ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೋರಿ ಉಪ ಮುಖ್ಯಮಂತ್ರಿಗಳಿಗೆ ಮನವಿ
ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಕೋರಿ ಉಪ ಮುಖ್ಯಮಂತ್ರಿಗಳಿಗೆ ಮನವಿ
ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಲು ಕೋರಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ರವರಿಗೆ ಕರ್ನಾಟಕ ದಲಿತ ಸಂಘಷÀð ಸಮಿತಿಯ ಸದಸ್ಯರು ಮನವಿ ಸಲ್ಲಿಸಿದರು.


ಕೋಲಾರ, ೨೩ ಜುಲೈ (ಹಿ.ಸ):

ಆ್ಯಂಕರ್ : ರಾಜ್ಯದಲ್ಲಿನ ವಿವಿಧ ಭೂ ಸಮಸ್ಯೆಗಳು ಮತ್ತು ನಿವೇಶನ ರಹಿತ ಬಡವರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ನಿಯೋಗದಿಂದ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಮಾಲೂರು ತಾಲೂಕಿನ ಹುಲಿಮಂಗಲ ಹೊಸಕೋಟೆ ಗ್ರಾಮದ ಸರ್ವೆ ನಂಬರ್ ೨೧೨ ಮತ್ತು ೨೧೩ರಲ್ಲಿನ ಗೋಮಾಳ ಜಮೀನು, ಸರ್ವೆ ನಂಬರ್ ೪೧ರಲ್ಲಿ ೪೮ ಎಕರೆ, ಸರ್ವೆ ನಂಬರ್ ೪೨ರಲ್ಲಿ ೪೮ ಎಕರೆ ಹಾಗೂ ಸರ್ವೆ ನಂಬರ್ ೪೯ರಲ್ಲಿ ೫೦ ಎಕರೆ ಸರ್ಕಾರಿ ಗೋಮಾಳ ಜಾಗದ ರಕ್ಷಣೆಗಾಗಿ ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೋರಾಟದ ಕುರಿತು ನಿಯೋಗವು ಗಮನ ಸೆಳೆಯಿತು.

ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿ ಮಂಗಸಂದ್ರ ಗ್ರಾಮದ ಸರ್ವೆ ನಂಬರ್ ೯೦ ಮತ್ತು ೯೪ ಹಾಗೂ ಚೆಲುವನಹಳ್ಳಿ ಸರ್ವೆ ನಂಬರ್ ೧೦ರಲ್ಲಿನ ಸರ್ಕಾರಿ ಗೋಮಾಳ ಜಾಗವನ್ನು ನಂಬರ್ ೫೭ರಡಿ ಅರ್ಜಿ ಸಲ್ಲಿಸಿರುವ ಭೂಹೀನ ಬಡವರಿಗೆ ತಕ್ಷಣ ಮಂಜೂರು ಮಾಡಬೇಕೆಂದು ಆಗ್ರಹಿಸಲಾಯಿತು. ಇದೇ ವೇಳೆ ಕೋಲಾರ ತಾಲೂಕಿನ ಮಡೇರಹಳ್ಳಿ ಹಾಗೂ ಚೆಲುವನಹಳ್ಳಿ ಗ್ರಾಮಗಳಲ್ಲಿ ಒತ್ತುವರಿಯಾಗಿರುವ ಸರ್ಕಾರಿ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಲಾಯಿತು.

ಮಂಗಸಂದ್ರ ಗ್ರಾಮದ ಸರ್ವೆ ನಂಬರ್ ೩ರಲ್ಲಿನ ೨೦ ಎಕರೆ ಸರ್ಕಾರಿ ಗೋಮಾಳ ಜಾಗದಲ್ಲಿ ಬಡವರಿಗೆ ಉಚಿತ ನಿವೇಶನ ಒದಗಿಸುವುದು ಹಾಗೂ ಅದೇ ಗ್ರಾಮದ ಸರ್ವೆ ನಂಬರ್ ೯೦ರ ಗೋಮಾಳದಲ್ಲಿ 'ಎನ್ ಲೈಟ್ ಎಜುಕೇಶನ್ ಸೇವಾ ಟ್ರಸ್ಟ್' ವತಿಯಿಂದ ಬುದ್ಧ ವಿಹಾರ ಮತ್ತು ವಿದ್ಯಾಭವನ ನಿರ್ಮಿಸಲು ಜಮೀನು ಮಂಜೂರು ಮಾಡಲು ಮನವಿ ಮಾಡಲಾಯಿತು. ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿ ಕಾಮಸನಹಳ್ಳಿ ಗ್ರಾಮದ ಸರ್ವೆ ನಂಬರ್ ೧೫ರಲ್ಲಿ ಶ್ರೀ ಕೃಷ್ಣ ಸಾಯಿ ಆಶ್ರಮದ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ೧೦ ಎಕರೆ ಜಮೀನು ಹಾಗೂ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿ ಪಂಚನಹಳ್ಳಿ ಗ್ರಾಮದ ಸರ್ವೆ ನಂಬರ್ ೭೪ರಲ್ಲಿ ಬುದ್ಧ ವಿಹಾರ ಹಾಗೂ ರೈತರಿಗೆ ನಿವೇಶನ ನೀಡುವಂತೆ ಕೋರಲಾಯಿತು. ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ಸರ್ವೆ ನಂಬರ್ ೨೪ರಲ್ಲಿ ತೋಟ ಮುನಿಯಪ್ಪ ಅವರ ಹೆಸರಿಗೆ ಮಂಜೂರಾಗಿರುವ ಜಮೀನಿನ ಸಾಗುವಳಿ ಮತ್ತು ಡಿಮ್ಯಾಂಡ್ ಪತ್ರಗಳನ್ನು ಶೀಘ್ರವೇ ವಿತರಿಸಬೇಕೆಂದು ಒತ್ತಾಯಿಸಲಾಯಿತು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಅಧ್ಯಕ್ಷ ಡಾ. ಅಶ್ವಥ್ ಅಂತ್ಯಜ, ಖ್ಯಾತ ಉದ್ಯಮಿ ಸುರೇಶ್ ರಾಜ್, ರಾಜ್ಯ ಸಂಯೋಜಕಿ ಸಾಹಿತಿ ಎಸ್.ಸಿ. ಶೈಲಜಾ, ಸಾಹಿತಿ ಹಾಗೂ ಚಿಂತಕ ಚಂದ್ರ, ಸಮಿತಿ ಸದಸ್ಯ ಮಾಸ್ತಿ ಜಗನ್ನಾಥ್, ವಿಭಾಗೀಯ ಸಂಯೋಜಕ ನಂಜುಂಡಪ್ಪ ಪಾಸ್ವಾನ್ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande