ಅಕ್ಕ ವಿಶ್ವಸಮ್ಮೇಳನದಲ್ಲಿ ಮೊದಲ ಬಾರಿಗೆ 'ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ-2026'
ಬೆಂಗಳೂರು, 24 ಜುಲೈ (ಹಿ.ಸ.): ಆ್ಯಂಕರ್:ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಅಕ್ಕ ವಿಶ್ವಸಮ್ಮೇಳನದ ಅಂಗವಾಗಿ ಇದೇ ಮೊದಲ ಬಾರಿಗೆ ''ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ-2026'' ಆಯೋಜಿಸಲಾಗಿದೆ. ಎಬಿಜಿವೈಒಆರ್ ವೆಂಚರ್ಸ್ ವತಿಯಿಂದ ಗೌರೀಶ್ ಅಕ್ಕಿ ಹಾಗೂ ದೇವೇಂದ್ರ ಬಡಿಗೇರ್ ಅವರ ನೇತೃತ್ವದಲ್
ಲೋಗೋ


ಬೆಂಗಳೂರು, 24 ಜುಲೈ (ಹಿ.ಸ.):

ಆ್ಯಂಕರ್:ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ ಅಕ್ಕ ವಿಶ್ವಸಮ್ಮೇಳನದ ಅಂಗವಾಗಿ ಇದೇ ಮೊದಲ ಬಾರಿಗೆ 'ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ-2026' ಆಯೋಜಿಸಲಾಗಿದೆ.

ಎಬಿಜಿವೈಒಆರ್ ವೆಂಚರ್ಸ್ ವತಿಯಿಂದ ಗೌರೀಶ್ ಅಕ್ಕಿ ಹಾಗೂ ದೇವೇಂದ್ರ ಬಡಿಗೇರ್ ಅವರ ನೇತೃತ್ವದಲ್ಲಿ ಈ ಚಲನಚಿತ್ರೋತ್ಸವ ನಡೆಯಲಿದೆ.

2025ರಲ್ಲಿ ಸೆನ್ಸಾರ್ ಪ್ರಮಾಣಪತ್ರ ಪಡೆದ ಕನ್ನಡ, ತುಳು, ಕೊಂಕಣಿ, ಬ್ಯಾರಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳು ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹವಾಗಿವೆ. ಸಲ್ಲಿಕೆಯಾಗುವ ಚಿತ್ರಗಳಲ್ಲಿ ಆಯ್ಕೆಯಾಗುವ 10 ಅತ್ಯುತ್ತಮ ಚಿತ್ರಗಳನ್ನು ಅಕ್ಕ ವಿಶ್ವಸಮ್ಮೇಳನದಲ್ಲಿ ಪ್ರದರ್ಶಿಸಲಾಗುತ್ತದೆ.

ಚಿತ್ರೋತ್ಸವದಲ್ಲಿ ಅತ್ಯುತ್ತಮ ಮೂರು ಚಿತ್ರಗಳಿಗೆ ನಗದು ಬಹುಮಾನ ಘೋಷಿಸಲಾಗಿದೆ. ಮೊದಲ ಅತ್ಯುತ್ತಮ ಚಿತ್ರಕ್ಕೆ ₹1 ಲಕ್ಷ, ಎರಡನೇ ಅತ್ಯುತ್ತಮ ಚಿತ್ರಕ್ಕೆ ₹50 ಸಾವಿರ ಹಾಗೂ ಮೂರನೇ ಅತ್ಯುತ್ತಮ ಚಿತ್ರಕ್ಕೆ ₹25 ಸಾವಿರ ಬಹುಮಾನ ನೀಡಲಾಗುತ್ತದೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಚಿತ್ರವನ್ನು ಪ್ರದರ್ಶಿಸಲು ಬಯಸುವ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು ತಮ್ಮ ಚಿತ್ರಗಳನ್ನು cinegannadafilmfest.org ವೆಬ್‌ಸೈಟ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande