ಅಮೆರಿಕದ ದಾಳಿಯ ಬಳಿಕ ಇರಾನ್ನಲ್ಲಿ ಉದ್ವಿಗ್ನತೆ ತೀವ್ರ;ಹಲವು ನಗರಗಳಲ್ಲಿ ಸ್ಫೋಟ
ತೆಹ್ರಾನ್, 08 ಜುಲೈ (ಹಿ.ಸ.): ಆ್ಯಂಕರ್:ಅಮೆರಿಕ ನಡೆಸಿದ ಸೇನಾ ದಾಳಿಯ ಬಳಿಕ ಇರಾನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ದೇಶದ ಹಲವು ನಗರಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿರುವ ವರದಿಗಳು ಬಂದಿವೆ. ಇದೇ ವೇಳೆ ಇರಾಕ್‌ನ ನಜಫ್‌ನಲ್ಲಿ ನಡೆದಿದ್ದ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದ ಇರ
ಇರಾಕನ ನಜಪ್ ವಿಮಾನ ನಿಲ್ದಾಣದಲಿನ ಚಿತ್ರ


ತೆಹ್ರಾನ್, 08 ಜುಲೈ (ಹಿ.ಸ.):

ಆ್ಯಂಕರ್:ಅಮೆರಿಕ ನಡೆಸಿದ ಸೇನಾ ದಾಳಿಯ ಬಳಿಕ ಇರಾನ್‌ನಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ದೇಶದ ಹಲವು ನಗರಗಳಲ್ಲಿ ಭಾರೀ ಸ್ಫೋಟಗಳು ಸಂಭವಿಸಿರುವ ವರದಿಗಳು ಬಂದಿವೆ. ಇದೇ ವೇಳೆ ಇರಾಕ್‌ನ ನಜಫ್‌ನಲ್ಲಿ ನಡೆದಿದ್ದ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತುರ್ತಾಗಿ ಸ್ವದೇಶಕ್ಕೆ ಮರಳಿದ್ದಾರೆ.

ಇರಾನ್‌ನ ಮಾಜಿ ಪರಮೋಚ್ಚ ನಾಯಕ ಅಯತೊಲ್ಲಾ ಸಯ್ಯಿದ್ ಅಲಿ ಖಾಮೆನೇಯಿ ಅವರ ಪಾರ್ಥಿವ ಶರೀರವನ್ನು ನಜಫ್‌ಗೆ ತರಲಾಗಿದ್ದು, ಅಲ್ಲಿನ ಅಂತಿಮ ವಿಧಿವಿಧಾನಗಳ ಬಳಿಕ ಕರ್ಬಲಾದಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ನಂತರ ಗುರುವಾರ ಮಶ್ಹದ್‌ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿಸಲಾಗಿದೆ.

ಇರಾನ್‌ನ ಸರ್ಕಾರಿ ಪ್ರಸಾರ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಅಧ್ಯಕ್ಷ ಪೆಜೆಶ್ಕಿಯಾನ್ ಇರಾಕ್ ಪ್ರವಾಸವನ್ನು ಮಧ್ಯದಲ್ಲೇ ಮುಗಿಸಿ ಬುಧವಾರ ಮುಂಜಾನೆ ತೆಹ್ರಾನ್‌ಗೆ ತೆರಳಿದ್ದಾರೆ. ಅಮೆರಿಕದ ದಾಳಿ ಹಾಗೂ ದೇಶದ ಭದ್ರತಾ ಪರಿಸ್ಥಿತಿಯನ್ನು ಗಮನಿಸಿ ಅವರು ತುರ್ತು ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದ ಸೇನಾ ಕೇಂದ್ರ ಕಮಾಂಡ್ (ಸೆಂಟ್‌ಕಾಮ್) ನೀಡಿರುವ ಮಾಹಿತಿಯಂತೆ, ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಸೈನಿಕ ಕಾರ್ಯಾಚರಣೆ ನಡೆಸಿದೆ. ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದಕ್ಕೆ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸೆಂಟ್‌ಕಾಮ್ ಎಚ್ಚರಿಸಿದೆ. ಮೂರು ವಾಣಿಜ್ಯ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಇದು ಯುದ್ಧ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಅಮೆರಿಕ ಆರೋಪಿಸಿದೆ.

ಇದೇ ವೇಳೆ ದಕ್ಷಿಣ ಇರಾನ್‌ನ ಸಿರಿಕ್, ಕೇಶ್ಮ್ ದ್ವೀಪ ಹಾಗೂ ಬಂದರ್ ಅಬ್ಬಾಸ್ ಪ್ರದೇಶಗಳಲ್ಲಿ ಭಾರೀ ಸ್ಫೋಟಗಳ ಶಬ್ದ ಕೇಳಿಬಂದಿದೆ. ಸಿರಿಕ್ ಬಂದರಿನ ವಾಣಿಜ್ಯ ಮತ್ತು ಮೀನುಗಾರಿಕಾ ಜೆಟ್ಟಿಗಳ ಮೇಲೆ ಕ್ಷಿಪಣಿಗಳು ಅಥವಾ ರಾಕೆಟ್‌ಗಳು ಬಿದ್ದಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ.

ಇನ್ನೊಂದೆಡೆ, ಅಮೆರಿಕ ತನ್ನ ಖಜಾನೆ ಇಲಾಖೆಯ ಮೂಲಕ ಜೂನ್‌ನಲ್ಲಿ ಇರಾನ್‌ಗೆ ನೀಡಿದ್ದ ತಾತ್ಕಾಲಿಕ ತೈಲ ರಫ್ತು ಮತ್ತು ವಹಿವಾಟಿನ ಪರವಾನಗಿಯನ್ನು ರದ್ದುಗೊಳಿಸಿದೆ. ಆಗಸ್ಟ್ 21ರವರೆಗೆ ಕಚ್ಚಾ ತೈಲ ಉತ್ಪಾದನೆ, ಮಾರಾಟ ಮತ್ತು ಸಾಗಣೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ. ಈ ಕ್ರಮದಿಂದ ನಡೆಯುತ್ತಿರುವ ಮಾತುಕತೆಗಳ ನಡುವೆಯೇ ತೆಹ್ರಾನ್ ಮೇಲೆ ಒತ್ತಡ ಹೆಚ್ಚಾಗಿದೆ.

ಅಮೆರಿಕದ ಈ ನಿರ್ಧಾರ ಪರಸ್ಪರ ಒಪ್ಪಂದದ ಉಲ್ಲಂಘನೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಆರೋಪಿಸಿದ್ದು, ಅಮೆರಿಕದ ದಾಳಿಯನ್ನು ತೀವ್ರವಾಗಿ ಖಂಡಿಸಿದೆ.

ಈ ಮಧ್ಯ, ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಅಯತೊಲ್ಲಾ ಅಲಿ ಖಾಮೆನೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಿದ ಇರಾಕ್ ಸರ್ಕಾರ ಮತ್ತು ಅಲ್ಲಿನ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮವು ಇರಾನ್–ಇರಾಕ್ ನಡುವಿನ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಬಾಂಧವ್ಯವನ್ನು ಪ್ರತಿಬಿಂಬಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ, ಉಭಯ ದೇಶಗಳ ನಡುವಿನ ವಿವಿಧ ಕ್ಷೇತ್ರಗಳ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಒತ್ತಿಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande