
ಕೋಲಾರ ಜುಲೈ ೨೫ (ಹಿ.ಸ):
ಆ್ಯಂಕರ್: ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕೇವಲ ಸಂಘಟನೆಯಿಂದ ಮಾತ್ರ ಸಾಧ್ಯ. ಶಿಕ್ಷಕರ ಹಿತರಕ್ಷಣೆ, ಅವರ ಶ್ರೇಯೋಭಿವೃದ್ಧಿ ಹಾಗೂ ವೃತ್ತಿಪರ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಸಂಘಟನೆಯ ಬಲದಿಂದ ಮಾತ್ರ ಸರ್ಕಾರದ ಗಮನ ಸೆಳೆದು ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿರುವುದರಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ನಿಕಟ ಪೂರ್ವ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ ಕರೆ ನೀಡಿದರು.
ಕೋಲಾರ ನಗರದ ಸ್ಕೌಟ್ ಭವನದಲ್ಲಿ ಶನಿವಾರ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ನರಸಾಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯೋಪಾದ್ಯಾಯರಾದ ಕೆ.ವಿ. ಜಗನ್ನಾಥ್ ಜಿಲ್ಲಾ ಖಜಾಂಚಿಯಾಗಿ ಬಂಗಾರಪೇಟೆಯ ಎನ್.ಟಿ.ಜಿ.ಎಂ. ಮುಖ್ಯೋಪಾಧ್ಯಯರಾದ ಟಿ.ಆರ್.ಮುನಿ ನಾರಾಯಣ ರವರಿಗೆ ಆಯ್ಕೆ ಪ್ರಮಾಣ ಪತ್ರವನ್ನು ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಆರ್.ಅನಿಲ್ ಕುಮಾರ್, ನಿವೃತ್ತ ಶಿಕ್ಷಣಾಧಿಕಾರಿ ಸಿಆರ್ ಅಶೋಕ್, ಕೋಲಾರ ತಾಲೂಕು ಸಮನ್ವಯಾಧಿಕಾರಿ ರಾಧಮ್ಮ, ನಿವೃತ್ತ ಉಪನ್ಯಾಸಕ ಮರಿಸ್ವಾಮಿ ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್