ಮಳೆಗಾಗಿ ಬಾಣಾಪುರದಲ್ಲಿ ವಿಶೇಷ ಪೂಜೆ, ಭಜನೆ
ಬಳ್ಳಾರಿ, 25 ಜುಲೈ (ಹಿ.ಸ.): ಆ್ಯಂಕರ್ : ಮಳೆಗಾಗಿ ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸಿ ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಶನಿವಾರ ವಿಶೇಷ ಪೂಜೆ ಸಲ್ಲಿಸಿ 108 ಕೊಡಗಿನ ಮೂಲಕ ಪ್ರಾರ್ಥಿಸಲಾಯಿತು. ಗ್ರಾಮಸ್ಥರು ಗ್ರಾಮದ ದ್ವಾರ ಭಾಗದಲ್ಲಿ ಇರುವ ಬುಡ್ಡೇಕಲ್ಲ
Special puja, bhajans held in Banapur for rain


Special puja, bhajans held in Banapur for rain


ಬಳ್ಳಾರಿ, 25 ಜುಲೈ (ಹಿ.ಸ.):

ಆ್ಯಂಕರ್ : ಮಳೆಗಾಗಿ ಮತ್ತು ಉತ್ತಮ ಬೆಳೆಗಾಗಿ ಪ್ರಾರ್ಥಿಸಿ ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಶನಿವಾರ ವಿಶೇಷ ಪೂಜೆ ಸಲ್ಲಿಸಿ 108 ಕೊಡಗಿನ ಮೂಲಕ ಪ್ರಾರ್ಥಿಸಲಾಯಿತು.

ಗ್ರಾಮಸ್ಥರು ಗ್ರಾಮದ ದ್ವಾರ ಭಾಗದಲ್ಲಿ ಇರುವ ಬುಡ್ಡೇಕಲ್ಲಪ್ಪನಿಗೆ 108 ಕೊಡಗಳಲ್ಲಿ ನೀರು ಹಾಕಿ ಮಳೆ ಬರಬೇಕು ಎಂದು ಪ್ರಾರ್ಥನೆ ಮಾಡಿದರು. ಭಜನೆಯನ್ನು ನೆರವೇರಿಸಿದರು.

ವೇದಮೂರ್ತಿ ನಾಗಲಿಂಗಯ್ಯ ಸ್ವಾಮಿಗಳು ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಭಜನೆಯ ಸಾನಿಧ್ಯವನ್ನು ವಹಿಸಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande