ಭಾರತದಲ್ಲಿ 500 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹೆಚ್ಚುವರಿ ಹೂಡಿಕೆ:ಪ್ರಧಾನಿ ಮೋದಿ ಸ್ವಾಗತ
ನವದೆಹಲಿ, 09 ಜುಲೈ (ಹಿ.ಸ.): ಆ್ಯಂಕರ್: ಆಸ್ಟ್ರೇಲಿಯಾದ ಅತಿದೊಡ್ಡ ಪಿಂಚಣಿ ನಿಧಿಯಾದ ಆಸ್ಟ್ರೇಲಿಯನ್‌ಸೂಪರ್ ಭಾರತದಲ್ಲಿನ ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ (ಎನ್‌ಐಐಎಫ್) ನಲ್ಲಿ ಹೆಚ್ಚುವರಿಯಾಗಿ 500 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಆಸ್ಟ್ರೇಲಿಯಾದಲ್ಲಿ ಪ್ರಧಾನಿ ಮೋದಿ ಉನ್ನತ ನಿಯೋಗದೊಂದಿಗೆ


ನವದೆಹಲಿ, 09 ಜುಲೈ (ಹಿ.ಸ.):

ಆ್ಯಂಕರ್:

ಆಸ್ಟ್ರೇಲಿಯಾದ ಅತಿದೊಡ್ಡ ಪಿಂಚಣಿ ನಿಧಿಯಾದ ಆಸ್ಟ್ರೇಲಿಯನ್‌ಸೂಪರ್ ಭಾರತದಲ್ಲಿನ ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಫಂಡ್ (ಎನ್‌ಐಐಎಫ್) ನಲ್ಲಿ ಹೆಚ್ಚುವರಿಯಾಗಿ 500 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಈ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಈ ಹೊಸ ಹೂಡಿಕೆ ಭಾರತದ ಅಭಿವೃದ್ಧಿ ಪಯಣ ಹಾಗೂ ಆರ್ಥಿಕ ಸುಧಾರಣೆಗಳ ಮೇಲೆ ಜಾಗತಿಕ ಹೂಡಿಕೆದಾರರು ಹೊಂದಿರುವ ವಿಶ್ವಾಸದ ಪ್ರತೀಕವಾಗಿದೆ ಎಂದು ಹೇಳಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯಲ್ಲಿ ಲಭ್ಯವಿರುವ ಅಪಾರ ಹೂಡಿಕೆ ಅವಕಾಶಗಳಿಗೆ ಇದು ಮತ್ತೊಂದು ಸಾಕ್ಷಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಹೂಡಿಕೆ ಘೋಷಣೆ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ–ಭಾರತ ವಾರ್ಷಿಕ ನಾಯಕರ ಶೃಂಗಸಭೆ ಸಂದರ್ಭದಲ್ಲಿ ಪ್ರಕಟಿಸಲಾಯಿತು. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಲ್ ಶ್ರೋಡರ್ ಅವರು 500 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹೆಚ್ಚುವರಿ ಹೂಡಿಕೆ ಮಾಡುವುದಾಗಿ ಘೋಷಿಸಿದರು.

ಈ ಹೊಸ ಹೂಡಿಕೆಯೊಂದಿಗೆ ಭಾರತದಲ್ಲಿನ ಮೂಲಸೌಕರ್ಯ, ಷೇರು ಮಾರುಕಟ್ಟೆ ಹಾಗೂ ಖಾಸಗಿ ಹೂಡಿಕೆ ಸೇರಿದಂತೆ ವಿವಿಧ ಆಸ್ತಿ ವರ್ಗಗಳಲ್ಲಿ ಆಸ್ಟ್ರೇಲಿಯನ್‌ಸೂಪರ್ ಸಂಸ್ಥೆಯ ಒಟ್ಟು ಹೂಡಿಕೆ 3.3 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಸಂಸ್ಥೆ ಭಾರತದಲ್ಲಿ ಸುಮಾರು 2.8 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಹೂಡಿಕೆ ಮಾಡಿತ್ತು.

2015ರಲ್ಲಿ ಸ್ಥಾಪನೆಯಾದ ನ್ಯಾಷನಲ್ ಇನ್ವೆಸ್ಟ್‌ಮೆಂಟ್ ಅಂಡ್ ಇನ್‌ಫ್ರಾಸ್ಟ್ರಕ್ಚರ್ ಫಂಡ್‌ನ ಪ್ರಮುಖ ಉದ್ದೇಶ ಭಾರತದಲ್ಲಿ ಮೂಲಸೌಕರ್ಯ ಕ್ಷೇತ್ರಕ್ಕೆ ದೀರ್ಘಕಾಲೀನ ಸಾಂಸ್ಥಿಕ ಹೂಡಿಕೆಗಳನ್ನು ಆಕರ್ಷಿಸುವುದಾಗಿದೆ. ಆಸ್ಟ್ರೇಲಿಯನ್‌ಸೂಪರ್ ಹೊಸ ಹೂಡಿಕೆ ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande