
ಕೋಲಾರ, ೨೭ ಜೂನ್ (ಹಿ.ಸ) :
ಆ್ಯಂಕರ್ : ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕೆಂಪೇಗೌಡರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಮಾಜಕ್ಕಾಗಿ ಕೆರೆಗಳನ್ನು ಕಟ್ಟಿದ ಅವರ ಆದರ್ಶ ಪಾಲಿಸೋಣ ಎಂದು ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ.ಲೀಲಾ ಮಕ್ಕಳಿಗೆ ಕರೆ ನೀಡಿದರು.
ಸುಮಾರು ೫೦೦ ವರ್ಷಗಳ ಹಿಂದೆಯೇ ನಗರವೊಂದರ ನಿರ್ಮಾಣ, ಜನಸಮುದಾಯಕ್ಕಾಗಿ ಕೆರೆಗಳ ಕಟ್ಟುವ ಕಾಯಕ ಮಾಡಿದ ಕೆಂಪೇಗೌಡರು ನಮಗೆ ಆದರ್ಶವಾಗಿದ್ದು, ನಮ್ಮ ಹೆಮ್ಮೆಯ ರಾಜಧಾನಿ ಕಟ್ಟಿದ ಅವರ ಸ್ಮರಣೆ ಅಗತ್ಯ ಎಂದು ಎಂದು ತಿಳಿಸಿದರು.
ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಮಾತನಾಡಿ,ಕೆಂಪೇಗೌಡರು ಬೆಂಗಳೂರನ್ನು ಸರ್ವಧರ್ಮ ಸಮಾನತೆಯ ಸುಂದರ ನಗರವನ್ನಾಗಿಸುವಲ್ಲಿ ಮಾಡಿದ ಕಾರ್ಯವನ್ನು ಸ್ಮರಿಸಿ, ಅವರ ಆದರ್ಶ ಪಾಲಿಸೋಣ, ನಾವೂ ಅವರಂತೆ ಸಮಾಜಮುಖಿ ಕೆಲಸ ಮಾಡೋಣ ಎಂದು ಮಕ್ಕಳಿಗೆ ಕರೆ ನೀಡಿದರು.
ಬೆಂಗಳೂರನ್ನು ಎಲ್ಲ ಸಮಾಜದವರಿಗೆ ಅವರವರ ವೃತ್ತಿಗೆ ಅನುಗುಣವಾಗಿ, ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೆಂಪೇಗೌಡರು ಪೇಟೆ,ಬಡಾವಣೆಗಳನ್ನು ನಿರ್ಮಿಸಲು ಪಣ ತೊಟ್ಟಿದ್ದು, ಅಂತಹ ವ್ಯಕ್ತಿಯ ಸ್ಮರಣೆ ಹೆಗ್ಗಳಿಕೆಯ ವಿಚಾರ ಎಂದರು.
ಎಸ್ಡಿಎ0ಸಿ ನಿಕಟಪೂರ್ವ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ರೈತರಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ನೀರಿನ ಸೌಕರ್ಯ ಕಲ್ಪಿಸಿಕೊಟ್ಟರೆ ರೈತರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂಬುದನ್ನು ಕೆಂಪೇಗೌಡರು ಅಂದೇ ಅರಿತು ಕಾರ್ಯಗತಗೊಳಿಸಿದ್ದರು ಎಂದು ತಿಳಿಸಿ, ಅವರು ಕಟ್ಟಿದ ಕೆರೆಗಳಲ್ಲಿ ಇಂದು ಹಲವಾರು ಮುಚ್ಚಿಹೋಗಿದ್ದು, ಪ್ರಕೃತಿ ವಿಕೋಪಕ್ಕೆ ಬೆಂಗಳೂರು ಒಳಗಾಗಿದೆ ಎಂದರು.
ಶಾಲೆಯ ಕನ್ನಡ ಶಿಕ್ಷಕ ವೆಂಕಟರೆಡ್ಡಿ ನಾಡಪ್ರಭುವಿನ ಇತಿಹಾಸ ತಿಳಿಸಿ, ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯಕ್ಕಷ್ಟೇ ಸೇವೆ ಮಾಡಿದವರಲ್ಲ. ನಗರವನ್ನು ಈ ರೀತಿ ಕಟ್ಟಿದರೆ ಅಭಿವೃದ್ಧಿಯಾಗುತ್ತದೆ ಎನ್ನುವ ದೂರದೃಷ್ಠಿಯನ್ನು ೫೦೦ ವರ್ಷಗಳ ಹಿಂದೆಯೇ ಹೊಂದಿದ್ದ ಅವರು, ಯಾವುದೇ ತಂತ್ರಜ್ಞಾನವಿಲ್ಲದೆಯೇ ಮಹಾನಗರ ಬೆಂಗಳೂರನ್ನು ನಿರ್ಮಿಸಿದ್ದು, ಇಂದು ಇಡೀ ವಿಶ್ವವೇ ಬೆರಗಾಗಿ ನೋಡುವಂತಾಗಿದೆ ಎಂದರು.
ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಸ್ಥಾನ ಗಳಿಸುವಂತಾಗಲು ಕೆಂಪೇಗೌಡರ ದೂರದೃಷ್ಟಿಯೇ ಕಾರಣವಾಗಿದ್ದು, ಐಟಿ,ಬಿಟಿಯಲ್ಲಿ ವಿಶ್ವಮಟ್ಟದ ಗೌರವಕ್ಕೆ ಪಾತ್ರವಾಗಿದೆ, ಅವರ ಕರೆಗಳನ್ನು ನಿರ್ಮಿಸುವ ದೂರದೃಷ್ಟಿ ಸಮಾಜಮುಖಿಯಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭವಾನಿ, ಸುಗುಣಾ, ಶ್ವೇತಾ, ಶ್ರೀನಿವಾಸಲು, ರಮಾದೇವಿ, ಚೈತ್ರಾ, ನೇತ್ರಾವತಿ, ಜಮುನಾ,ಪವಿತ್ರ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್