ಹುಟ್ಟುಹಬ್ಬದಂದೇ ಕಾರ್ಪೆಂಟರ್ ಹತ್ಯೆ; ಶ್ವಾನದ ಸಹಾಯದಿಂದ ಕೃತ್ಯದ ರಹಸ್ಯ ಭೇದಿಸಿದ ಪೊಲೀಸರು
ಮಂಡ್ಯ, 23 ಜುಲೈ (ಹಿ.ಸ.): ಆ್ಯಂಕರ್:ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಉಂಟಾದ ಕ್ಷುಲ್ಲಕ ಜಗಳಕ್ಕೆ ಯುವಕನೊಬ್ಬ ಬರ್ಬರ ಹತ್ಯೆಗೆ ಒಳಗಾಗಿದ್ದ ಪ್ರಕರಣವನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಪೊಲೀಸರು ಶ್ವಾನದಳದ ನೆರವಿನಿಂದ ಯಶಸ್ವಿಯಾಗಿ ಬಯಲಿಗೆಳೆದಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಬಂಡಿಹೊ
MANDYA-MURDER


ಮಂಡ್ಯ, 23 ಜುಲೈ (ಹಿ.ಸ.):

ಆ್ಯಂಕರ್:ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವೇಳೆ ಉಂಟಾದ ಕ್ಷುಲ್ಲಕ ಜಗಳಕ್ಕೆ ಯುವಕನೊಬ್ಬ ಬರ್ಬರ ಹತ್ಯೆಗೆ ಒಳಗಾಗಿದ್ದ ಪ್ರಕರಣವನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಪೊಲೀಸರು ಶ್ವಾನದಳದ ನೆರವಿನಿಂದ ಯಶಸ್ವಿಯಾಗಿ ಬಯಲಿಗೆಳೆದಿದ್ದಾರೆ.

ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ಕಾರ್ಪೆಂಟರ್ ರಾಕೇಶ್ ಮೃತರಾಗಿದ್ದು, ಅದೇ ಗ್ರಾಮದ ಸಹೋದ್ಯೋಗಿ ಅಂಬರೀಶ್ ಬಂಧಿತ ಆರೋಪಿಯಾಗಿದ್ದಾನೆ.

ಮೈಸೂರಿನಲ್ಲಿ ಕೆಲಸ ಮುಗಿಸಿ ಊರಿಗೆ ಮರಳುತ್ತಿದ್ದಾಗ ಸುರಿದ ಮಳೆಯಿಂದಾಗಿ ಇಬ್ಬರೂ ಕೆ.ಆರ್.ಎಸ್ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದರು. ಆ ವೇಳೆ ರಾಕೇಶ್ ಪ್ರೇಯಸಿ ಜತೆ ಫೋನ್ನಲ್ಲಿ ಮಾತನಾಡುತ್ತ ಮಲಗಿದ್ದ. ಊಟಕ್ಕೆ ಹಣ ನೀಡಲಿಲ್ಲ ಹಾಗೂ ತಕ್ಷಣ ಬರಲು ಒಪ್ಪಲಿಲ್ಲ ಎಂಬ ಆಕ್ರೋಶದಿಂದ ಕುಪಿತನಾದ ಅಂಬರೀಶ್, ರಾಕೇಶ್ ತಲೆಗೆ ಕಲ್ಲುಜ್ಜಿ ಹತ್ಯೆಗೈದು ಅಕ್ಕಿಹೆಬ್ಬಾಳು ಗ್ರಾಮಕ್ಕೆ ಪರಾರಿಯಾಗಿದ್ದ.

ತನಿಖೆ ದಾರಿ ತಪ್ಪಿಸಲು ಪ್ರೇಯಸಿ ಕಡೆಯವರೇ ಕೊಲೆ ಮಾಡಿರುವ ಕಥೆ ಕಟ್ಟಿದ್ದ.

ಆದರೆ ಸ್ಥಳದಲ್ಲಿದ್ದ ಬೈಕ್ ಹೊರತುಪಡಿಸಿ ಯಾವುದೇ ಸುಳಿವು ಸಿಗದೆ ಪೊಲೀಸರಿಗೆ ಸವಾಲಾಗಿದ್ದ ಈ ಪ್ರಕರಣದಲ್ಲಿ ಶ್ವಾನದಳ ನಿರ್ಣಾಯಕ ಪಾತ್ರ ವಹಿಸಿತು. ಘಟನಾ ಸ್ಥಳದಿಂದ ನೇರವಾಗಿ ಆರೋಪಿ ಬಳಿ ತೆರಳಿದ ಶ್ವಾನ, ಅಂಬರೀಶ್ ಬಟ್ಟೆಯಲ್ಲಿದ್ದ ರಕ್ತದ ಕಲೆ ಹಾಗೂ ಚಪ್ಪಲಿ ಗುರುತಿಸಿ ಅಸಲಿ ಕೊಲೆಗಾರನನ್ನು ಪತ್ತೆ ಮಾಡಿತು. ತಕ್ಷಣ ಕಾರ್ಯಾಚರಣೆ ನಡೆಸಿದ ಹೆಬ್ಬಗೋಡಿ/ಕೆ.ಆರ್.ಎಸ್ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande