
ಗದಗ, 21 ಜುಲೈ (ಹಿ.ಸ.)
ಆ್ಯಂಕರ್:- 2026-27 ರ ಮುಂಗಾರು ಹಂಗಾಮಿಗಾಗಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಅಧಿಸೂಚಿತ ಬೆಳೆಗಳಿಗೆ ನೋಂದಣಿ ಮಾಡಿಸಲು ಸರಕಾರವು ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಅಧಿಸೂಚಿತ ಬೆಳೆಗೆ ಬೆಳೆ ಸಾಲ ಪಡೆದ ರೈತರಿಗೆ ಈ ಯೋಜನೆಯು ಕಡ್ಡಾಯವಾಗಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಇಂಡೀಸ್ ಜನರಲ್ ಇನ್ಸೂರನ್ಸ್ ಕಂಪನಿ ಅನುಷ್ಠಾನ ವಿಮಾ ಸಂಸ್ಥೆಯಾಗಿ ಆಯ್ಕೆಯಾಗಿರುತ್ತದೆ. ಬೆಳೆ ವಿಮೆ ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ವರದಿ ಹೊಲಿಸಿ ಪರಿಗಣಿಸಲಾಗುವುದು. ಪಾಳು/ಕಾಟವು ಪ್ರದೇಶವೆಂದು ಬೆಳೆ ಸಮೀಕ್ಷೆಯ ವರದಿಯಲ್ಲಿ ಕಂಡುಬಂದ ಸರ್ವೇ ನಂಬರಗಳ ಬೆಳೆ ವಿಮೆಯಡಿ ನೊಂದಾಯಿಸಿದ ಪ್ರಸ್ತಾವನೆಗಳನ್ನು ಪರಿಗಣಿಸುವುದಿಲ್ಲ. ಬೆಳೆ ಸಮೀಕ್ಷೆಯ ವರದಿಯಲ್ಲಿ ದಾಖಲಾದ ಬೆಳೆಯ ಹೆಸರಿನ ಜೊತೆಗೆ ಬೆಳೆ ಸಮೀಕ್ಷೆ ವರದಿಯಲ್ಲಿ ದಾಖಲಾದ ಬೆಳೆ ವಿಸ್ತಿರ್ಣವನ್ನು ಪರಿಗಣಿಸಲಾಗುವುದು.
ಹೆಸರು(ಮಳೆಯಾಶ್ರಿತ), ಹತ್ತಿ(ಮಳೆಯಾಶ್ರಿತ ಮತ್ತು ನೀರಾವರಿ) ಈ ಬೆಳೆಗಳಿಗೆ ಬೆಳೆ ವಿಮಾ ಕಂತು ತುಂಬಲು ಜುಲೈ 22 ಕೊನೆಯ ದಿನವಾಗಿರುತ್ತದೆ (ಸಾಲ ಪಡೆದ ರೈತರಿಗೆ ಮಾತ್ರ) ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹಾಗೂ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP