ಬಳ್ಳಾರಿಯಲ್ಲಿ ಶನಿವಾರ ರಾತ್ರಿ ಭಾರಿ ಮಳೆ, ಹಳ್ಳಿದಲ್ಲಿ ಸಿಕ್ಕ ಮಹಿಳೆ ಶವ, ವಿದ್ಯುತ್ ಕಡಿತ
ಬಳ್ಳಾರಿ, 07 ಜೂನ್ (ಹಿ.ಸ.) : ಆ್ಯಂಕರ್ : ಶನಿವಾರ ರಾತ್ರಿ ಬಳ್ಳಾರಿ ನಗರದಲ್ಲಿ ಸುರಿದ 117.0 ಮಿ.ಮೀ ಸುರಿದ ಭಾರಿ ಮಳೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮನೆ ಸೇರಲು ಯತ್ನಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಹಿಳಾ ಅಧಿಕಾರಿ ಅಂದ್ರಾಳ್ ಹಳ್ಳದಲ್ಲಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿ, ಮೃತಪಟ್ಟಿದ್ದಾರೆ.
ಬಳ್ಳಾರಿಯಲ್ಲಿ ಶನಿವಾರ ರಾತ್ರಿ ಭಾರೀ ಮಳೆ, ಹಳ್ಳಿದಲ್ಲಿ ಸಿಕ್ಕ ಮಹಿಳೆ ಶವ, ವಿದ್ಯುತ್ ಕಡಿತ


ಬಳ್ಳಾರಿಯಲ್ಲಿ ಶನಿವಾರ ರಾತ್ರಿ ಭಾರೀ ಮಳೆ, ಹಳ್ಳಿದಲ್ಲಿ ಸಿಕ್ಕ ಮಹಿಳೆ ಶವ, ವಿದ್ಯುತ್ ಕಡಿತ


ಬಳ್ಳಾರಿ, 07 ಜೂನ್ (ಹಿ.ಸ.) :

ಆ್ಯಂಕರ್ : ಶನಿವಾರ ರಾತ್ರಿ ಬಳ್ಳಾರಿ ನಗರದಲ್ಲಿ ಸುರಿದ 117.0 ಮಿ.ಮೀ ಸುರಿದ ಭಾರಿ ಮಳೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮನೆ ಸೇರಲು ಯತ್ನಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಹಿಳಾ ಅಧಿಕಾರಿ ಅಂದ್ರಾಳ್ ಹಳ್ಳದಲ್ಲಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿ, ಮೃತಪಟ್ಟಿದ್ದಾರೆ. ಬಳ್ಳಾರಿ ನಗರದಲ್ಲಿ ವಿದ್ಯುತ್ ಕಡಿತ, ರಸ್ತೆ ಸಂಪರ್ಕ ಕಡಿತವಾಗಿದೆ. ತಗ್ಗು ಪ್ರದೇಶಗಳ ನಿವಾನಿಗಳು ನೀರಲ್ಲೇ ರಾತ್ರಿ ಕಳೆದಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ನುಗ್ಗಿದ ನೀರು. ರೋಗಿಗಳ ಮತ್ತು ಸಹಾಯಕರ ಪರದಾಟ.

ಪೊಲೀಸರು ತಿಳಿಸಿದಂತೆ, ಮೃತ ಹನಿಫಾ ಫಾತೀಮಾ (38) ಅವರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೋತಿ ವೃತ್ತದ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯೊಬ್ಬರ ವಯೋ ನಿವೃತ್ತಿಯ ಹಿನ್ನಲೆಯಲ್ಲಿ ಶನಿವಾರ ರಾತ್ರಿ ಅಲ್ಲಂ ಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸಹದ್ಯೋಗಿಗಳ ಜೊತೆ ಪಾಲ್ಗೊಂಡಿದ್ದರು.

ಮಳೆ ರಾತ್ರಿ 8.50ರ ಸುಮಾರಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಗಿ 10.30ರ ಸುಮಾರಿಗೆ ಮಳೆ ಕಡಿಮೆ ಆದ ಕೂಡಲೇ ಒಬ್ಬ ಸಹದ್ಯೋಗಿಯ ನೆರವನ್ನು ಪಡೆದು ಪ್ರತ್ಯೇಕವಾಗಿ ಅವರವರ ದ್ವಿಚಕ್ರ ವಾಹನಗಳಲ್ಲಿ ಡಾ. ಜೋಳದರಾಶಿ ದೊಡ್ಡನಗೌಡರ ರಂಗಮಂದಿರದವರೆಗೂ ಒಟ್ಟಾಗಿ ಬರುತ್ತಾರೆ. ರಂಗಮಂದಿರದ ಹತ್ತಿರ ಹನಿಫಾ ಫಾತಿಮಾ ಅವರು ಸಹುದ್ಯೋಗಿಯನ್ನು ಮನೆಗೆ ಹೋಗಲು ತಿಳಿಸಿ, ಅವರು ಲೋಟಸ್ ಕಾಲೊನಿಯಲ್ಲಿ ಇರುವ ಮನೆಯ ಕಡೆಗೆ ಹೋಗುತ್ತಾರೆ.

ಲೋಟಸ್ ಕಾಲೊನಿಗೆ ಹೋಗುವ ಮಾರ್ಗದಲ್ಲಿ ಹರಿಯುವ ಹಳ್ಳದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆಯ ನೀರು ರಭಸವಾಗಿ ಹರಿಯುತ್ತಿತ್ತು. ಆದರೆ, ನೀರಿನ ಹರಿವಿನ ಸೆಳವನ್ನು ಗಮನಿಸದ ಹನಿಫಾ ಫಾತಿಮಾ ಅವರು ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಹೋಗಲು ಯತ್ನಿಸಿದಾಗ, ಹಳ್ಳದಲ್ಲಿ ಹರಿಯುತ್ತಿರುವ ನೀರಿನ ರಭಸಕ್ಕೆ ವಾಹನ ಮತ್ತು ಸವಾರರಾಗಿರುವ ಅವರು ಒಟ್ಟಿಗೆ ಸೇರಿ ಕೊಚ್ಚಿಕೊಂಡು ಹೋಗಿದ್ದಾರೆ.

ನೀರು ಕೊಚ್ಚಿ ಹೋಗುತ್ತಿದ್ದಂತೆಯೇ ಆಕೆಯ ಬಟ್ಟೆಗಳು ಬೇಲಿಗಳಿಗೆ ಮತ್ತು ಕಸಕ್ಕೆ ಸಿಲುಕಿ ಹರಿದು ಹೋಗಿರಬೇಕು. ಬೆಳಗಾಗುವಷ್ಟರಲ್ಲಿ ಆಕೆಯ ಶವವು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಆಕೆಯ ಸಾವಿನ ಕುರಿತು ಸಾಕಷ್ಟು ಗೊಂದಲಗಳು - ಅನುಮಾನಗಳು ಮತ್ತು ಕಥೆಗಳು ಹರಿದಾಡತೊಡಗಿದವು.

ಆದರೆ, ಈ ಶವವನ್ನು ಮತ್ತು ತಾಜ್ ಶಾಲೆಯ ಸಮೀಪದಲ್ಲಿ ಅವರ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿದ ಪೊಲೀಸ್ ಸಿಬ್ಬಂದಿಗಳ ಪ್ರಕಾರ, ಆಯಿಷಾ ಫಾತೀಮಾ ಅವರು ನೀರಿನ ರಭಸಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ನೀರಿನ ರಭಸದಲ್ಲಿ ಅವರು ಧರಿಸಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ, ಬೆತ್ತಲೆಯಾಗಿರಬೇಕು ಎಂದು ಶಂಕಿಸಿದ್ದಾರೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಜೂನ್ 6 ರಂದು ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ರಾತ್ರಿ 8.50ರ ಸುಮಾರಿಗೆ ಸುರಿದ ಭಾರಿ ಮಳೆಯು 1 ಗಂಟೆ 25 ನಿಮಿಷಗಳ ಕಾಲ ದೊಡ್ಡ ಪ್ರಮಾಣದಲ್ಲಿ ಸುರಿದ ರಾತ್ರಿ ಇಡೀ ಜಿಟಿಜಿಟಿ ಸುರಿದಿದೆ. ಮಳೆಯ ಕಾರಣ ಹಳ್ಳಗಳು ತುಂಬಿ ಹರಿದಿವೆ. ತಗ್ಗು ಪ್ರದೇಶದಲ್ಲಿ ನೀರು ಮನೆಗಳಳನ್ನು ಹೊಕ್ಕು, ಅನೇಕರು ಮಳೆ ನೀರಿನಲ್ಲಿಯೇ ರಾತ್ರಿ ಕಳೆದಿದ್ದಾರೆ.

ಇನ್ನು, ಬಳ್ಳಾರಿಯ ಶ್ರೀಕನಕದುರ್ಗಮ್ಮ ದೇವಸ್ಥಾನದ ಕೆಳಸೇತುವೆ (ಅಂಡರ್ ಬ್ರಿಡ್ಜ್)ನಲ್ಲಿ ಹಾಗೂ ರಂಗಮಂದಿರದ ಸಮೀಪದ ಅಂಡರ್ಪಾಸ್ನಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿದ್ದ ಕಾರಣ ಭಾನುವಾರ ಬೆಳಗ್ಗೆ ಕೆಲ ಹೊತ್ತು ವಾಹನಗಳ ಸಂಚಾರ ಕ್ಕೆ ತೊಂದರೆ ಉಂಟಾಗಿತ್ತು.

ಕಪ್ಪಗಲ್ ಗ್ರಾಮದಲ್ಲಿ 126.0 ಮಿ.ಮೀ, ಬಳ್ಳಾರಿ ನಗರದಲ್ಲಿ 117.0 ಮಿ.ಮೀ, ಸಿರಿವಾರ ಗ್ರಾಮದಲ್ಲಿ 106.5 ಮಿ.ಮೀ, ಶ್ರೀಧರಗಡ್ಡೆ ಗ್ರಾಮದಲ್ಲಿ 101.0 ಮಿ.ಮೀ, ಗೋನಾಲ್ ಗ್ರಾಮದಲ್ಲಿ 82.5 ಮಿ.ಮೀ, ಸಿರುಗುಪ್ಪದಲ್ಲಿ 64.8 ಮಿ.ಮೀ, ರಾವಿಹಾಳ್ನಲ್ಲಿ 61.5 ಮಿ.ಮೀ, ಹಲಕುಂದಿಯಲ್ಲಿ 50.0 ಮಿ.ಮೀ, ಯರಗುಡಿಯಲ್ಲಿ 33.0 ಮಿ.ಮೀ, ದೇಸನೂರುನಲ್ಲಿ 25.0 ಮಿ.ಮೀ, ಹಂದಿಹಾಳ್ನಲ್ಲಿ 24.5 ಮಿ.ಮೀ, ರಾರಾವಿಯಲ್ಲಿ 24.0 ಮಿ.ಮೀ, ಪರಮದೇವನಹಳ್ಳಿಯಲ್ಲಿ 24.0 ಮಿ.ಮೀ, ಕೆಂಚನಗುಡ್ಡದಲ್ಲಿ 14.5 ಮಿ.ಮೀ, ಮೆಟ್ರಿಕಿಯಲ್ಲಿ 14.0 ಮಿ.ಮೀ, ಸಿದ್ದಮ್ಮನಹಳ್ಳಿಯಲ್ಲಿ 13.5 ಮಿ.ಮೀ, ಬಾದನಹಟ್ಟಿಯಲ್ಲಿ 10.0 ಮಿ.ಮೀ, ಸಿಂದಿಗೇರಿಯಲ್ಲಿ 9.5 ಮಿ.ಮೀ, ಕುರುಗೋಡುನಲ್ಲಿ 7.8 ಮಿ.ಮೀ, ನೆಲ್ಲುಡಿಯಲ್ಲಿ 6.5 ಮಿ.ಮೀ, ಗೆಣಿಕೆಹಾಳ್ನಲ್ಲಿ 5.5 ಮಿ.ಮೀ, ತಾಳೂರು ಗ್ರಾಮದಲ್ಲಿ 5.5 ಮಿ.ಮೀ, ಶಾನವಾಸಪುರದಲ್ಲಿ 5.5 ಮಿ.ಮೀ, ಎಚ್. ಹೊಸಹಳ್ಳಿಯಲ್ಲಿ 5.0 ಮಿ.ಮೀ, ಎಮ್ಮಿಗನೂರುನಲ್ಲಿ 4.5 ಮಿ.ಮೀ, ಕುಡುದರಹಾಳ್ನಲ್ಲಿ 4.0 ಮಿ.ಮೀ, ಉತ್ತನೂರುನಲ್ಲಿ 4.0 ಮಿ.ಮೀ, ಏಳುಬೆಂಚಿಯಲ್ಲಿ 2.5 ಮಿ.ಮೀ, ಹಂಪಾದೇವನಹಳ್ಳಿಯಲ್ಲಿ 2.0 ಮಿ.ಮೀ, ದಮ್ಮೂರು ಗ್ರಾಮದಲ್ಲಿ 1.5 ಮಿ.ಮೀ, ಅಂತಾಪುರದಲ್ಲಿ 0.5 ಮಿ.ಮೀ, ಸಣಾಪುರದಲ್ಲಿ 0.5 ಮಿ.ಮೀ ಮತ್ತು ಬಸರಕೋಡುನಲ್ಲಿ 0.5 ಮಿ.ಮೀ ಪ್ರಮಾಣದಲ್ಲಿ ಮಳೆ ಸುರಿದಿದೆ.

ಬಳ್ಳಾರಿ ನಗರದಲ್ಲಿ ಸುರಿದ ಭಾರಿ ಮಳೆಯ ಕಾರಣ ಗಿಡಮರಗಳು - ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬಳ್ಳಾರಿ ನಗರ ಉತ್ತರ ಉಪ ವಿದ್ಯುತ್ ಕೇಂದ್ರದಲ್ಲಿ ನೀರು ನಿಂತಿದ್ದ ಕಾರಣ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಡಿತ ಮಾಡಿದ್ದ ಕಾರಣ, ನಗರದ ಬಹುತೇಕ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande