ಮುಂದುವರೆದ ಅಮೆರಿಕಾ–ಇರಾನ್ ಸಂಘರ್ಷ
ಅಮೆರಿಕಾ–ಇರಾನ್ ಸಂಘರ್ಷ ತೀವ್ರ: ಬುಶಹರ್ ಮೇಲೆ ದಾಳಿ, ಕುವೈತ್ನಲ್ಲಿ ವಾಯು ರಕ್ಷಣಾ ವ್ಯವಸ್ಥೆ ಸಕ್ರಿಯ, ಸೌದಿ ತೈಲ ಟ್ಯಾಂಕರ್ಗಳ ಮೇಲೆ ಹೂತಿ ದಾಳಿ
अमेरिका 24 मार्च को भी ईरान के बुशहर पर हमला कर चुका है। तब अमेरिकी सेना ने बुशहर परमाणु ऊर्जा संयंत्र को निशाना बनाया था। फोटो - फाइल


ಟೆಹ್ರಾನ್/ವಾಷಿಂಗ್ಟನ್/ಕುವೈತ್ ನಗರ/ಸನಾ, ಜುಲೈ 23 (ಹಿ.ಸ):

ಆ್ಯಂಕರ್:

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ. ಅಮೆರಿಕವು ಇರಾನ್‌ನ ದಕ್ಷಿಣ ಕರಾವಳಿ ನಗರ ಬುಶಹರ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ನಗರದಲ್ಲಿ ಇರಾನ್‌ನ ಏಕೈಕ ನಾಗರಿಕ ಅಣು ವಿದ್ಯುತ್ ಸ್ಥಾವರವಿರುವುದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

ಅಮೆರಿಕದ ಮಧ್ಯ ಕಮಾಂಡ್ (ಸೆಂಟ್‌ಕಾಂ) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಇರಾನ್‌ನ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿಗಳನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದೆ. ಸಮುದ್ರ ಮಾರ್ಗದಲ್ಲಿ ನಾಗರಿಕ ಹಾಗೂ ವಾಣಿಜ್ಯ ಹಡಗುಗಳಿಗೆ ಇರಾನ್‌ನಿಂದ ಉಂಟಾಗುತ್ತಿರುವ ಬೆದರಿಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಇದಕ್ಕೆ ಪ್ರತಿಯಾಗಿ ಇರಾನ್ ತನ್ನ ಮಿತ್ರ ರಾಷ್ಟ್ರಗಳತ್ತ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಉಡಾಯಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕುವೈತ್ ದೇಶಾದ್ಯಂತ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಡ್ರೋನ್‌ಗಳನ್ನು ಹೊಡೆದುರುಳಿಸುವ ವೇಳೆ ಸ್ಫೋಟದ ಶಬ್ದ ಕೇಳಿಬರಬಹುದು, ಜನರು ಆತಂಕಪಡಬೇಕಿಲ್ಲ ಎಂದು ಕುವೈತ್ ಸೇನೆ ಮನವಿ ಮಾಡಿದೆ.

ಇರಾನ್‌ನ ಹಿರಿಯ ನಾಯಕ ಮೊಹಮ್ಮದ್ ಬಾಘೇರಿ ಘಾಲಿಬಾಫ್, ಇರಾನ್‌ಗೆ ಭದ್ರತಾ ಭರವಸೆ ನೀಡದಿದ್ದರೆ ಈ ಪ್ರದೇಶದಲ್ಲಿ ಸ್ಥಿರತೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಜೂನ್ 27ರಿಂದ ನಡೆದ ಅಮೆರಿಕದ ದಾಳಿಗಳಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದಾರೆ.

ಇದರ ನಡುವೆ, ಯೆಮೆನ್‌ನ ಇರಾನ್ ಬೆಂಬಲಿತ ಹೂತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸೌದಿ ಅರೇಬಿಯಾದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಎನ್ಸೆಲಿಯಾ ಮತ್ತು ಲೈಲಾ ಹೆಸರಿನ ಟ್ಯಾಂಕರ್‌ಗಳು ಗುರಿಯಾಗಿದ್ದವು ಎಂದು ಹೂತಿ ಸಂಘಟನೆ ತಿಳಿಸಿದೆ. ಸೌದಿ ಅರೇಬಿಯಾದ ಅಲ್-ಶುಕೈಕ್ ಸಮೀಪದ ಸಮುದ್ರ ಪ್ರದೇಶದಲ್ಲಿ ತೈಲ ಟ್ಯಾಂಕರ್ ಮೇಲೆ ದಾಳಿ ನಡೆದಿರುವುದನ್ನು ಯುನೈಟೆಡ್ ಕಿಂಗ್‌ಡಮ್‌ನ ಸಮುದ್ರ ವ್ಯಾಪಾರ ಕಾರ್ಯಾಚರಣೆ ಸಂಸ್ಥೆಯೂ ದೃಢಪಡಿಸಿದೆ.

ಈ ಬೆಳವಣಿಗೆಗಳಿಂದ ಹೋರ್ಮುಜ್ ಜಲಸಂಧಿ ಹಾಗೂ ಪಶ್ಚಿಮ ಏಷ್ಯಾದ ಭದ್ರತಾ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಜಾಗತಿಕ ತೈಲ ಸರಬರಾಜು ಮತ್ತು ಸಮುದ್ರ ವಾಣಿಜ್ಯದ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande