
ಕೋಲಾರ, ೨೧ ಜುಲೈ (ಹಿ.ಸ):
ಆ್ಯಂಕರ್ : ಮೇಡಿತಂಬಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಪಾರದರ್ಶಕ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ ಕೋಮುಲ್ ನಿರ್ದೇಶಕಿ ಮಹಾಲಕ್ಷಿö್ಮ ಪ್ರಸಾದ್ಬಾಬು ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಸಂಪೂರ್ಣ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು.
ಕೋಲಾರ ತಾಲ್ಲೂಕಿನ ಮೇಡಿತಂಬಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ೨೦೨೫ ೨೬ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈನೋದ್ಯಮದಲ್ಲಿ ಮಹಿಳೆಯರ ಪಾಲು ಅಧಿಕವಾಗಿದೆ, ಹಸುವಿಗೆ ಮೇವು ಹಾಕುವುದರಿಂದ ಹಸು ತೊಳೆದು ಹಾಲು ಕರೆಯುವವರೆಗೂ ಹೆಣ್ಣು ಮಕ್ಕಳ ಶ್ರಮವಿದೆ. ಮಹಿಳೆಯರು ಸಹಕಾರ ಸಂಘವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗಬಲ್ಲರು ಎಂಬುದಕ್ಕೆ ಮೇಡಿತಂಬಿಹಳ್ಳಿ ಸಂಘ ಉದಾಹರಣೆಯಾಗಿದೆ. ಯಾವುದೇ ಅವ್ಯವಹಾರಗಳಿಗೆ ಅವಕಾಶವಿಲ್ಲದಂತೆ ಅತ್ಯುತ್ತಮವವಾಗಿ ನಡೆಸಿಕೊಂಡು ಹೋಗುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು.
ಸಂಘ ಶೇಕಡ ೧೨ ಲಾಭಾಂಶ ಹೊಂದಿದ್ದು ಅಂದರೆ ಪ್ರಸಕ್ತ ಸಾಲಿಗೆ ೧,೨೩,೬೭೫ ಗಳು ಲಾಭಗಳಿಸಿರುತ್ತದೆ ಸಂಘವನ್ನು ೨೦೨೨ ರಲ್ಲಿ ಪ್ರಾರಂಭಿಸಿ ದಿನಕ್ಕೆ ೧೧೦ ಲೀಟರ್ ಹಾಲು ಶೇಖರಿಸುತ್ತಿದ್ದು ಈಗ ೨೦೨೬ ನೇ ಸಾಲಿನಲ್ಲಿ ಪ್ರತಿದಿನಕ್ಕೆ ೩೮೦ ಲೀಟರ್ ಹಾಲು ಶೇಖರಿಸುವ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿರುತ್ತದೆ ಎಂಬ ಮಾಹಿತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘ ಲಾಭದಾಯಕವಾಗಿರಲು ಹಾಲಿನ ಗುಣಮಟ್ಟ ಅತಿ ಮುಖ್ಯವಾಗಿದೆ ಎಂದ ಅವರು, ಮಹಿಳೆಯರು ಗುಣಮಟ್ಟದ ಹಾಲನ್ನು ಸಂಘಕ್ಕೆ ಒದಗಿಸಿ, ಇದರಿಂದ ಸಂಘ ಮತ್ತಷ್ಟು ಬಲಿಷ್ಟವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸುನೀತಾ ಮಾತನಾಡಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಗೋಪಾಲಪ್ಪ ಮತ್ತು ಗ್ರಾಮದ ಮುಖ್ಯಸ್ಥರಾದ ಸುಬ್ಬಣ್ಣ ನೇತೃತ್ವದಲ್ಲಿ ಮಹಿಳಾ ಹಾಲು ಉತ್ಪಾದಕರ ಸಂಘಕ್ಕೆ ೫೦-೫೫ರ ಖಾಲಿನಿವೇಶನವನ್ನು ಮಂಜೂರು ಮಾಡಿಸಿಕೊಟ್ಟಿರುತ್ತಾರೆ. ಸದರಿ ನಿವೇಶನದಲ್ಲಿ ಪ್ರಸಕ್ತ ಸಾಲಿಗೆ ೨೫ ಲಕ್ಷಗಳ ಅಂದಾಜಿನಲ್ಲಿ ಉತ್ತಮ ಸುಸಜ್ಜಿತವಾದ ಮಹಿಳಾ ಹಾಲು ಉತ್ಪಾದಕರ ಸಂಘದ ಕಟ್ಟಡವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ಇದಕ್ಕೆ ಅನುದಾನವನ್ನು ಒಕ್ಕೂಟದ ಅಧಿಕಾರಿಗಳಿಗೆ ಮತ್ತು ನಿರ್ದೇಶಕರು ಒದಗಿಸಿಕೊಳ್ಳಲು ಕೋರಲಾಯಿತು. ಸಂಘವನ್ನು ಸಮರ್ಥವಾಗಿ ಮುನ್ನಡೆಸಲು ಸಂಘದ ಎಲ್ಲಾ ನಿರ್ದೇಶಕರೂ ಸಹಕಾರ ನೀಡಿದ್ದಾರೆ ಎಂದ ಅವರು, ನಾವೆಲ್ಲಾ ಒಂದೇ ರೀತಿ ಸಂಘಟಿತಗಾಗಿ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ, ಇಲ್ಲಿ ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲ ಎಂದರು.
ಕೋಲಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಮಹೇಶ್ ಮಾತನಾಡಿ, ಮಹಿಳಾ ಸಹಕಾರ ಸಂಘ ಅತ್ಯಂತ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಈ ಸಂಘ ಇದೀಗ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡಕ್ಕೆ ಒಕ್ಕೂಟದಿಂದ ಪೂರ್ಣ ಪ್ರಮಾಣದ ಅನುದಾನವನ್ನು ಒದಗಿಸಲಾಗುವುದೆಂದು ತಿಳಿಸಿದರು.
ಸಭೆಯಲ್ಲಿ ೨೦೨೫-೨೬ನೇ ಸಾಲಿನ ಆಡಿಟ್ ವರದಿಯ ಜಮಾ,ಖರ್ಚು ಲಾಭ,ನಷ್ಟ ಜವಾಬ್ದಾರಿ ತಃಖ್ತೆಗಳನ್ನು ಓದಿ ದಾಖಲಿಸಲಾಯಿತು ಮತ್ತು ಮುಂದಿನ ವರ್ಷದ ಬಜೆಟ್ಗೆ ಅಂಗೀಕಾರ ನೀಡಲಾಯಿತು.
ಸಭೆಯಲ್ಲಿ ಕೋಮುಲ್ ಉಪ ವ್ಯವಸ್ಥಾಪಕರಾದ ಆರ್.ವಿಜಯಲಕ್ಷಿ÷್ಮ, ಡಾಕ್ಟರ್ ಮಹೇಶ್ ದತ್ತಿ, ಪಶುಪಾಲನಾ ಇಲಾಖೆಯ ನಳಿನಿ ಮುಖ್ಯ ಪಶು ವೈದ್ಯಧಿಕಾರಿ ಅಶ್ರಫ್ ಅಹಮದ್, ವಿಸ್ತರಣಾಧಿಕಾರಿಗಳಾದ ನಾಗಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಗೋಪಾಲಪ್ಪ, ಸಂಘದ ಉಪಾಧ್ಯಕ್ಷೆ ಹೇಮ, ನಿರ್ದೇಶಕರಾದ ಗೀತಾ,ಪಾರ್ವತಮ್ಮ, ಮಂಜುಳಾ, ಸವಿತ್ಮಮ, ಸಾವಿತ್ರಮ್ಮ, ಜಿ.ಮಾಲಾ, ರತ್ನö್ಮಮ, ನೀಲಮ್ಮ, ರತ್ನಮ್ಮ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್