ಮೌಲ್ಯಾಧಾರಿತ ಶಿಕ್ಷಣ ನೀಡಲು ಬಿಎನ್ಯು ಕುಲಪತಿ ಪ್ರೊ. ಬಿ.ಕೆ.ರವಿ ಕರೆ
ಮೌಲ್ಯಾಧಾರಿತ ಶಿಕ್ಷಣ ನೀಡಲು ಬಿಎನ್ಯು ಕುಲಪತಿ ಪ್ರೊ. ಬಿ.ಕೆ.ರವಿ ಕರೆ
ಕೋಲಾರ ತಾಲ್ಲೂಕಿನ ಬೆಳ್ಳೂರಿನ ಶ್ರೀಮತಿ ರಮಾಮಣಿ ಸುಂದರ ರಾಜ ಅಯ್ಯಂಗಾರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭದಲ್ಲಿ :ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಬಾಗಿಯಾಗಿದ್ದರು.


ಕೋಲಾರ, ೧೫ ಜುಲೈ (ಹಿ.ಸ):

ಆ್ಯಂಕರ್ : ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಭರಾಟೆಗೆ ಸಿಕ್ಕಿ ಹಾಕಿಕೊಂಡಿದೆ, ಹಿಂದೆ ವಿಷಯ ಸಂಗ್ರಹಕ್ಕೆ ಕಷ್ಟವಿತ್ತು ಆದರೆ ಇಂದು ಎಲ್ಲಾ ಮಾಹಿತಿ ಕಣ್ಣ ಮುಂದೇಯೇ ಸಿಗುತ್ತಿದೆ, ವಿಧ್ಯಾರ್ಥಿಗಳಿಗೆ ಸುಲಭವಾಗಿ ಸಿಗುತ್ತಿರುವ ಈ ತಂತ್ರಜ್ಞಾನ ಶಿಕ್ಷಕರ ಬೋಧನೆಯ ಜತೆಗೆ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ ಇರಬೇಕು ಆದರೆ ಅದೇ ಭ್ರಮೆಯಲ್ಲಿ ಮುಳುಗಿದರೆ ಅಪಾಯ ಖಚಿತ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ ರವಿ ಎಚ್ಚರಿಸಿದರು.

ತಾಲ್ಲೂಕಿನ ಬೆಳ್ಳೂರಿನ ಶ್ರೀಮತಿ ರಮಾಮಣಿ ಸುಂದರ ರಾಜ ಅಯ್ಯಂಗಾರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ-೨೦೨೬ಕ್ಕೆ ಚಾಲನೆ ನೀಡಿ, ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಇಂದು ತಂತ್ರಜ್ಞಾನದತ್ತ ಹೆಜ್ಜೆ ಹಾಕಿರುವ ಯುವಜನತೆ ಕೃತಕ ಬುದ್ದಿಮತ್ತೆ ಹಾಗೂ ತಂತ್ರಜ್ಞಾನದ ಭ್ರಮೆಯಲ್ಲಿ ಕಲಿಕೆ ಸಂಸ್ಕಾರ,ನೈತಿಕ ಮೌಲ್ಯಗಳಿಂದ ದೂರವಾಗುವುದನ್ನು ತಪ್ಪಿಸಲು ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ. ಶಿಕ್ಷಣ ಸಂಸ್ಥೆ ಆರಂಭಿಸುವುದು ಅಷ್ಟು ಸುಲಭದ ಮಾತಲ್ಲ, ಇಂದು ಬದ್ದತೆ, ಕಲಿಸುವ ಹೊಣೆಗಾರಿಕೆ, ಗುಣಮಟ್ಟದ ಶಿಕ್ಷಣ ನೀಡುವ ಕೌಶಲ್ಯಭರಿತ ಶಿಕ್ಷಕ ವರ್ಗ, ಅಗತ್ಯ ಮೂಲಸೌಲಭ್ಯಗಳನ್ನು ಒಟ್ಟುಗೂಡಿಸಿಕೊಳ್ಳುವುದು ಕಷ್ಟದ ಕೆಲಸ ಇಂತಹ ಸಂದರ್ಭದಲ್ಲಿ ಇಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಶ್ಲಾಘಿಸಿದರು.

ಮಕ್ಕಳ ಸಾಧನೆಯನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸವು ಮುಂದಿನ ಪೀಳಿಗೆಗೆ ಹಾಗೂ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಂತೆ ಎಂದ ಅವರು, ಇಂತಹ ಪದವಿ ಪ್ರಮಾಣ ಕಾರ್ಯಕ್ರಮಗಳಿಂದಾಗಿ ನಾವೂ ಸಾಧಕರಂತೆ ಆಗಬೇಕು ಎಂದು ನಿರ್ಧರಿಸಿ ಪ್ರಯತ್ನಿಸುವ ಮನಸ್ಥಿತಿ ಮಕ್ಕಳಲ್ಲಿ ಬೆಳೆಸಿದಂತೆ ಆಗುತ್ತದೆ. ತಂತ್ರಜ್ಞಾನ ಭರಾಟೆ ವೈಭವಿಕರಣ ಅಳವಡಿಸಿಕೊಳ್ಳಲು ನೀವು ಎಷ್ಟು ತಾಳ್ಮೆ ಬಳಸತ್ತೀರಿ ಎಂಬುದರ ಮೇಲೆ ಮುಂದಿನ ಭವಿಷ್ಯ ನಿಂತಿದೆ, ಶ್ರಮವಿಲ್ಲದೇ ಏನೇನ್ನಾದರೂ ಸಾಧಿಸಬಹುದು ಎಂದರೆ ಸಾಧ್ಯವಿಲ್ಲ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಡೀನ್ ಡಾ. ಎಸ್. ಮುರಳಿಧರ್ ಮಾತನಾಡಿ, ಪದವಿ ಶಿಕ್ಷಣದ ವಿಧಾನವೂ ಬದಲಾಗುತ್ತಿದೆ, ಪದವಿ ಜತೆಗೆ ಕೌಶಲ್ಯವನ್ನು ರೂಪಿಸಿಕೊಂಡಾಗ ಮಾತ್ರವೇ ನಿಮ್ಮ ಜೀವನದ ಹಾದಿ ಸುಗಮವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಕೆಎಸ್ಎಸ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಶರಣ್ ಕುಮಾರ್ ಆರ್. ಮಾತನಾಡಿ, ಟ್ರಸ್ಟ್ ಉಚಿತ ಶಿಕ್ಷಣದ ಧ್ಯೇಯ ಹೊಂದಿದೆ ಜತೆಗೆ ಈ ಭಾಗದ ಗ್ರಾಮೀಣ ಜನತೆಗೆ ಉಚಿತ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿದೆ ಮತ್ತು ಯೋಗ ಜೀವನದ ಪಾಠ ಕಲಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಛಾಯಾದೇವಿ, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande