ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ನವದೆಹಲಿ, 12 ಜುಲೈ (ಹಿ.ಸ.): ಆ್ಯಂಕರ್: ಕತಾರ್‌ನ ಮಾಜಿ ಅಮೀರ್ ಹಾಗೂ ‘ರಾಷ್ಟ್ರಪಿತ’ ಎಂದೇ ಗುರುತಿಸಿಕೊಂಡಿದ್ದ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 74 ವರ್ಷದ ಶೇಖ್ ಹಮದ್ ಅವರು ಶನಿವಾರ ನಿಧನರಾದರು. ಎಕ್ಸ್‌ನಲ್ಲಿ ಸಂ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ


ನವದೆಹಲಿ, 12 ಜುಲೈ (ಹಿ.ಸ.):

ಆ್ಯಂಕರ್:

ಕತಾರ್‌ನ ಮಾಜಿ ಅಮೀರ್ ಹಾಗೂ ‘ರಾಷ್ಟ್ರಪಿತ’ ಎಂದೇ ಗುರುತಿಸಿಕೊಂಡಿದ್ದ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 74 ವರ್ಷದ ಶೇಖ್ ಹಮದ್ ಅವರು ಶನಿವಾರ ನಿಧನರಾದರು.

ಎಕ್ಸ್‌ನಲ್ಲಿ ಸಂತಾಪ ಸಂದೇಶ ಪ್ರಕಟಿಸಿರುವ ಪ್ರಧಾನಿ ಮೋದಿ, ಶೇಖ್ ಹಮದ್ ಅವರನ್ನು ದೂರದೃಷ್ಟಿಯ ನಾಯಕ ಎಂದು ಬಣ್ಣಿಸಿದ್ದು, ಕತಾರ್‌ನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ದವರು ಎಂದು ಹೇಳಿದ್ದಾರೆ. ಅವರು ಭಾರತದ ನಿಜವಾದ ಸ್ನೇಹಿತರಾಗಿಯೂ ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದು ತಿಳಿಸಿದ್ದಾರೆ.

ಫೆಬ್ರುವರಿ 2024ರಲ್ಲಿ ಕತಾರ್‌ಗೆ ಭೇಟಿ ನೀಡಿದ ವೇಳೆ ಶೇಖ್ ಹಮದ್ ಅವರನ್ನು ಭೇಟಿಯಾಗುವ ಅವಕಾಶ ದೊರೆತಿತ್ತು ಎಂದು ಸ್ಮರಿಸಿರುವ ಪ್ರಧಾನಿ ಮೋದಿ, ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ, ರಾಜಮನೆತನದ ಸದಸ್ಯರು ಹಾಗೂ ಕತಾರ್‌ನ ಜನತೆಗೆ ತಮ್ಮ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande