ಜಾನಪದ ಕಲೆಗಳು ಮನಸ್ಸಿಗೆ ಮುದ ನೀಡುತ್ತವೆ
ಜಾನಪದ ಕಲೆಗಳು ಮನಸ್ಸಿಗೆ ಮುದ ನೀಡುತ್ತವೆ
ಮಾಲೂರು ತಾಲ್ಲೂಕಿನ ಜಯಮಂಗಲ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗಾನಸುಧ ಸಾಂಸ್ಕೃತಿಕ ಕಲಾ ಸಂಸ್ಥೆಯ ಆಶ್ರಯದಲ್ಲಿ ನಡೆದ ಜಾನಪದ ಸಂಭ್ರಮ ಹಾಗೂ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.


ಕೋಲಾರ, 14 ಆಗಷ್ಟ್ (ಹಿ.ಸ.):

ಆ್ಯಂಕರ್ : ಜಾನಪದ ಕಲೆಗಳು ನಮ್ಮ ಜೀವನಾಡಿಯಾಗಬೇಕು. ಜಾನಪದ ಸಂಗೀತ ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ನಮ್ಮ ಪೂರ್ವಜರು ಹಲವಾರು ಸಂದೇಶಗಳನ್ನು ಜಾನಪದ ಗಾಯನದ ಮೂಲಕ ನಮಗೆ ನೀಡಿದ್ದಾರೆ. ಗಾಯನ ಕೇಳುವ ಜೊತೆಗೆ ಅದನ್ನು ಅರ್ಥೈಸಿಕೊಂಡಾಗ ನಮ್ಮ ಜೀವನದ ಮಾರ್ಗ ಬಹಳ ಅರ್ಥಪೂರ್ಣವಾಗಿರುತ್ತದೆ ಎಂದು ಮಾಲೂರು ಫುಡ್ ಬ್ಯಾಂಕ್ ವ್ಯವಸ್ಥಾಪಕ ಪುರ ಎನ್. ಪ್ರದೀಪ್ ಅಭಿಪ್ರಾಯಪಟ್ಟರು.

ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯ ಜಯಮಂಗಲ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಜಯಮಂಗಲದ ಗಾನಸುಧಾ ಸಾಂಸ್ಕೃತಿಕ ಕಲಾ ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ವಿಶೇಷ ಘಟಕ ಯೋಜನೆಯಡಿ ಆಯೋಜಿಸಲಾಗಿದ್ದ ಜಾನಪದ ಸಂಭ್ರಮ ಹಾಗೂ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಿಕಟ ಪೂರ್ವ ಪ್ರಚಾರ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ನಂಜುAಡೇಗೌಡ ಮಾತನಾಡಿ ಮಾಲೂರು-ಪ್ರತಿಯೊಬ್ಬ ಮಾನವನಲ್ಲೂ ಒಂದಲ್ಲ ಒಂದು ರೀತಿಯ ಸುಪ್ತ ಕಲೆ ಅಡಗಿರುತ್ತದೆ. ಅದನ್ನು ಸರಿಯಾದ ಸಮಯದಲ್ಲಿ ಗುರುತಿಸಿ, ಮುನ್ನಲೆಗೆ ತಂದು ಪ್ರೋತ್ಸಾಹಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಹಿಂದಿನ ಕಾಲದಿಂದಲೂ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಯಲ್ಲೂ ಜಾನಪದ, ತಮಟೆ ವಾದನ, ತತ್ವಪದ, ಭಜನೆ ಹಾಗೂ ರಂಗಭೂಮಿ ನಾಟಕಗಳಂತಹ ಕಲೆಗಳು ಜೀವನದ ಭಾಗವಾಗಿದ್ದವು. ಆದರೆ ಆಧುನಿಕತೆಯ ಪ್ರಭಾವದಿಂದ ಪ್ರಸ್ತುತ ದಿನಗಳಲ್ಲಿ ಇಂತಹ ಸಾಂಪ್ರದಾಯಿಕ ಕಲೆಗಳು ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಕಲೆಗೆ ಜಗತ್ತಿನ ಎಲ್ಲ ಸವಾಲುಗಳನ್ನು ಜಯಿಸುವ ದಿವ್ಯ ಶಕ್ತಿ ಇದೆ. ಹೀಗಾಗಿ ಪ್ರತಿಯೊಬ್ಬರೂ ನಮ್ಮ ದೇಶೀಯ ಕಲೆಯನ್ನು ಬೆಳೆಸಿ, ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು.

ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ನಾಗರಾಜ್ ರವರಿಂದ ಭಜನೆ ಹಾಗೂ ಜಾನಪದ ಗೀತೆಗಳ ಗಾಯನ ಪ್ರೇಕ್ಷಕರ ಗಮನ ಸೆಳೆಯಿತು. ಎನ್.ಪ್ರದೀಪ್ ಮತ್ತು ತಂಡದಿAದ ತಮಟೆ ವಾದನ, ನವಮಹಿ ಹಾಗೂ ಪರಿಣಿತ ಎಂ.ಎಸ್. ಅವರ ಮನಮೋಹಕ ಭರತನಾಟ್ಯ ಪ್ರದರ್ಶನ ಹಾಗೂ ಮೈತ್ರಿ ಹಾಗೂ ಸಿರಿ ಅವರ ಶಾಸ್ತ್ರೀಯ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರಗು ತಂದವು. ನಂಜುAಡೇಗೌಡ ಅವರ ಸುಗಮ ಸಂಗೀತ ಗಾಯನ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಶಿಕ್ಷಕ ಗುಟ್ಟಪ್ಪ ಅವರಿಂದ ತತ್ವಪದ ಗಾಯನ ಕಲಾ ಪ್ರದರ್ಶನಗಳು ಯಶಸ್ವಿಯಾಗಿ ಮೂಡಿಬಂದವು.

ಕಾರ್ಯಕ್ರಮದಲ್ಲಿ ಗಾನಸುಧಾ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ಗೌತಮ್, ಗ್ರಾಮ ಮಾಜಿ ಅಧ್ಯಕ್ಷರಾದ ವಸಂತಮ್ಮ ಶಶಿಕುಮಾರ್, ಜೆ.ವಿ. ಮಣಿಕಂಠ, ಕುದುರೆ ಬಾಬು, ಎ.ಎಸ್.ಎಸ್.ಕೆ. ಜಿಲ್ಲಾಧ್ಯಕ್ಷ ಚೌಡದೇನಹಳ್ಳಿ ಕಾಂತರಾಜ್, ಆರ್.ಎಫ್.ಎಫ್. ಸಂಸ್ಥೆಯ ತಾಲೂಕು ಅಧ್ಯಕ್ಷ ಪುರ ಮುನಿರಾಜು, ಸುದರ್ಶನ್ ಸ್ವಾಮಿ, ಗುಟ್ಟಪ್ಪ, ಕೋಡಿಹಳ್ಳಿ ಕೃಷ್ಣಪ್ಪ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande