ನಿವೃತ್ತಿ ಹೊಂದಿದ ಕನ್ನಡ ಶಿಕ್ಷಕ ಮುನಿವೆಂಕಟಪ್ಪನವರಿಗೆ ಬೀಳ್ಕೊಡುಗೆ
ನಿವೃತ್ತಿ ಹೊಂದಿದ ಕನ್ನಡ ಶಿಕ್ಷಕ ಮುನಿವೆಂಕಟಪ್ಪನವರಿಗೆ ಬೀಳ್ಕೊಡುಗೆ
ನಿವೃತ್ತಿ ಹೊಂದಿದ ಮಾಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಶಿಕ್ಷಕ ಸಿ.ಎ.ಮುನಿವೆಂಕಟಪ್ಪನವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.


ಕೋಲಾರ, ೦೧ ಜುಲೈ (ಹಿ.ಸ):

ಆ್ಯಂಕರ್ : ಶಿಕ್ಷಕ ವೃತ್ತಿಯ ಘನತೆಗೆ ಕುತ್ತುಬಾರದಂತೆ ೩೭ ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಸಮಯಪ್ರಜ್ಞೆ,ಕರ್ತವ್ಯ ನಿಷ್ಟೆಗೆ ಹೆಸರಾಗಿದ್ದ ಮಾಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಶಿಕ್ಷಕ ಸಿ.ಎ.ಮುನಿವೆಂಕಟಪ್ಪ ತಮ್ಮ ವೃತ್ತಿಜೀವನದ ನೆನಪುಗಳನ್ನು ಮೆಲಕು ಹಾಕುತ್ತಾ ಭಾವುಕರಾದ ಕ್ಷಣ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸಿತು.

ಜಿಲ್ಲೆಯ ಮಾಲೂರಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ೬೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ನೂರಾರು ಶಿಕ್ಷಕರು, ಸ್ನೇಹಿತರು, ಬಂಧುಗಳ ಸಮ್ಮುಖದಲ್ಲಿ ನಿವೃತ್ತರಾದ ತಮಗೆ ಹಾಗೂ ತಮ್ಮ ಧರ್ಮಪತ್ನಿ ಪದ್ಮ ಅವರಿಗೆ ನೀಡಿದ ಸನ್ಮಾನದಿಂದ ಶಿಕ್ಷಕ ಮುನಿವೆಂಕಟಪ್ಪ ಮಾತು ಹೊರಡದೇ ಭಾವುಕರಾಗಿ ಕುಳಿತರು.

ತಮ್ಮ ಬದುಕಿಗೆ ಆಸರೆ,ನೆರಳು ನೀಡಿದವರನ್ನು ಸ್ಮರಿಸಿದ ಅವರು, ವೃತ್ತಿಜೀವನದಲ್ಲಿ ಸಹಕರಿಸಿದ ಎಲ್ಲಾ ಸಹೋದ್ಯೋಗಿಗಳು, ಸ್ನೇಹಿತರು, ಬಂಧುಗಳು,ಕುಟುAಬ ವರ್ಗ, ಸಹಸ್ರಾರು ಮಕ್ಕಳಿಗೆ ಧನ್ಯವಾದ ತಿಳಿಸಿದರು.

ಮಾಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ರಾಮಕೃಷ್ಣಪ್ಪ, ತಮ್ಮ ಸಹೋದ್ಯೋಗಿ ಶಿಕ್ಷಕನನ್ನು ಬೀಳ್ಕೊಟ್ಟು, ತಮ್ಮ ಕರ್ತವ್ಯನಿಷ್ಟೆ, ಸಮಯಪ್ರಜ್ಞೆ, ವೃತ್ತಿಬದ್ದತೆ, ಸಂಸ್ಕಾರದನಡೆಯಿAದ ಸಹಸ್ರಾರು ಮಕ್ಕಳಿಗೆ ವಿದ್ಯಾದಾನ ಮಾಡಿರುವ ಕನ್ನಡ ಶಿಕ್ಷಕ ಸಿ.ಎ.ಮುನಿವೆಂಕಟಪ್ಪ ಓರ್ವ ಆದರ್ಶ ಗುರುವಾಗಿ ಇಂದು ನಿರ್ವತ್ತರಾಗುತ್ತಿದ್ದು, ಇದು ತುಂಬಲಾರದ ನಷ್ಟ ಎಂದು ತಿಳಿಸಿದರು.

ವೃತ್ತಿಜೀವನದಲ್ಲಿ ಒಂದೇ ಒಂದು ತಪ್ಪು ಎಸಗದೇ ಇತರರಿಗೆ ಆದರ್ಶವಾಗಿದ್ದ ಅವರು, ದಾಖಲೆಗಳ ನಿರ್ವಹಣೆಯಲ್ಲಿ ಮೊದಲಿಗರಾಗಿದ್ದರು. ಅವರಲ್ಲಿನ ಕನ್ನಡ ಪ್ರೇಮ, ಭಾಷೆಯ ಮೇಲಿನ ಹಿಡಿತದಿಂದಾಗಿ ಮಕ್ಕಳನ್ನು ತಮ್ಮ ಬೋಧನೆಯಿಂದ ಮಂತ್ರಮುಗ್ದರನ್ನಾಗಿಸುತ್ತಿದ್ದರು ಎಂದು ಸ್ಮರಿಸಿದರು.

ಮಾಲೂರು ತಾಲ್ಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮುನಿನಾರಾಯಣ, ಶಿಕ್ಷಕರಾದ ದಾಕ್ಷಾಯಿಣಿ, ನಂಜುAಡಗೌಡ ಮತ್ತಿತರರು ಮಾತ ನಾಡಿ, ಮುನಿವೆಂಕಟಪ್ಪ ಶಿಕ್ಷಕ ಸಂಘಟನೆಗಳಲ್ಲಿ ಗುರುತಿಸಿಕೊಳ್ಳಲಿಲ್ಲ, ತಾವಾಯಿತು, ತಮ್ಮ ಬೊಧನೆಯಾಯಿತು ಎಂದು ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.

ಸ್ನೇಹಿತ ಶಿಕ್ಷಕರಾದ ಸಿ.ಎಲ್.ಶ್ರೀನಿವಾಸಲು, ಸಿ.ಬಿ.ನಾರಾಯಣಸ್ವಾಮಿ,ರಾಜಗೋಪಾಲ್, ವಿಶ್ವನಾಥ್ ಮತ್ತಿತರರು ಮುನಿವೆಂಕಟಪ್ಪ ಅವರೊಂದಿಗೆ ಕಾಲ ಕಳೆದ ದಿನಗಳನ್ನು ಮೆಲುಕು ಹಾಕಿ, ತಮ್ಮ ಹುಟ್ಟೂರಾದ ಚಿಟ್ನಹಳ್ಳಿಯಲ್ಲಿ ಗಣಪತಿ ಉತ್ಸವವನ್ನು ೪೦ ವರ್ಷಗಳಿಂದ ಇವರ ನೇತೃತ್ವದಲ್ಲೇ ನಡೆಸಲಾಗುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ನಂಜುಂಡಗೌಡ, ೧೯೮೮ರಲ್ಲಿ ದುಲಪ್ಪಲ್ಲಿಯಲ್ಲಿ ಪ್ರಾಥಮಿಕಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಹಲವು ಶಾಲೆಗಳಲ್ಲಿ ಕೆಲಸ ಮಾಡಿದ ನಂತರ ೨೦೧೧ ರಲ್ಲಿ ಬಡ್ತಿ ಹೊಂದಿ ಮಾಸ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಮಾಡಿ ೨೦೧೬ ರಲ್ಲಿ ಮಾಲೂರು ಕಾಲೇಜಿಗೆ ಬಂದು ಇಲ್ಲಿ ಸಾವಿರಾರು ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದಾರೆ, ಕನ್ನಡ ನುಡಿಯನ್ನು ಬೆಳೆಸಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನಾ ರಾಮನಗರ ಡಿಡಿಪಿಐ ವೆಂಕಟೇಶ್, ಅಕ್ಷರದಾಸೋಹ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಆಗಮಿಸಿ ಮುನಿವೆಂಕಟಪ್ಪ ಅವರನ್ನು ಸನ್ಮಾನಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಶ್ರೀನಿವಾಸ, ಉಷಾ, ರೀನಾ, ವೀರಭದ್ರಾಚಾರಿ, ನೇಹಾ, ಹೆಚ್.ರಾಜಣ್ಣ, ರಾಜಪ್ಪ, ಮಹೇಶ್,ಸೂಲೂರು ರಮೇಶ್, ಚಿಟ್ನಹಳ್ಳಿಯ ನರೇಂದ್ರಕುಮಾರ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು,ಸ್ನೇಹಿತರು, ಕುಟುಂಬಸ್ಥರಾದ ಶ್ರೀನಿವಾಸ್,ಗಜೇಂದ್ರ, ಚಂದ್ರಿಕಾ,ಸುಮ ಮತ್ತವರ ಕುಟುಂಬ ಸದಸ್ಯರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande