ಯಲ್ದೂರು ಹೋಬಳಿ ಸರ್ಕಾರಿ ಆಸ್ಪತ್ರೆಗೆ ಶಾಶ್ವತ ಆಂಬುಲೆನ್ಸ್ಗೆ ಸಾರ್ವಜನಿಕರ ಮನವಿ
ಯಲ್ದೂರು ಹೋಬಳಿ ಸರ್ಕಾರಿ ಆಸ್ಪತ್ರೆಗೆ ಶಾಶ್ವತ ಆಂಬುಲೆನ್ಸ್ಗೆ ಮತ್ತೆ ಸಾರ್ವಜನಿಕರ ಮನವಿ
ಶ್ರೀನಿವಾಸಪು ತಾಲ್ಲೂಕಿನ ಯಲ್ದೂರು ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.


ಕೋಲಾರ,೨೧ ಜುಲೈ (ಹಿ.ಸ):

ಆ್ಯಂಕರ್ : ಶ್ರೀನಿವಾಸಪುರ ತಾಲೂಕಿನ ಯಲ್ದೂರು ಹೋಬಳಿ ಸರ್ಕಾರಿ ಆಸ್ಪತ್ರೆಗೆ ಶಾಶ್ವತ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಯಲ್ದೂರು ಹೋಬಳಿ ಸಾರ್ವಜನಿಕರು ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರಿಗೆ ಎರಡನೇ ಬಾರಿ ಮರು ಮನವಿ ಸಲ್ಲಿಸಿದರು.

ಮನವಿಯಲ್ಲಿ, ಸುಮಾರು ೪೦ ಸಾವಿರಕ್ಕೂ ಅಧಿಕ ಜನರು ಅವಲಂಬಿಸಿರುವ ಯಲ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಶಾಶ್ವತ ಆಂಬುಲೆನ್ಸ್ ಇಲ್ಲದಿರುವುದರಿಂದ ತುರ್ತು ಆರೋಗ್ಯ ಸೇವೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಲಾಗಿದೆ. ೧೦೮ ಆಂಬುಲೆನ್ಸ್ ಕೆಲವೊಮ್ಮೆ ೪೫ ರಿಂದ ೬೦ ನಿಮಿಷಗಳವರೆಗೆ ತಡವಾಗಿ ತಲುಪುತ್ತಿರುವುದರಿಂದ ರೋಗಿಗಳ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಯಲ್ದೂರು ಹೋಬಳಿಯ ಯಲ್ದೂರು ಸರ್ಕಾರಿ ಆಸ್ಪತ್ರೆಗೆ ಶೀಘ್ರದಲ್ಲೇ ಶಾಶ್ವತ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಎಸ್ಎಂ ರಾಮು, ಅರವಿಂದ ವಿ, ಶ್ರೀನಿವಾಸ ಆರ್, ರೆಬಲ್ ಮುರಳಿ, ಖಿಗಿ ಮೆಕಾನಿಕ್ ಮಂಜುನಾಥ , ಜನಾರ್ಧನ ಬಾಬು, ಆಚಂಪಲ್ಲಿ ಎಲ್. ಪ್ರವೀಣ್ ಕುಮಾರ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande