
ಕುರುಗೋಡು, 27 ಜೂನ್ (ಹಿ.ಸ.) :
ಆ್ಯಂಕರ್ : ಇಲ್ಲಿಗೆ ಸಮೀಪದ ಕ್ಯಾದಿಗೆಹಾಳು ಗ್ರಾಮದಲ್ಲಿ ಮೊಹರಂ ಹಬ್ಬದ ಅಲಾಯಿ ಕುಣಿಯನ್ನು ಶುಕ್ರವಾರ ರಾತ್ರಿ ವೇಳೆ ದಾಟುವಾಗ ಕಾಲುಜಾರಿ ಬಿದ್ದಿದ್ದ ಯುವಕನು ಶನಿವಾರ ಮೃತಪಟ್ಟಿದ್ದಾನೆ.
ಮೃತನು ಅಗಸರ ದೇವೇಂದ್ರ (28) ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾದಿಗೆಹಾಳು ಗ್ರಾಮದಲ್ಲಿ ನಡೆದ ಮೊಹರಂ ಹಬ್ಬದ ಆಚರಣೆಯಲ್ಲಿ ಶುಕ್ರವಾರ ರಾತ್ರಿ ಪಂಜು ಮತ್ತು ಡೀಸೆಲ್ ಸಮೀತ ಅಲಾಯಿ ಕುಣಿಯನ್ನು ದಾಟುತ್ತಿದ್ದಾಗ ಕಾಲು ಜಾರಿ ಬಿದ್ದ ದೇವೇಂದ್ರನು, ತೀವ್ರವಾದ ಸುಟ್ಟಗಾಯಗಳಿಂದ ನರಳುತ್ತಿದ್ದನು.
ಗ್ರಾಮಸ್ಥರು ಮತ್ತು ಪೊಲೀಸರು ಸುಟ್ಟ ಗಾಯಗಳಿಂದ ತೀವ್ರವಾಗಿ ಗಾಯಗೊಂಡಿದ್ದ ದೇವೇಂದ್ರನನ್ನು ಬಳ್ಳಾರಿಯ ಮೆಡಿಕಲ್ ಕಾಲೇಜಿಗೆ ತಕ್ಷಣವೇ ಕರೆದುಕೊಂಡು ಬಂದು, ಚಿಕಿತ್ಸೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲ ನೀಡದೇ ದೇವೇಂದ್ರನು ಶನಿವಾರ ಮೃತಪಟ್ಟಿದ್ದಾನೆ.
ಮೃತನು ಒಂದು ವರ್ಷದ ಹಿಂದೆ ವಿವಾಹವಾಗಿದ್ದನು. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್