ಸಮಸ್ತ ಆಪ್ ಬಳಕೆಗೆ ಆಶಾ ಕಾರ್ಯಕರ್ತೆಯರ ವಿರೋಧ
ಸಮಸ್ತ ಆಪ್ ಬಳಕೆಗೆ ಆಶಾ ಕಾರ್ಯಕರ್ತೆಯರ ವಿರೋಧ
ಸಮಸ್ತ ಆ್ಯಪ್ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಆಶಾ ಕಾರ್ಯಕರ್ತೆಯರು ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರವಿ ರವರಿಗೆ ಮನವಿ ಸಲ್ಲಿಸಿದರು.


ಕೋಲಾರ, ಜೂ.೨೩ (ಹಿ.ಸ) :

ಆ್ಯಂಕರ್ : ಸಮಸ್ತ ಆ್ಯಪ್ನ್ನು ಆಶಾ ಪ್ರೋತ್ಸಾಹಧನಕ್ಕೆ ಲಿಂಕ್ ಮಾಡುವುದನ್ನು ಕೈಬಿಡಬೇಕು ಮತ್ತು ಸಮಸ್ತ ಆ್ಯಪ್ ಹಾಗೂ ಇನ್ನಿತರೆ ಮೊಬೈಲ್ ಆ್ಯಪ್ಗಳ ಮೂಲಕ ಕಾರ್ಯನಿರ್ವಹಿಸುವಲ್ಲಿ ಆಶಾ ಕಾರ್ಯಕರ್ತೆಯರಿಗೆ ಎದುರಾಗುತ್ತಿರುವ ತೊಂದರೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಮನವಿ ಸಲ್ಲಿಸಿದರು.

ಸರ್ಕಾರವು ಆಶಾ ಕಾರ್ಯಕರ್ತೆಯರಿಗೆ ಸಮಸ್ತ ಆ್ಯಪ್ ಮೂಲಕ ಕಾರ್ಯನಿರ್ವಹಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಈ ಆ್ಯಪ್ ಬಳಕೆ ಮಾಡುವಲ್ಲಿ ಜಿಲ್ಲೆಯ ಬಹುತೇಕ ಆಶಾ ಕಾರ್ಯಕರ್ತೆಯರು ಈ ಕೆಳಕಂಡ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ

ಈಗಾಗಲೇ ಆಶಾ ಸಾಫ್ಟ್ ಹಾಗೂ ಆರ್.ಸಿ.ಎಚ್ ಪೋರ್ಟಲ್ ಲಿಂಕ್ ಆಗಿದ್ದು ಸುಮಾರು ೧೦ ವರ್ಷಕ್ಕೂ ಮೇಲ್ಪಟ್ಟು ಡಾಟಾ ಎಂಟ್ರಿಯಲ್ಲಿ ಆಡಳಿತಾತ್ಮಕ ಹಾಗೂ ತಾಂತ್ರಿಕ ದೋಷಗಳಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಪ್ರೋತ್ಸಾಹಧನ ಬಾರದೆ ಆರ್ಥಿಕ ನಷ್ಟವಾಗಿದೆ. ಸಮಸ್ತ ಆ್ಯಪ್ ನಿಂದ ಈ ಆರ್ಥಿಕ ನಷ್ಟ ಮುಂದುವರೆಯಲಿದೆ ಆದ್ದರಿಂದ ಸಮಸ್ತ ಆ್ಯಪ್ನ್ನು ಆಶಾ ಪ್ರೋತ್ಸಾಹಧನಕ್ಕೆ ಲಿಂಕ್ ಮಾಡುವುದನ್ನು ಕೈಬಿಡಬೇಕು. ಗುಣಮಟ್ಟದ ಮೊಬೈಲ್ ಇಲ್ಲದಿರುವುದು: ಆಶಾ ಕಾರ್ಯಕರ್ತೆಯರ ಬಳಿ ಇಲಾಖೆಯ ಕೆಲಸಕ್ಕೆ ಪೂರಕವಾದ ಹೆಚ್ಚಿನ ಸಾಮರ್ಥ್ಯದ (ಹೈ-ಎಂಡ್) ಸ್ಮಾರ್ಟ್ ಪೋನ್ ಇಲ್ಲ ಎಂದು ತಿಳಿಸಿದ್ದಾರೆ.

ಹಳೆಯ ಹಾಗೂ ಕಡಿಮೆ ಸಾಮರ್ಥ್ಯದ ಮೊಬೈಲ್ಗಳಲ್ಲಿ 'ಸಮಸ್ತ' ಆ್ಯಪ್ ಸರಿಯಾಗಿ ಇನ್ಟಾಲ್ ಆಗುತ್ತಿಲ್ಲ. ಮತ್ತು ಫೋನ್ಗಳು ಪದೇ ಪದೇ ಹ್ಯಾಂಗ್ ಆಗುತ್ತಿವೆ. ಇಲಾಖೆಯಿಂದ ಮೊಬೈಲ್ ನೀಡದಿರುವುದು: ಇಲಾಖೆಯು ಡಿಜಿಟಲ್ ಕೆಲಸವನ್ನು ಕಡ್ಡಾಯಗೊಳಿಸಿದೆಯಾದರೂ, ಕಾರ್ಯನಿರ್ವಹಿಸಲು ಅಗತ್ಯವಿರುವ ಯಾವುದೇ ಅಧಿಕೃತ ಟ್ಯಾಬ್ಲೆಟ್ ಅಥವಾ ಮೊಬೈಲ್ ಸಾಧನಗಳನ್ನು ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.

ಮೊಬೈಲ್ ಆ್ಯಪ್ನಲ್ಲಿ ಮಾಡಬೇಕಾದ ಹೆಚ್ಚುವರಿ ದಾಖಲಾತಿ ಕೆಲಸವು, ಈಗಿರುವ ಕ್ಷೇತ್ರ ಕಾರ್ಯದ ಹೊರೆಯ ಜೊತೆಗೆ ಅತಿಯಾದ ಒತ್ತಡವನ್ನು ಸೃಷ್ಟಿಸುತ್ತಿದೆ, ಇದು ಆಶಾ ಕಾರ್ಯಕರ್ತೆಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಸಿಂಕ್ರನೈಜೇಷನ್ ವೈಫಲ್ಯ: ಆಫ್ಲೈನ್ನಲ್ಲಿ ಎಂಟರ್ ಮಾಡಿದ್ದು ಆನ್ಲೈನ್ಗೆ ಅಪ್ಲೋಡ್ ಆಗುವುದಿಲ್ಲ. ೧೧. ದಾಖಲೆಗಳ ನಷ್ಟ - ಗಂಭೀರ ಸಮಸ್ಯೆ. ಈಗಾಗಲೇ ಎಂಟರ್ ಮಾಡಿದ ದಾಖಲೆಗಳು ಕಣ್ಮರೆಯಾಗುತ್ತವೆ. ಡುಪ್ಲಿಕೇಟ್ ಎಂಟ್ರಿ: ಒಂದೇ ದಾಖಲೆಯನ್ನು ಪುನಃ ಪುನಃ ಎಂಟರ್ ಮಾಡಬೇಕಾಗಿ ಬರುತ್ತದೆ. ರಿಪೋರ್ಟ್ ತಾರತಮ್ಯ: ಆ್ಯಪ್ ನಲ್ಲಿ ತೋರಿಸುವ ದಾಖಲೆಗಳು ಮತ್ತು ನಿಜವಾದ ಭೌತಿಕ ದಾಖಲೆಗಳಲ್ಲಿ ವ್ಯತ್ಯಾಸ ಇರುತ್ತದೆ. ಎಂದು ತಿಳಿಸಿದ್ದಾರೆ.

ಒಟ್ಟಾರೆ ಆ್ಯಪ್ ಸುಧಾರಣೆ ಅಗತ್ಯವಿದೆ. ಆ್ಯಪ್ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿದರೂ ಸಕಾಲಿಕ ತಾಂತ್ರಿಕ ಪರಿಹಾರ ಒದಗಿಸುವ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಗಳು ಮುಂದುವರಿಯುತ್ತಲೇ ಇವೆ. ಸಮಸ್ತ ಆ್ಯಪ್ ನಿರ್ವಹಣೆಗೆ ಪ್ರೋತ್ಸಾಹ ಧನ ನಿಗದಿಯಾಗಿರುವುದಿಲ್ಲ. ಮೇಲ್ಕಂಡ ಎಲ್ಲಾ ಕಾರಣಗಳಿಂದ, ಸಮಸ್ತ ಆ್ಯಪ್ ಮತ್ತು ಇನ್ನಿತರೆ ಯಾವುದೇ ಮೊಬೈಲ್ ಆ್ಯಪ್ನ್ನು ಪ್ರಸ್ತುತ ಸ್ವರೂಪದಲ್ಲಿ ಮೊಬೈಲ್ಗೆ ಅಳವಡಿಸಿಕೊಂಡು ಕಾರ್ಯನಿರ್ವಹಿಸುವುದು ಆಶಾ ಕಾರ್ಯಕರ್ತೆಯರಿಗೆ ಅತ್ಯಂತ ಕಷ್ಟಸಾಧ್ಯವಾಗಿದೆ. ಹಾಗೆಯೇ ಈ ಕಾರಣಗಳಿಂದ ಸಮಸ್ತ ಆ್ಯಪ್ನ್ನು ಆಶಾ ಪ್ರೋತ್ಸಾಹಧನಕ್ಕೆ ಲಿಂಕ್ ಮಾಡುವುದನ್ನು ಒಪ್ಪುವುದಿಲ್ಲ. ಆಶಾ ಕಾರ್ಯಕರ್ತೆಯರು ತಂತ್ರಜ್ಞಾನ ವಿರೋಧಿಗಳಲ್ಲ. ಆದರೆ, ಮೂಲಭೂತ ಸೌಕರ್ಯಗಳೇ ಇಲ್ಲದೆ ಕೇವಲ ಆ್ಯಪ್ ಮೂಲಕ ಕೆಲಸ ಮಾಡಿ ಎಂದು ಒತ್ತಡ ಹೇರುವುದು ಎಷ್ಟು ನ್ಯಾಯ ಸಮ್ಮತ ಡಿಜಿಟಲ್ ದಾಖಲಾತಿ ಪ್ರಕ್ರಿಯೆಯಿಂದಾಗಿ ಆಶಾಗಳು ಜನರ ಆರೋಗ್ಯ ಸೇವೆ ಕಡೆಗೆ ಗಮನ ಹರಿಸುವುದಕ್ಕಿಂತ, ಮೊಬೈಲ್ ದಾಖಲೆಗಳಿಗೆ ಸಮಯ ವ್ಯರ್ಥ ಮಾಡುವಂತಾಗುತ್ತದೆ. ಆದ್ದರಿಂದ ಈ ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande