ಕೋಲಾರ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಎಂಬತ್ತು ಸಾವಿರ ಪ್ರಕರಣಗಳ ಇತ್ಯರ್ಥ
ಕೋಲಾರ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಎಂಬತ್ತು ಸಾವಿರ ಪ್ರಕರಣಗಳ ಇತ್ಯರ್ಥ
ಕೋಲಾರದಲ್ಲಿ ನಡೆದ ರಾಷ್ಟಿçÃಯ ಲೋಕ ಅದಾಲತ್ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳನ್ನು ನ್ಯಾಯಾಧೀಶರು ರಾಜೀ ಸಂದಾನದ ಮೂಲಕ ಇತ್ಯರ್ಥಪಡಿಸಿದರು.


ಕೋಲಾರ,ಜುಲೈ ೧೧(ಹಿ.ಸ):

ಆ್ಯಂಕರ್: ಕೋಲಾರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಬೈಠಕ್ಗಳ ಮೂಲಕ ಪರಸ್ಪರ ರಾಜೀ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ ಕಕ್ಷಿದಾರರು ಹಾಗೂ ವಕೀಲರು ಸಕ್ರಿಯವಾಗಿ ಪಾಲ್ಗೊಂಡು ಪರಸ್ಪರ ಮಾತುಕತೆಯ ಮೂಲಕ ಜಿಲ್ಲೆಯಾದ್ಯಂತ ಬಾಕಿ ಇದ್ದ ಸಿವಿಲ್, ಕ್ರಿಮಿನಲ್ ಹಾಗೂ ವಿಮಾ ಪರಿಹಾರ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರು. ಒಟ್ಟು ೮೦,೬೮೭ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಯಿತು. ಇದರಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ ೪,೯೦೮ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ (ಬ್ಯಾಂಕ್, ಟ್ರಾಫಿಕ್ ಮತ್ತು ಇತರೆ ಸಾರ್ವಜನಿಕ ಉಪಯುಕ್ತತಾ) ೭೫,೭೭೯ ಪ್ರಕರಣಗಳು ಸೇರಿವೆ. ಇತ್ಯರ್ಥಗೊಂಡ ಈ ಪ್ರಕರಣಗಳ ಒಟ್ಟು ಪರಿಹಾರ ಮೊತ್ತ ಬರೋಬ್ಬರಿ ೪೧,೭೪,೪೬,೪೦೫.೦೦ ರೂಪಾಯಿಗಳಾಗಿದೆ ಎಂದು ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ಎನ್. ಬಡಿಗೇರ್ ತಿಳಿಸಿದ್ದಾರೆ.

ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡ ನ್ಯಾಯಾಲಯದ ೪,೯೦೮ ಚಾಲ್ತಿ ಪ್ರಕರಣಗಳಲ್ಲಿ ೭೬ ಕ್ರಿಮಿನಲ್ ಕಾಂಪೌನ್ಡೆಬಲ್ ಪ್ರಕರಣಗಳು, ೧೦೭ ಚೆಕ್ ಬೌನ್ಸ್ ಪ್ರಕರಣಗಳು, ೧೦ ಕೌಟುಂಬಿಕ ಪ್ರಕರಣಗಳು, ೯೫ ವಿಭಾಗದ ದಾವೆಗಳು, ೯೫ ಇತರೆ ಸಿವಿಲ್ ಪ್ರಕರಣಗಳು, ೩೧ ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು ಹಾಗೂ ೪,೧೩೦ ಇತರೆ ಕ್ರಿಮಿನಲ್ ಪ್ರಕರಣಗಳು ಸೇರಿವೆ. ಈ ಮೂಲಕ ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಿಕೊಂಡಿದ್ದಾರೆ.

ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ ಎಂ. ಆನಂದಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಬಾರಿಯ ಲೋಕ್ ಅದಾಲತ್ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದ ವಕೀಲರ ಸಂಘದ ಅಧ್ಯಕ್ಷರಾದ ಎಲ್. ಶ್ರೀನಿವಾಸ್, ಕಾರ್ಯದರ್ಶಿಗಳಾದ ಕೆ.ವಿ. ಆದರ್ಶ, ಜಿಲ್ಲೆಯ ಎಲ್ಲಾ ವಕೀಲರು, ನ್ಯಾಯಾಧೀಶರು, ಸಿಬ್ಬಂದಿ ವರ್ಗ ಹಾಗೂ ಕಕ್ಷಿದಾರರಿಗೆ ಸದಸ್ಯ ಕಾರ್ಯದರ್ಶಿಗಳಾದ ಪ್ರಭು ಎನ್. ಬಡಿಗೇರ್ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande