಿಂದ ಇಷ್ಟಲಿಂಗ ಶಿವಪೂಜೆಯೊಂದಿಗೆ ೧೪ನೇ ವರ್ಷದ ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮದ ಪ್ರಾರಂಭೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.

ರಂಬಾಪುರಿ ಪೀಠದ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶ್ವಶಾಂತಿ, ಲೋಕಕಲ್ಯಾಣಾರ್ಥವಾಗಿ ಪರಾಭವ ನಾಮ ಸಂವತ್ಸರ ಶ್ರಾವಣ ಮಾಸದ ಮನೆ ಮನೆಗಳಲ್ಲಿ ಶ್ರಾವಣ ಶಿವಸಂಜೆ, ಮಹಾ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕೋಲಾರದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಇಷ್ಟ ಲಿಂಗ ಮಹಾ ಪೂಜಾ ಕಾರ್ಯಕ್ರಮವು ಶ್ರದ್ದಾಭಕ್ತಿಯಿಂದ ವ್ಯವಸ್ಥಿತವಾಗಿ ಏರ್ಪಡಿಸಲಾಗಿತ್ತು.

ಶ್ರಾವಣ ಶಿವಸಂಜೆ ಶಿವಾನುಭವ ಪ್ರಥಮ ದಿನದ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಜಯಶ್ರೀ ರವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಸರ್ವರಿಗೂ ಶುಭಕೋರಿದರು. ಜ್ಞಾನವೇ ಬೆಳಕು, ಭಕ್ತಿಯದೇ ಬಲ, ಸತ್ಸಂಗವೇ ಸತ್ಯಮಾರ್ಗ, ಗುರು ವಚನವೇ ಅಮೃತ, ಅದನ್ನು ಶ್ರದ್ದೆಯಿಂದ ಸೇವಿಸುವವನು ಜೀವನದಲ್ಲಿ ಪ್ರಸಿದ್ದನಾಗುತ್ತಾನೆಂದು ನ್ಯಾಯಾಧೀಶರಾದ ಜಯಶ್ರೀ ನುಡಿದರು.

ಶ್ರಾವಣ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ನಾಗಲಾಪುರ ಮಠಾಧ್ಯಕ್ಷರಾದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯ ವಹಿಸಿ, ಆರ್ಶೀವಚನ ನೀಡಿದರು. ಇದೇ ಸಂದರ್ಭದಲ್ಲಿ ಹಲವು ಭಕ್ತರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande