ನವದೆಹಲಿದಲ್ಲಿ ಮನ್ನಂ ಸ್ಮೃತಿ ಮಂಟಪ ಉದ್ಘಾಟಿಸಿದ ಉಪರಾಷ್ಟ್ರಪತಿ
ನವದೆಹಲಿ, 12 ಜುಲೈ (ಹಿ.ಸ.): ಆ್ಯಂಕರ್: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಭಾನುವಾರ ನವದೆಹಲಿಯ ಮನ್ನಂ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಿರ್ಮಿಸಲಾದ ಮನ್ನಂ ಸ್ಮೃತಿ ಮಂಟಪವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮನ್ನತ್ತು ಪದ್ಮನಾಭನ್ ಅವ
ಪದ್ಮನಾಭನ್ ಪ್ರತಿಮೆ ಅನಾವರಣಗೊಳಿಸಿದ ಉಪರಾಷ್ಟ್ರಪತಿ


ನವದೆಹಲಿ, 12 ಜುಲೈ (ಹಿ.ಸ.):

ಆ್ಯಂಕರ್:

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಭಾನುವಾರ ನವದೆಹಲಿಯ ಮನ್ನಂ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ನಿರ್ಮಿಸಲಾದ ಮನ್ನಂ ಸ್ಮೃತಿ ಮಂಟಪವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮನ್ನತ್ತು ಪದ್ಮನಾಭನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.

ನಾಯರ್ ಸರ್ವಿಸ್ ಸೊಸೈಟಿಯ ದೆಹಲಿ ಶಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನ್ನತ್ತು ಪದ್ಮನಾಭನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 1914ರಲ್ಲಿ ನಾಯರ್ ಸರ್ವಿಸ್ ಸೊಸೈಟಿಯನ್ನು ಸ್ಥಾಪಿಸಿದ್ದ ಅವರು, ಕೇರಳದ ನಾಯರ್ ಸಮುದಾಯದ ಅಭಿವೃದ್ಧಿಗಾಗಿ ಸಾಮಾಜಿಕ ನ್ಯಾಯ, ಶಿಕ್ಷಣ, ಸಮಾನತೆ ಹಾಗೂ ಸಮುದಾಯ ಸೇವೆಯ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಮನ್ನತ್ತು ಪದ್ಮನಾಭನ್ ಅವರ ಆದರ್ಶಗಳು ಸಮಾನತೆ ಮತ್ತು ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಇಂದಿಗೂ ಪ್ರೇರಣೆಯಾಗಿವೆ ಎಂದು ಹೇಳಿದರು. ಅವರ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನ್ನಂ ಸ್ಮೃತಿ ಮಂಟಪವನ್ನು ನಿರ್ಮಿಸಿರುವ ನಾಯರ್ ಸರ್ವಿಸ್ ಸೊಸೈಟಿಯ ದೆಹಲಿ ಶಾಖೆಯ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಸುರೇಶ್ ಗೋಪಿ ಸೇರಿದಂತೆ ನಾಯರ್ ಸರ್ವಿಸ್ ಸೊಸೈಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ‘ತಾಯಿಯ ಹೆಸರಲ್ಲಿ ಒಂದು ಮರ’ ಅಭಿಯಾನದ ಅಂಗವಾಗಿ ಉಪರಾಷ್ಟ್ರಪತಿ ಸಸಿ ನೆಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande