ಕೋಲಾರದಲ್ಲಿ ಜೂನ್ ೨೬ ರ ಮಾದಕ ದ್ರವ್ಯ ವಿರೋಧಿ ಮಾಸಾಚಾರಣೆ ಅಂಗವಾಗಿ ಜಾಗೃತಿ ಜಾಥಾ
ಕೋಲಾರದಲ್ಲಿ ಜೂನ್ ೨೬ ರ ಮಾದಕ ದ್ರವ್ಯ ವಿರೋಧಿ ಮಾಸಾಚಾರಣೆ ಅಂಗವಾಗಿ ಜಾಗೃತಿ ಜಾಥಾ
ಮಾದಕ ವಸ್ತುಗಳ ಅಪಾಯದ ಬಗ್ಗೆ ಜಾಗೃತಿ ಮೂಡಿಸಲು ಕೋಲಾರದಲ್ಲಿ ಪೊಲೀಸ ಇಲಾಖೆಯಿಂದ ಜಾಥಾ ನಡೆಸಲಾಯಿತು.


ಕೋಲಾರ, ಜೂನ್ ೨೩ (ಹಿ.ಸ) :

ಆ್ಯಂಕರ್ : ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ (ಜೂನ್ ೨೬) ಮಾಸಾಚಾರಣೆ ಅಂಗವಾಗಿ ಇಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ನಗರಾದ್ಯಂತ ಬೃಹತ್ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 'ಸ್ವೀಪ್' ಚಟುವಟಿಕೆಗಳನ್ನೂ ಆಯೋಜಿಸಲಾಗಿತ್ತು.

ನಗರದ ಪ್ರವಾಸಿ ಮಂದಿರದಿ0ದ ಚಾಲನೆ ಪಡೆದ ಜಾಗೃತಿ ಜಾಥಾವು, ಡೂಮ್ ಲೈಟ್ ವೃತ್ತದ ಮಾರ್ಗವಾಗಿ ಕ್ಲಾಕ್ ಟವರ್, ಹೊಸ ಬಸ್ ನಿಲ್ದಾಣ, ಅಮ್ಮಾವರಿಪೇಟೆ ವೃತ್ತ ಹಾಗೂ ಮೆಕ್ಕೆ ವೃತ್ತದವರೆಗೆ ಸಾಗಿ ಸಾರ್ವಜನಿಕರಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಪ್ರಭು ಎನ್. ಬಡಿಗೇರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಅಪರ ಪೊಲೀಸ್ ವರಿಷ್ಟಾಧಿಕಾರಿ ರವಿಶಂಕರ್ ಸೇರಿದಂತೆ ಹಲವು ಪ್ರಮುಖರು ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande