ನಾನು ನಾಡಿನ ದೊರೆಯಲ್ಲ; ನಿಮ್ಮ ಸೇವಕ;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೀದರ್, 06 ಜುಲೈ (ಹಿ.ಸ.): ಆ್ಯಂಕರ್:ನಾನು ನಾಡಿನ ದೊರೆಯಲ್ಲ, ನಿಮ್ಮ ಸೇವಕ. ಯಾರೂ ನನ್ನನ್ನು ನಾಡಿನ ದೊರೆ ಎಂದು ಕರೆಯಬಾರದು. ಮುಖ್ಯಮಂತ್ರಿ ಅಥವಾ ನಾಡಿನ ಸೇವಕ ಎಂದು ಕರೆಯಿರಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸ
Cm


ಬೀದರ್, 06 ಜುಲೈ (ಹಿ.ಸ.):

ಆ್ಯಂಕರ್:ನಾನು ನಾಡಿನ ದೊರೆಯಲ್ಲ, ನಿಮ್ಮ ಸೇವಕ. ಯಾರೂ ನನ್ನನ್ನು ನಾಡಿನ ದೊರೆ ಎಂದು ಕರೆಯಬಾರದು. ಮುಖ್ಯಮಂತ್ರಿ ಅಥವಾ ನಾಡಿನ ಸೇವಕ ಎಂದು ಕರೆಯಿರಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು, ಬಳಿಕ ನೂತನ ಅನುಭವ ಮಂಟಪದ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದೊಂದಿಗೆ ತಮ್ಮ ರಾಜ್ಯ ಪ್ರವಾಸವನ್ನು ಇದೇ ಪುಣ್ಯಭೂಮಿಯಿಂದ ಆರಂಭಿಸಿರುವುದಾಗಿ ತಿಳಿಸಿದರು.

ನೂರಾರು ವರ್ಷಗಳ ಹಿಂದೆ ಸ್ಥಾಪನೆಯಾದ ಅನುಭವ ಮಂಟಪವು ವಿಶ್ವಕ್ಕೆ ಸಮಾನತೆ, ಸಂವಾದ ಮತ್ತು ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಮಹತ್ವದ ಕೇಂದ್ರವಾಗಿದೆ. ಅದಕ್ಕೆ ಹೊಸ ರೂಪ ನೀಡುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ. ಇತಿಹಾಸವನ್ನು ಮರೆತವರು ಹೊಸ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ತಮ್ಮ ಸರ್ಕಾರ ಜನರ ಸರ್ಕಾರವಾಗಿದ್ದು, ಜನಸೇವೆಯೇ ತಮ್ಮ ಧ್ಯೇಯ ಎಂದು ಹೇಳಿದ ಮುಖ್ಯಮಂತ್ರಿ, ಈ ಸರ್ಕಾರ ನನ್ನದು ಅಲ್ಲ, ಜನರದು. ನಾನು ಅಧಿಕಾರಿಯಾಗಿ ಅಲ್ಲ, ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ 'ದೊರೆ' ಎಂಬ ಪದವನ್ನು ಬಳಸದೆ 'ಮುಖ್ಯಮಂತ್ರಿ' ಅಥವಾ 'ನಾಡಿನ ಸೇವಕ' ಎಂದು ಕರೆಯಿರಿ ಎಂದು ಮನವಿ ಮಾಡಿದರು.

ಅನುಭವ ಮಂಟಪಕ್ಕೆ ₹೭೪೨ ಕೋಟಿ ಕ್ರಿಯಾ ಯೋಜನೆ

ನೂತನ ಅನುಭವ ಮಂಟಪ ನಿರ್ಮಾಣಕ್ಕಾಗಿ ಸರ್ಕಾರ ₹೭೪೨ ಕೋಟಿ ಮೊತ್ತದ ಸಮಗ್ರ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದು, ಈಗಾಗಲೇ ₹೪೮೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಾಮಗಾರಿ ವಿಳಂಬವಾಗದಂತೆ ಅಗತ್ಯವಿರುವ ಎಲ್ಲ ನೆರವು ಒದಗಿಸಲಾಗುವುದು. ಬಸವಣ್ಣನವರ ಚಿಂತನೆ, ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಸಂದೇಶ ದೇಶ-ವಿದೇಶಗಳಿಗೆ ತಲುಪುವಂತೆ ಈ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande