ಪುಣೆ ಕಟ್ಟಡ ಕುಸಿತ ದುರಂತ: 9 ಮಂದಿ ಸಾವು; ಮೃತರ ಕುಟುಂಬಕ್ಕೆ ₹40 ಲಕ್ಷ ಪರಿಹಾರ
ಮುಂಬಯಿ, 12 ಜುಲೈ (ಹಿ.ಸ.): ಆ್ಯಂಕರ್: ಪುಣೆ ಜಿಲ್ಲೆಯ ಮೋಶಿ ಪ್ರದೇಶದಲ್ಲಿರುವ ''ವೇಸ್ಟ್ ಟು ಎನರ್ಜಿ'' ಯೋಜನೆಯ ಆಡಳಿತ ಕಟ್ಟಡ ಕುಸಿತ ಪ್ರಕರಣದಲ್ಲಿ 83 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಒಟ್ಟು 9 ಕಾರ್ಮಿಕರು ಮೃತಪಟ್ಟಿದ್ದಾರೆ. ಇದೇ ವೇಳೆ 9 ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿ
ಪುಣೆ ಘಟನಾ ಸ್ಥಳ


ಮುಂಬಯಿ, 12 ಜುಲೈ (ಹಿ.ಸ.):

ಆ್ಯಂಕರ್:

ಪುಣೆ ಜಿಲ್ಲೆಯ ಮೋಶಿ ಪ್ರದೇಶದಲ್ಲಿರುವ 'ವೇಸ್ಟ್ ಟು ಎನರ್ಜಿ' ಯೋಜನೆಯ ಆಡಳಿತ ಕಟ್ಟಡ ಕುಸಿತ ಪ್ರಕರಣದಲ್ಲಿ 83 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಒಟ್ಟು 9 ಕಾರ್ಮಿಕರು ಮೃತಪಟ್ಟಿದ್ದಾರೆ. ಇದೇ ವೇಳೆ 9 ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ.

ಜುಲೈ 8ರಂದು ಮೂರು ಅಂತಸ್ತಿನ ಆಡಳಿತ ಕಟ್ಟಡ ಕುಸಿದಾಗ ಕಟ್ಟಡದಲ್ಲಿ 23 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಅವಘಡದ ಸುಳಿವು ಸಿಗುತ್ತಿದ್ದಂತೆ ಐವರು ಹೊರಗೆ ಓಡಿ ಪಾರಾಗಿದ್ದರೆ, 18 ಮಂದಿ ಅವಶೇಷಗಳಡಿ ಸಿಲುಕಿದ್ದರು. ಘಟನಾ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್‌ಡಿಆರ್‌ಎಫ್), ಸೇನೆ ಹಾಗೂ ಸ್ಥಳೀಯ ಆಡಳಿತದ ತಂಡಗಳು 83 ಗಂಟೆಗಳ ಕಾಲ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಸಿದವು.

ಪಿಂಪ್ರಿ-ಚಿಂಚ್‌ವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ವಿಜಯ ಸೂರ್ಯವಂಶಿ ಅವರ ಪ್ರಕಾರ, ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರ ₹5 ಲಕ್ಷ, 'ವೇಸ್ಟ್ ಟು ಎನರ್ಜಿ' ಸಂಸ್ಥೆ ₹25 ಲಕ್ಷ ಹಾಗೂ ಪಿಂಪ್ರಿ-ಚಿಂಚ್‌ವಾಡ ಮಹಾನಗರ ಪಾಲಿಕೆ ₹10 ಲಕ್ಷ ಸೇರಿ ಒಟ್ಟು ₹40 ಲಕ್ಷ ಪರಿಹಾರ ನೀಡಲಾಗುತ್ತದೆ. ಅಲ್ಲದೆ, ಮೃತರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಸಂಸ್ಥೆ ಘೋಷಿಸಿದೆ.

ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande