ಇಂಡೋನೇಷ್ಯಾದಲ್ಲಿ ರಾಮಾಯಣದ ಬೊಂಬೆಯಾಟ ವೀಕ್ಷಿಸಿದ ಪ್ರಧಾನಿ ಮೋದಿ
ಜಕಾರ್ತಾ, 07 ಜುಲೈ (ಹಿ.ಸ.): ಆ್ಯಂಕರ್: ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಕಾರ್ತಾದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಅವರ ಗೌರವಾರ್ಥ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಮಾಯಣ ಆಧಾರಿತ ಸಾಂಪ್ರದಾಯಿಕ ವೇಯ
ಇಂಡೋನೇಷ್ಯಾದಲ್ಲಿ ರಾಮಾಯಣದ ಬೊಂಬೆಯಾಟ ವೀಕ್ಷಿಸಿದ ಪ್ರಧಾನಿ ಮೋದಿ


ಜಕಾರ್ತಾ, 07 ಜುಲೈ (ಹಿ.ಸ.):

ಆ್ಯಂಕರ್:

ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಇಂಡೋನೇಷ್ಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಕಾರ್ತಾದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಅವರ ಗೌರವಾರ್ಥ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಮಾಯಣ ಆಧಾರಿತ ಸಾಂಪ್ರದಾಯಿಕ ವೇಯಾಂಗ್ ಕುಲಿತ್ ಬೊಂಬೆಯಾಟವನ್ನು ವೀಕ್ಷಿಸಿದ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ರಾಮಾಯಣದ ಶಾಶ್ವತ ಸಂದೇಶವನ್ನು ಜೀವಂತವಾಗಿ ಮೂಡಿಸಿದ ಈ ಪ್ರದರ್ಶನವು ಭಾರತ ಮತ್ತು ಇಂಡೋನೇಷ್ಯಾದ ನಡುವಿನ ನಾಗರಿಕತೆಯ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮ ನೀಡಿದ 'ಗಣೇಶ' ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ, ವಿಹಾರ ಧರ್ಮ ರತ್ನ ಸಮೂಹದ 'ಹೋಮೇಜ್ ಟು ದ ಟ್ರಿಪಲ್ ಜೆಮ್' ಬೌದ್ಧ ಸಾಂಸ್ಕೃತಿಕ ಪ್ರದರ್ಶನ ಹಾಗೂ ಸಮನ್ವಯ ತಂಡದ ಭರತನಾಟ್ಯ ನೃತ್ಯ ಪ್ರದರ್ಶನವನ್ನೂ ಪ್ರಧಾನಿ ವೀಕ್ಷಿಸಿ ಪ್ರಶಂಸಿಸಿದರು. ಇಂಡೋನೇಷ್ಯಾದ ಜನರು ಬೌದ್ಧ ಪರಂಪರೆ ಮತ್ತು ಭಾರತೀಯ ಸಾಂಸ್ಕೃತಿಕ ಕಲೆಯನ್ನು ಗೌರವದಿಂದ ಸಂರಕ್ಷಿಸುತ್ತಿರುವುದು ಸಂತಸದ ವಿಷಯ ಎಂದು ಅವರು ಹೇಳಿದರು.

ಜಕಾರ್ತಾದಲ್ಲಿ ಭಾರತೀಯ ಸಮುದಾಯ ನೀಡಿದ ಆತ್ಮೀಯ ಸ್ವಾಗತಕ್ಕೂ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿ, ಭಾರತದ ಪ್ರಗತಿಯ ಬಗ್ಗೆ ಅನಿವಾಸಿ ಭಾರತೀಯರು ತೋರಿಸುತ್ತಿರುವ ಬದ್ಧತೆ ಪ್ರೇರಣಾದಾಯಕವಾಗಿದೆ ಎಂದು ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande