ಆಸರೆ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಉಚಿತ ಆರೋಗ್ಯ ತಪಾಸಣೆ
ಆಸರೆ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಉಚಿತ ಆರೋಗ್ಯ ತಪಾಸಣೆ
ಕೋಲಾರ ನಗರದ ಗಣೇಶಗುಡಿ ರಸ್ತೆಯಲ್ಲಿನ ಎಸ್ಎಸ್ಎಲ್ವಿ ಸೂಪರ್ ಮಾರ್ಕೆಟ್ ಮೇಲಿನ  ಮೊದಲ ಮಹಡಿಯಲ್ಲಿರುವ ಆಸರೆ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಭಾನುವಾರ  ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಡಾ.ಬಿ.ಜಿ.ಮನೋಹರಗೌಡ ಚಾಲನೆ ನೀಡಿದರು.


ಕೋಲಾರ, ೦೬ ಜುಲೈ (ಹಿ.ಸ):

ಆ್ಯಂಕರ್ : ಬದಲಾದ ಆಹಾರ ಪದ್ದತಿ ಹಾಗೂ ವ್ಯಾಯಾಮವಿಲ್ಲದ ಜೀವನದಿಂದ ಅನೇಕ ಆರೋಗ್ಯ ಸಮಸ್ಯೆಗಳು ಹತ್ತಿರವಾಗುತ್ತಿವೆ, ಈ ನಿಟ್ಟಿನಲ್ಲಿ ಸಾರ್ವಜನಿಕರು ಕಾಲಕಾಲಕ್ಕೆ ತಪಾಸಣೆಗೆ ಒಳಗಾಗಿ ಮುನ್ನಚ್ಚರಿಕೆ ವಹಿಸಬೇಕು ಎಂದು ಆಸರೆ ಮಲ್ಟಿಸ್ಪೇಷಾಲಿಟಿ ಕ್ಲಿನಿಕ್ನ ಡಾ.ಬಿ.ಜಿ.ಮನೋಹರಗೌಡ ಕರೆ ನೀಡಿದರು.

ನಗರದ ಅರಳೇಪೇಟೆಯ ಗಣೇಶಗುಡಿ ರಸ್ತೆಯಲ್ಲಿನ ಎಸ್ಎಸ್ಎಲ್ವಿ ಸೂಪರ್ ಮಾರ್ಕೆಟ್ ಮೇಲಿನ ಮೊದಲ ಮಹಡಿಯಲ್ಲಿರುವ ಆಸರೆ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಭಾನುವಾರ ಬೆಳಗ್ಗೆ ೯ ಗಂಟೆಯಿಂದ ಸಂಜೆಯವರೆಗೂ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ, ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಸಾರ್ವಜನಿಕರಿಗೆ ಎಲ್ಲಾ ರೀತಿಯ ಆಧುನಿಕ ಚಿಕಿತ್ಸಾ ವಿಧಾನಗಳ ಸೌಲಭ್ಯಗಳಿದ್ದು, ಇದರ ಪ್ರಯೋಜನ ಪಡೆಯಿರಿ ಎಂದ ಅವರು, ಉತ್ತಮ ಆರೋಗ್ಯವಿದ್ದರೆ ಮಾತ್ರ ಉತ್ತಮ ಮನಸ್ಥಿತಿ ಸಾಧ್ಯ ಎಂದು ತಿಳಿಸಿ, ನಮ್ಮಲ್ಲಿ ವಿವಿಧ ತಜ್ಞರು ಇದ್ದು, ಇಂದು ಇಡೀ ದಿನ ಉಚಿತ ತಪಾಸಣೆ ಜತೆಗೆ ಔಷಧಿಗಳನ್ನು ಉಚಿತವಾಗ ನೀಡುತ್ತಿದ್ದೇವೆ ಎಂದರು.

ಮೊದಲು ೬೦ರ ನಂತರ ಮಧುಮೇಹ,ರಕ್ತದೊತ್ತಡ ಸಮಸ್ಯೆ ಎಂದು ಭಾವಿಸಲಾಗಿತ್ತು ಎಂದ ಅವರು, ಇದೀಗ ಯುವಕರಲ್ಲೂ ಈ ಸಮಸ್ಯೆ ಕಾಣಿಸುತ್ತಿದ್ದು, ಆತಂಕಕಾರಿಯಾಗಿದೆ, ಆದ್ದರಿಂದ ನಿಯಮಿತ ವ್ಯಾಯಮ ಮನೆಊಟ ಸೇವಿಸುವುದು ಅತಿ ಮುಖ್ಯ, ಕರಿದ ಹೊರಗಿನ ತಿಂಡಿಗಳನ್ನು ತಿನ್ನದಿರಿ, ಹಣ್ಣು, ತರಕಾರಿ ಹೆಚ್ಚು ಸೇವಿಸಿ ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲೂ ಸಹಾ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದ ಅವರು, ಅತಿಯಾದ ಆಹಾರ ಸೇವನೆ, ವ್ಯಾಯಾಮದ ಕೊರತೆ ಇಂದು ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ನಮ್ಮ ಆಸರೆ ಕ್ಲಿನಿಕ್ನಲ್ಲಿ ಮಾನವೀಯ ದೃಷ್ಟಿಯ ಸೇವೆಯನ್ನು ನೀಡಲಾಗುತ್ತಿದೆ, ಇದರ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದ ಅವರು, ಉತ್ತಮ ಆರೋಗ್ಯವಿದ್ದರೆ ಮಾತ್ರವೇ ಉತ್ತಮ ಮನಸ್ಸು, ನೆಮ್ಮದಿ ಸಾಧ್ಯ ಎಂದರು.

ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ರಕ್ತದೊತ್ತಡ, ಡಯಾಬಿಟೀಸ್ನಿಂದಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಾಗಬೇಕು ಎಂದು ಸಲಹೆ ನೀಡಿದರು.

ಅನೇಕರಿಗೆ ರಕ್ತದೊತ್ತಡ, ಡಯಾಬಿಟೀಸ್ ಇದ್ದರೂ ಅದರ ಅರಿವು ಇರುವುದಿಲ್ಲ ಮತ್ತು ತಪಾಸಣೆಗೆ ಒಳಗಾಗುವುದಿಲ್ಲ, ಇದು ಮುಂದೊಂದು ದಿನ ಮಾರಕ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ ಅವರು ಕಾಲಕಾಲಕ್ಕೆ ತಪಾಸಣೆಗೆ ಒಳಗಾಗುವ ಮೂಲಕ ಸೂಕ್ತ ಮುಂಜಾಗ್ರತೆ ಜೊತೆಗೆ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿಕೊಂಡರೆ ಈ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದು ಎಂದರು.

ಶಿಬಿರದಲ್ಲಿ ಉಚಿತ ತಪಾಸಣೆಯ ಜತೆಗೆ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿರುವ ಅವರು, ಜನರಲ್ ಪಿಸಿಷಿಯನ್, ಪೀಡಿಯಾಟ್ರಿಕ್ಸ್, ಪ್ರಸೂತಿ ಮತ್ತು ಗೈನೆಕೋಲಜಿ ಚಿಕಿತ್ಸೆ, ಇಎನ್ಟಿ, ಶ್ವಾಸಕೋಶ ಸಮಸ್ಯೆಗಳಿಗೆ, ವೈದ್ಯಕೀಯ ಗ್ಯಾಸ್ಟೊçÃಲಜಿ ಮತ್ತಿತರ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿದ್ದು, ೨೫೦ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು.

ಶಿಬಿರದಲ್ಲಿ ಉಚಿತ ಸಮಾಲೋಚನೆ ಜತೆಗೆ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಯಿತು.

ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಮನೋಹರಗೌಡ, ಡಾ.ಪ್ರವೀಣ್ ಪಿ., ಡಾ.ದೇವಿಕ ಚೆನ್ನಕೇಶವ,

ಡಾ.ಸಂಜನಾ ರೆಡ್ಡಿ, ಡಾ.ಕಾವ್ಯಶ್ರೀ, ಡಾ.ಗುರುಪ್ರಸಾದ್ ಟಿ.ಜೆ, ಡಾ.ಉಜ್ವಲ್ ಮರಿನಂಜೇಗೌಡ, ಡಾ.ಮೋಹಿತ್ ಹೆಚ್.ಎನ್. ತಪಾಸಣೆ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande