ಮತದಾರರ ವಿಶೇಷ ಪರಿಷ್ಕರಣೆಗೆ ಮಾಹಿತಿ ನೀಡಿದ ಶಾಸಕ ಕೊತ್ತೂರು ಮಂಜುನಾಥ್
ಮತದಾರರ ವಿಶೇಷ ಪರಿಷ್ಕರಣೆಗೆ ಮಾಹಿತಿ ನೀಡಿದ ಶಾಸಕ ಕೊತ್ತೂರು ಮಂಜುನಾಥ್
ಮುಳಬಾಗಿಲು ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತಗಟ್ಟೆಯ ಅಧಿಕಾರಿಗೆ ಮಾಹಿತಿ ನೀಡಿದರು.


ಕೋಲಾರ,೦೧ ಜುಲೈ (ಹಿ.ಸ)

ಆ್ಯಂಕರ್ : ಭಾರತ ಚುನಾವಣೆ ಆಯೋಗವು ಹೊಸದಾಗಿ ಹಮ್ಮಿಕೊಂಡಿರುವ ಮತದಾರರ ವಿಶೇಷ ಪರಿಷ್ಕರಣೆ ಹಾಗೂ ಗಣತಿ ಕಾರ್ಯದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರು ತಮ್ಮ ಸ್ವಂತ ಗ್ರಾಮ ಮುಳಬಾಗಿಲಿನ ಕೊತ್ತೂರು ಗ್ರಾಮದಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಂಡರು.

ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿ ಅವರಿಗೆ ತಮ್ಮ ಅಗತ್ಯ ಮಾಹಿತಿ ಹಾಗೂ ವಿವರಗಳನ್ನು ಒದಗಿಸಿದ ಶಾಸಕರು, ನಿಗದಿತ ನಮೂನೆಯಲ್ಲಿ ಸಹಿ ಮಾಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಚುನಾವಣೆ ಆಯೋಗದ ಈ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದೆ. ಮುಳಬಾಗಿಲು ಮತ್ತು ಕೋಲಾರ ಕ್ಷೇತ್ರದ ಪ್ರತಿಯೊಬ್ಬ ನಾಗರಿಕರು ಹಾಗೂ ಮತದಾರರು ಈ ವಿಶೇಷ ಪರಿಷ್ಕರಣಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ತಮ್ಮ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯವಿರುವ ನಿಖರ ಮಾಹಿತಿಗಳನ್ನು ನೀಡಿ ಸಹಕರಿಸಬೇಕು, ಎಂದು ಮನವಿ ಮಾಡಿದರು.

ಭಾರತ ಚುನಾವಣೆ ಆಯೋಗದ ಈ ಹೊಸ ಗಣತಿ ಕಾರ್ಯವನ್ನು ಶ್ಲಾಘಿಸಿದ ಅವರು, ಈ ಪ್ರಕ್ರಿಯೆಯು ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಹಾಗೂ ಭಾರತದ ಪೌರತ್ವವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ. ದೇಶದೊಳಗೆ ಅಕ್ರಮವಾಗಿ ನುಸುಳಿರುವ ಇತರ ದೇಶಗಳ ನುಸುಳುಕೋರರನ್ನು ಗುರುತಿಸಿ ಹೊರಗಟ್ಟಲು ಮತ್ತು ಅರ್ಹ ನಾಗರಿಕರಿಗೆ ಸೂಕ್ತ ಪೌರತ್ವದ ಹಕ್ಕುಗಳನ್ನು ಕಾಪಾಡಲು ಈ ಕಾರ್ಯವು ಉತ್ತಮ ಮತ್ತು ಶ್ಲಾಘನೀಯವಾಗಿದೆ, ಎಂದು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande