
ಬೆಂಗಳೂರು, 13 ಜುಲೈ (ಹಿ.ಸ.):
ಆ್ಯಂಕರ್:'ಮದರ್ ಪ್ರಾಮಿಸ್' ಚಿತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ನೆಗೆಟಿವ್ ಸುದ್ದಿ ಮತ್ತು ದ್ವೇಷದ ಅಭಿಯಾನ ನಡೆಸುತ್ತಿರುವವರ ಬಗ್ಗೆ ನಟ ಡಾಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಸಿನಿಮಾ ಎಲ್ಲರಿಗೂ ಇಷ್ಟವಾಗಬೇಕು ಎಂಬ ನಿಯಮ ಇಲ್ಲ. ಕೆಲವರಿಗೆ ಸಿನಿಮಾ ಇಷ್ಟವಾಗದೇ ಇರಬಹುದು. ಆದರೆ ಅದೇ ಸಮಯದಲ್ಲಿ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಸಂತೋಷಪಟ್ಟ ಪ್ರೇಕ್ಷಕರೂ ಇದ್ದಾರೆ. ಸಿನಿಮಾ ನೋಡಿ ಪ್ರಾಮಾಣಿಕವಾಗಿ ವಿಮರ್ಶೆ ಮಾಡಿ ತಮ್ಮ ಅಭಿಪ್ರಾಯ ತಿಳಿಸುವವರಿಗೆ ನಮ್ಮ ಸ್ವಾಗತ ಎಂದು ಅವರು ಹೇಳಿದ್ದಾರೆ.
ಆದರೆ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಕೆಟ್ಟ ಪ್ರಚಾರದ ಮೂಲಕ ಹಾಳು ಮಾಡಲು ಪ್ರಯತ್ನಿಸುವುದು ಎಷ್ಟು ಸರಿ? ದ್ವೇಷದ ಅಭಿಯಾನ ನಡೆಸುವುದು ಯಾವ ಮಟ್ಟಿಗೆ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.
ಇಂತಹ ಬೆಳವಣಿಗೆ ಒಂದು ಸಿನಿಮಾಕ್ಕೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ಸಮಸ್ಯೆಯಾಗಿದೆ. ಇದೇ ಕಾರಣಕ್ಕೆ ಅನೇಕ ನಿರ್ಮಾಪಕರು ನ್ಯಾಯಾಲಯದ ಆದೇಶ ಪಡೆದು ಆನ್‌ಲೈನ್ ರೇಟಿಂಗ್‌ಗಳನ್ನು ತಡೆಯುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಮಾಣಿಕ ವಿಮರ್ಶೆಗೆ ಸದಾ ಅವಕಾಶ ಇರಲಿ. ಆದರೆ ಸಿನಿಮಾವನ್ನು ಉದ್ದೇಶಪೂರ್ವಕವಾಗಿ ಸಾಯಿಸುವ ಕೆಲಸ ಮಾಡಬೇಡಿ ಎಂದು ಡಾಲಿ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.