ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಸಚಿವ ಸ್ಥಾನ ; ವಿಶೇಷ ಪ್ರಾರ್ಥನೆ
ಕೊಪ್ಪಳ, 07 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಕ್ಷೇತ್ರದ ಶಾಸಕರಾದ ರಾಘವೇಂದ್ರ ಹಿಟ್ನಾಳರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡುವಂತಾಗಲಿ ಎಂದು ಭಾಗ್ಯನಗರದ ಮುಸ್ಲಿಂ ಜಾಮೀಯಾ ಕಮಿಟಿಯ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಭಾಗ್ಯನಗರದ ಮಸೀದಿಯಲ್ಲಿ ಮಗರಿಬ ನಮಾಜಿನಲ್ಲಿ ವಿಶೇಷ ಪ್ರಾ
ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಸಚಿವ ಸ್ಥಾನ ವಿಶೇಷ ಪ್ರಾರ್ಥನೆ


ಶಾಸಕ ರಾಘವೇಂದ್ರ ಹಿಟ್ನಾಳರಿಗೆ ಸಚಿವ ಸ್ಥಾನ ವಿಶೇಷ ಪ್ರಾರ್ಥನೆ


ಕೊಪ್ಪಳ, 07 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಕ್ಷೇತ್ರದ ಶಾಸಕರಾದ ರಾಘವೇಂದ್ರ ಹಿಟ್ನಾಳರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡುವಂತಾಗಲಿ ಎಂದು ಭಾಗ್ಯನಗರದ ಮುಸ್ಲಿಂ ಜಾಮೀಯಾ ಕಮಿಟಿಯ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಭಾಗ್ಯನಗರದ ಮಸೀದಿಯಲ್ಲಿ ಮಗರಿಬ ನಮಾಜಿನಲ್ಲಿ ವಿಶೇಷ ಪ್ರಾರ್ಥನೆ (ದುವಾ)ಸಲ್ಲಿಸಿ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಸಿಗಬೇಕು ಜೊತೆಗೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳರಿಗೂ ಸಚಿವ ಸ್ಥಾನ ದೊರಕಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಾಮೀಯಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ ಬಿಸರಳ್ಳಿ, ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಹೊನ್ನೂರಸಾಬ ಬೈರಾಪುರ, ಪೀರಸಾಬ ಬೈರಾಪುರ, ಮಹ್ಮದ್ಸಾಬ ಬೈರಾಪೂರ, ಹಾಜಿ ಕುತ್ಬುದ್ದೀನಸಾಬ, ಎಫ್ ಎ ನೂರಬಾಷಾ ಸೇರಿದಂತೆ ಇತರರು ಉಪಸ್ತಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande