









ಬೆಂಗಳೂರು, 27 ಜೂನ್ (ಹಿ.ಸ.) :
ಆ್ಯಂಕರ್ : ಶ್ರೀ ಗುರು ಅಡ್ ಮೀಡಿಯಾ ಸಂಸ್ಥೆಯ ವತಿಯಿಂದ ಚಲನಚಿತ್ರ ನಟ ಹಾಗೂ ಜಾಹೀರಾತು ನಿರ್ದೇಶಕ ಮುಕುಂದ ದೊಡ್ಡೇರಿರವರು ಪುನೀತ್ ರಾಜಕುಮಾರ್ ಸವಿ ನೆನಪಿನ ಅಪ್ಪು ನಮನ ಕಾರ್ಯಕ್ರಮವನ್ನು ಇತ್ತೀಚೆಗೆ ನಯನ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೌಂಡ್ ಆಫ್ ಮ್ಯೂಸಿಕ್ ಗಾಯಕ ಗುರುರಾಜ್, ಸೌತ್ ಕಿಂಗ್ ವಾದ್ಯ ಗೋಷ್ಠಿಯ ಗಾಯಕ ಅನಿಲ್. ಆರ್. ಕೆ. ಹಾಗೂ ಶ್ರೀಮತಿ ಶಾಂತ ಅನಿಲ್, ನಿವೃತ್ತ ಎಸ್ ಬಿ ಐ ಮುಖ್ಯ ವ್ಯವಸ್ಥಾಪಕ ರುದ್ರಮುನಿ, ಎಸ್. ರವಿವರ್ಮ ಆರ್ಟ್ಸ್ ಮಾಲೀಕ ರಾಧಾ ಕೃಷ್ಣ ವಿಶ್ವಕರ್ಮ, ರೀನಾಕ್ ಕಂಪನಿ ಸೇಲ್ಸ್ ಮ್ಯಾನೇಜರ್ ರಾಜು, ಡಬ್ಬಿಂಗ್ ಮಂಜುನಾಥ್ ಭಾಗವಹಿಸಿದ್ದರು.
ಗಾಯಕರಾದ ಕಿಟ್ಟಿರಾಜ್, ಕೆನರಾ ಬ್ಯಾಂಕ್ ನಾಗರಾಜ್ ತಾತಿಯನ ಜುಯೇವ ಮುಂತಾದವರು ಪುನೀತ್ ರಾಜಕುಮಾರ್ ರವರ ಹಾಡುಗಳನ್ನು ಹಾಡಿ ರಂಜಿಸಿದರು. ಶಿವಮೊಗ್ಗ ಭಾಸ್ಕರ್ ರವರು ಅಚ್ಚು ಕಟ್ಟಾಗಿ ಕಾರ್ಯಕ್ರಮ ನಿರೂಪಸಿದರು.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ