ಕಾಮನ್ವೆಲ್ತ್ ಕ್ರೀಡೆ 2026: ಪದಕ ಪಟ್ಟಿಯಲ್ಲಿ ಭಾರತ ಎಂಟನೇ ಸ್ಥಾನಕ್ಕೆ
ನವದೆಹಲಿ, ಜುಲೈ 30,(ಹಿ.ಸ.): ಆ್ಯಂಕರ್:ಕಾಮನ್‌ವೆಲ್ತ್ ಕ್ರೀಡೆ 2026ರ ಏಳನೇ ದಿನ ಭಾರತ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ. ಪ್ಯಾರಾ ಅಥ್ಲೆಟಿಕ್ಸ್‌ನ ಪುರುಷರ 100 ಮೀಟರ್ ಟಿ47 ವಿಭಾಗದಲ್ಲಿ ದಿಲೀಪ್ ಗಾವಿತ್ 10.71 ಸೆಕೆಂಡುಗಳಲ್ಲಿ ಗುರ
ग्लासगो राष्ट्रमंडल खेल लोगो


ನವದೆಹಲಿ, ಜುಲೈ 30,(ಹಿ.ಸ.):

ಆ್ಯಂಕರ್:ಕಾಮನ್‌ವೆಲ್ತ್ ಕ್ರೀಡೆ 2026ರ ಏಳನೇ ದಿನ ಭಾರತ ಒಂದು ಚಿನ್ನ ಹಾಗೂ ಎರಡು ಬೆಳ್ಳಿ ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ.

ಪ್ಯಾರಾ ಅಥ್ಲೆಟಿಕ್ಸ್‌ನ ಪುರುಷರ 100 ಮೀಟರ್ ಟಿ47 ವಿಭಾಗದಲ್ಲಿ ದಿಲೀಪ್ ಗಾವಿತ್ 10.71 ಸೆಕೆಂಡುಗಳಲ್ಲಿ ಗುರಿ ತಲುಪಿ ಕ್ರೀಡಾಕೂಟದ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಅದೇ ಸ್ಪರ್ಧೆಯಲ್ಲಿ ಮೊಹಮ್ಮದ್ ಬಾಸಿಲ್ 10.83 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಪಡೆದು ಭಾರತಕ್ಕೆ ಐತಿಹಾಸಿಕ ಮೊದಲ ಹಾಗೂ ಎರಡನೇ ಸ್ಥಾನಗಳ ಸಾಧನೆ ತಂದುಕೊಟ್ಟರು.

ಪುರುಷರ ಉದ್ದಜಿಗಿತದಲ್ಲಿ ಮುರಳಿ ಶ್ರೀಶಂಕರ್ 8.09 ಮೀಟರ್ ಜಿಗಿದು ಬೆಳ್ಳಿ ಪದಕ ಗೆದ್ದು ಸತತ ಎರಡನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಪದಕ ವಿಜೇತರಾದರು. ಭಾರತದ ಲೋಕೇಶ್ ಸತ್ಯನಾಥನ್ ಐದನೇ ಸ್ಥಾನ ಪಡೆದರು.

ಬಾಕ್ಸಿಂಗ್‌ನಲ್ಲಿ ಸಾಕ್ಷಿ ಚೌಧರಿ, ಅರುಂಧತಿ ಚೌಧರಿ, ಸಚಿನ್ ಸಿವಾಚ್ ಸೇರಿದಂತೆ ಆರು ಭಾರತೀಯ ಬಾಕ್ಸರ್‌ಗಳು ಕ್ವಾರ್ಟರ್‌ಫೈನಲ್‌ನಲ್ಲಿ ಜಯಗಳಿಸಿ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.

ಈ ಸಾಧನೆಗಳೊಂದಿಗೆ ಭಾರತ 3 ಚಿನ್ನ, 9 ಬೆಳ್ಳಿ ಮತ್ತು 3 ಕಂಚು ಸೇರಿದಂತೆ ಒಟ್ಟು 15 ಪದಕಗಳನ್ನು ಪಡೆದು ಪದಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ 103 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಕೆನಡಾ ಎರಡನೇ ಹಾಗೂ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande