
ಕೋಲಾರ, 14 ಆಗಷ್ಟ್ (ಹಿ.ಸ.):
ಆ್ಯಂಕರ್ : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದ ಸದ್ಗುರು ಶ್ರೀ ಯೋಗಿ ನಾರೇಯಣ ಮಠದ ಟ್ರಸ್ಟ್ ನ ವತಿಯಿಂದ ಸಭಾಂಗಣದಲ್ಲಿ ಶ್ರಾವಣ ಮಾಸದ ಶ್ರಾವಣ ಶುಕ್ರವಾರದಂದು ಏರ್ಪಡಿಸಲಾಗಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆಯು ವಿಜೃಂಭಣೆಯಿಂದ, ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ಪ್ರಾತ:ಕಾಲ ಘಂಟನಾದ, ಸುಪ್ರಭಾತ ಹಾಗೂ ಗೋಪೂಜೆಯೊಂದಿಗೆ ಪೂಜೆಗಳು ಆರಂಭವಾಯಿತು.
ಶ್ರಾವಣ ಮಾಸದ ಶುಕ್ರವಾರ ಕೈವಾರದ ಯೋಗಿ ನಾರೇಯಣ ಮಠದಲ್ಲಿ ಸಾವಿರಾರು ಮಹಿಳೆಯರು ವರಮಹಾಲಕ್ಷ್ಮಿ ಪೂಜೆಯನ್ನು ಸಾಮೂಹಿಕವಾಗಿ ಮಾಡಿದರು. ವೇದಿಕೆಯಲ್ಲಿ ಲಕ್ಷ್ಮಿ ಅಮ್ಮನವರ ವಿಗ್ರಹವನ್ನು ಪ್ರತಿಷ್ಠಾಪಿಸಿ, ಅಭಿಷೇಕವನ್ನು ಸಲ್ಲಿಸಿ, ಪೂಜೆಯನ್ನು ನೆರವೇರಿಸಲಾಯಿತು. ವೇದಿಕೆಯನ್ನು ಸರ್ವಾಲಂಕಾರವಾಗಿ ಅಲಂಕರಿಸಲಾಗಿತ್ತು. ತಾತಯ್ಯನವರ ಉತ್ಸವ ವಿಗ್ರಹವನ್ನು ದೇವಾಲಯದಿಂದ ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಕರೆತಂದು ವೇದಿಕೆಯಲ್ಲಿ ಆಸೀನಗೊಳಿಸಲಾಯಿತು.
ಆಗಮಿಸಿದ್ದ ಪ್ರತಿಯೊಬ್ಬ ಮಹಿಳೆಯರು ಪೂಜಾ ಸಾಮಾಗ್ರಿಗಳನ್ನು ಮಠದ ವತಿಯಿಂದ ಓದಗಿಸಲಾಗಿತ್ತು. ಅರ್ಚಕ ವೃಂದದವರು ಲಕ್ಷಿ÷್ಮ ಅಷ್ಟೋತ್ತರವನ್ನು ಹೇಳುತ್ತಿದ್ದರೆ, ಮಹಿಳೆಯರು ಕುಳಿತಲ್ಲಿಯೇ ಕುಂಕುಮಾರ್ಚನೆಯನ್ನು ಶ್ರದ್ದಾ ಭಕ್ತಿಗಳಿಂದ ಪೂಜಿಸಿದರು. ನಂತರ ಅಷ್ಟಾವಧಾನ ಸೇವೆಯನ್ನು ಸಲ್ಲಿಸಿ ಮಹಾಮಂಗಳಾರತಿಯನ್ನು ಬೆಳಗಲಾಯಿತು. ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ದಂಪತಿಗಳು ಪೂಜೆಯಲ್ಲಿ ಭಾಗವಹಿಸಿದ್ದರು. ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಸದ್ಗುರು ತಾತಯ್ಯನವರ ಕೀರ್ತನೆಯನ್ನು ಹಾಡಿದರು.
ಸದ್ಗುರು ತಾತಯ್ಯನವರು ರಚಿಸಿರುವ ಶ್ರೀರಾಮತಾರಕ ಮಂತ್ರವನ್ನು ಸಾಮೂಹಿಕವಾಗಿ ಪಠಿಸಲಾಯಿತು. ಸಾಮೂಹಿಕ ವರಮಹಾಲಕ್ಷೀ ಪೂಜೆಯಲ್ಲಿ ಮಹಿಳೆಯರುಭಾಗವಹಿಸಿ ಭಕ್ತಿಭಾವದ ಸಂಚಲನವನ್ನು0ಟು ಮಾಡಿದರು. ಭಾಗವಹಿಸಿದ್ದ ಎಲ್ಲರಿಗೂ ವಿಶೇಷ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್