ರಾಷ್ಟ್ರಮಟ್ಟದ ಖೋ-ಖೋ : ಬಳ್ಳಾರಿ ನಂದಿ ಶಾಲೆ ಆಯ್ಕೆ
ಬಳ್ಳಾರಿ, 01 ಆಗಸ್ಟ್ (ಹಿ.ಸ.) ಆ್ಯಂಕರ್ : ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸುಬೇದಾರ್ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಿ.ಬಿ.ಎಸ್.ಇ. ಕ್ಲಸ್ಟರ್ VIII ವಿಭಾಗದ ಖೋ-ಖೋ ಪಂದ್ಯಾವಳಿಯಲ್ಲಿ ಇಲ್ಲಿನ ಬಿ. ಬೆಳಗಲ್ನ ''ನಂದಿ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದು,
ರಾಷ್ಟ್ರಮಟ್ಟದ ಖೋ-ಖೋ : ಬಳ್ಳಾರಿ ನಂದಿ ಶಾಲೆ ಆಯ್ಕೆ


ಬಳ್ಳಾರಿ, 01 ಆಗಸ್ಟ್ (ಹಿ.ಸ.)

ಆ್ಯಂಕರ್ : ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸುಬೇದಾರ್ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಸಿ.ಬಿ.ಎಸ್.ಇ. ಕ್ಲಸ್ಟರ್ VIII ವಿಭಾಗದ ಖೋ-ಖೋ ಪಂದ್ಯಾವಳಿಯಲ್ಲಿ ಇಲ್ಲಿನ ಬಿ. ಬೆಳಗಲ್ನ 'ನಂದಿ ಸಿ.ಬಿ.ಎಸ್.ಇ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದಿದ್ದು, 14 ವರ್ಷದೊಳಗಿನ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಭಾಗವಹಿಸಿದ್ದ ನಂದಿ ಶಾಲೆಯ ತಂಡವು ಜಯಶಾಲಿಯಾಗಿ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದಿದೆ. ಈ ತಂಡದಲ್ಲಿ ಚರಣ್ ನಾಯಕ್, ಜೀವನ್ ಕುಮಾರ್, ವಸಂತಕುಮಾರ್, ಮಾರುತಿ, ಚೇತನ್, ವಿನುತ್, ಯಶವಂತ್, ಶ್ರೀಧರ್, ದ್ರೋಣೇಶ್, ಶಿವಪ್ಪ, ಶ್ರೇಯಸ್ ಹಾಗೂ ಶರತ್ ಅವರು ಶಾಲೆಯನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ.

ಬಾಲಕಿಯರ ತಂಡಕ್ಕೆ ದ್ವಿತೀಯ ಸ್ಥಾನ: ಇದೇ ವೇಳೆ 17 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ನಂದಿ ಶಾಲೆಯ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಮುಡಿಗೇರಿಸಿ ಕೊಂಡು ಸಂಸ್ಥೆಗೆ ಕೀರ್ತಿ ತಂದಿದೆ. ತಂಡದಲ್ಲಿ ನಾಯಕಿ ನಿರೇಷ್, ಶಿರೀಷಾ, ವೈಷ್ಣವಿ, ನಯನ, ತನುಶ್ರೀ, ಕೀರ್ತಿ, ಶೈಲಜಾ, ಸಂಧ್ಯಾ, ವಚರ್ಣೆ, ಕಾವೇರಿ, ಅನುಶ್ರೀ ಹಾಗೂ ಪ್ರಿಯಾಂಕ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande