ಹಸು ಮೃತಪಟ್ಟ ರೈತರಿಗೆ ಕೋಮುಲ್ ನಿಂದ ಚೆಕ್ ವಿತರಣೆ
ಹಸು ಮೃತಪಟ್ಟ ರೈತರಿಗೆ ಕೋಮುಲ್ ನಿಂದ ಚೆಕ್ ವಿತರಣೆ
ಪಶುಪಾಲಕರಿಗೆ ಕೋಲಾರ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಪರಿಹಾರದ ಚೆಕ್ಗಳನ್ನು ವಿತರಿಸಿದರು.


ಕೋಲಾರ, ೨೩ ಜುಲೈ (ಹಿ.ಸ):

ಆ್ಯಂಕರ್ : ತಾಲೂಕಿನ ವೇಮಗಲ್ ಹಾಗೂ ಸುಗಟೂರು ಹೋಬಳಿಯ ಸುಮಾರ ೧೭ ಹಾಲು ಉತ್ಪಾದಕ ರೈತರ ಮೃತಪಟ್ಟ ಹಸುಗಳಿಗೆ ವಿಮೆ ಪರಿಹಾರದ ಚೆಕ್ಗಳನ್ನು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ಗುರುವಾರ ತಮ್ಮ ನಿವಾಸದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರೈತರು ಜೀವನೋಪಾಯಕ್ಕಾಗಿ ಹೈನುಗಾರಿಕೆಯನ್ನು ಹೆಚ್ಚಾಗಿ ಅವಲಂಬಿಸಿದ್ದು, ಪ್ರತಿನಿತ್ಯ ಗುಣಮಟ್ಟದ ಹಾಲನ್ನು ಡೇರಿಗೆ ಪೂರೈಸುವ ಮೂಲಕ ತಮ್ಮ ಕುಟುಂಬದ ಬದುಕು ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವಾಗಲಿದೆ ಎಂದರು.

ಹಾಲು ಉತ್ಪಾದನೆಯಿಂದ ಕೋಮುಲ್ನಲ್ಲಿ ಸಾವಿರಾರು ಸಾವಿರಾರು ಉದ್ಯೋಗ ಸಿಕ್ಕಿದ್ದು, ಹಾಲು ಉತ್ಪಾದಕರ ಮಕ್ಕಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯಗಳನ್ನೂ ಒಕ್ಕೂಟದಿಂದ ನೀಡಲಾಗುತ್ತಿದೆ ರೈತರು ತಮ್ಮ ಹಸುಗಳಿಗೆ ಕಾಲಕಾಲಕ್ಕೆ ವಿಮೆ ಮಾಡಿಸಬೇಕು. ಆಕಸ್ಮಿಕವಾಗಿ ಹಸು ಮೃತಪಟ್ಟರೆ ವಿಮೆ ಯೋಜನೆಯಡಿ ಹಾಲು ಒಕ್ಕೂಟದಿಂದ ಹೊಸ ಹಸು ಖರೀದಿಸಲು ಆರ್ಥಿಕ ನೆರವು ದೊರೆಯುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ ಉಪ ವ್ಯವಸ್ಥಾಪಕರಾದ ಡಾ.ಮಹೇಶ್, ಅಶ್ವಕ್ ಅಹಮದ್ ವಿಸ್ತರಣಾಧಿಕಾರಿ ಸಮೀರ್ ಪಾಷ ಸೇರಿದಂತೆ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ರೈತರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande