ಗಂಗಾವತಿ ಶ್ರೀಮತಿ ವೈ.ಜೆ.ಆರ್. ಕಾಲೇಜಿಗೆ ಅತ್ಯುತ್ತಮ ಫಲಿತಾಂಶ
ಗಂಗಾವತಿ, 07 ಜೂನ್ (ಹಿ.ಸ.) : ಆ್ಯಂಕರ್ : ನಗರದ ವಿದ್ಯಾನಗರದಲ್ಲಿರುವ ಶ್ರೀಮತಿ ವೈ.ಜೆ.ಆರ್. ಪದವಿ ಪೂರ್ವ ಕಾಲೇಜು ಕೆಸಿಇಟಿ-2026 ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದ್ದು, ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಗಮನಾರ್ಹ ಶ್ರೇಣಿಗಳನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಗಂಗಾವತಿ: ಶ್ರೀಮತಿ ವೈ.ಜೆ.ಆರ್. ಕಾಲೇಜಿಗೆ ಅತ್ಯುತ್ತಮ ಫಲಿತಾಂಶ


ಗಂಗಾವತಿ, 07 ಜೂನ್ (ಹಿ.ಸ.) :

ಆ್ಯಂಕರ್ : ನಗರದ ವಿದ್ಯಾನಗರದಲ್ಲಿರುವ ಶ್ರೀಮತಿ ವೈ.ಜೆ.ಆರ್. ಪದವಿ ಪೂರ್ವ ಕಾಲೇಜು ಕೆಸಿಇಟಿ-2026 ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ದಾಖಲಿಸಿದ್ದು, ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಗಮನಾರ್ಹ ಶ್ರೇಣಿಗಳನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪರೀಕ್ಷೆಯಲ್ಲಿ ಅಕ್ಷತಾ ಎ.ಎಂ. ಅವರು ಬಿಎಸ್ಸಿ (ಕೃಷಿ) ವಿಭಾಗದಲ್ಲಿ ರಾಜ್ಯ 43ನೇ ಶ್ರೇಣಿ ಹಾಗೂ ಪಶುವೈದ್ಯಕೀಯ ವಿಜ್ಞಾನ (Veterinary Science) ವಿಭಾಗದಲ್ಲಿ ರಾಜ್ಯ 302ನೇ ಶ್ರೇಣಿ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ಪಿ. ರೇವಂತ್ ಕುಮಾರ್ ಅವರು ಬಿಎಸ್ಸಿ (ಕೃಷಿ) ವಿಭಾಗದಲ್ಲಿ ರಾಜ್ಯ 157ನೇ ಶ್ರೇಣಿ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯ 909ನೇ ಶ್ರೇಣಿ ಗಳಿಸಿದ್ದಾರೆ. ದೊಡ್ಡಬಸವ ಅವರು ಬಿಎಸ್ಸಿ (ಕೃಷಿ) ವಿಭಾಗದಲ್ಲಿ ರಾಜ್ಯ 447ನೇ ಶ್ರೇಣಿ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯ 857ನೇ ಶ್ರೇಣಿ ಪಡೆದು ಉತ್ತಮ ಸಾಧನೆ ತೋರಿದ್ದಾರೆ. ಕಲ್ಮೇಶ್ ಅವರು ಬಿಎಸ್ಸಿ (ಕೃಷಿ) ವಿಭಾಗದಲ್ಲಿ ರಾಜ್ಯ 1500ನೇ ಶ್ರೇಣಿ, ಧ್ರೂಪ್ ಚವಾಣ್ ಅವರು ಬಿಎಸ್ಸಿ (ಕೃಷಿ) ವಿಭಾಗದಲ್ಲಿ ರಾಜ್ಯ 2367ನೇ ಶ್ರೇಣಿ ಹಾಗೂ ರೋಹಿತ್ ಅವರು ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯ 5452ನೇ ಶ್ರೇಣಿ ಪಡೆದಿದ್ದಾರೆ.

ಇದಲ್ಲದೆ, ಜಿ. ಶ್ರೀ ಪ್ರಣವಿ ಅವರು COMEDK UGET-2026 ಪರೀಕ್ಷೆಯಲ್ಲಿ ಅಖಿಲ ಭಾರತ (All India) 3386ನೇ ಶ್ರೇಣಿ ಪಡೆದು ಕಾಲೇಜಿಗೆ ಮತ್ತೊಂದು ಹೆಗ್ಗಳಿಕೆಯನ್ನು ತಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande