ಹುಬ್ಬಳ್ಳಿ–ಸಿಂಧನೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ
ಹುಬ್ಬಳ್ಳಿ, 14 ಆಗಸ್ಟ್ (ಹಿ.ಸ.): ಆ್ಯಂಕರ್: ಕಾರ್ಯಾಚರಣೆಯ ಕಾರಣದಿಂದ ರೈಲು ಸಂಖ್ಯೆ 56927 ಎಸ್ಎಸ್ಎಸ್ ಹುಬ್ಬಳ್ಳಿ–ಸಿಂಧನೂರು ದೈನಂದಿನ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯನ್ನು ಆ.17ರಿಂದ ಪರಿಷ್ಕರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಕೊಪ್ಪಳಕ್ಕೆ ಬೆಳಗ್
ಹುಬ್ಬಳ್ಳಿ–ಸಿಂಧನೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ


ಹುಬ್ಬಳ್ಳಿ, 14 ಆಗಸ್ಟ್ (ಹಿ.ಸ.):

ಆ್ಯಂಕರ್:

ಕಾರ್ಯಾಚರಣೆಯ ಕಾರಣದಿಂದ ರೈಲು ಸಂಖ್ಯೆ 56927 ಎಸ್ಎಸ್ಎಸ್ ಹುಬ್ಬಳ್ಳಿ–ಸಿಂಧನೂರು ದೈನಂದಿನ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯನ್ನು ಆ.17ರಿಂದ ಪರಿಷ್ಕರಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಕೊಪ್ಪಳಕ್ಕೆ ಬೆಳಗ್ಗೆ 9.23ಕ್ಕೆ ಆಗಮಿಸಿ 9.25ಕ್ಕೆ ನಿರ್ಗಮಿಸಲಿದೆ. ಗಿಣಿಗೇರಾ 9.34/9.35, ಬೂದಗುಂಪ 9.45/9.46 ಹಾಗೂ ಜಬ್ಬಲಗುಡ್ಡ 9.54/9.55ಕ್ಕೆ ತಲುಪಿ-ನಿರ್ಗಮಿಸಲಿದೆ.

ಎಸ್ಎಸ್ಎಸ್ ಹುಬ್ಬಳ್ಳಿ–ಭಾಣಾಪುರ ಹಾಗೂ ಚಿಕ್ಕಬೆಣಕಲ್–ಸಿಂಧನೂರು ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande