
ನವದೆಹಲಿ, 22 ಜೂನ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ದೆಹಲಿಯ ಸಿಜಿಒ ಸಂಕೀರ್ಣದಲ್ಲಿ ಸಿಐಎಸ್ಎಫ್ನ ಹೊಸ ಒಂಬತ್ತು ಮಹಡಿಗಳ ಮುಖ್ಯಾಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಸುಮಾರು 75.78 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟಡವು ಪಡೆಯ ಆಡಳಿತ ಮತ್ತು ಕಾರ್ಯಾಚರಣೆಗಳ ಪ್ರಮುಖ ಕೇಂದ್ರವಾಗಲಿದೆ.
ಇದೇ ವೇಳೆ 136.03 ಕೋಟಿ ರೂ. ಮೌಲ್ಯದ ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಲಾಯಿತು. ಹೈದರಾಬಾದ್ ರಾಷ್ಟ್ರೀಯ ಕೈಗಾರಿಕಾ ಭದ್ರತಾ ಅಕಾಡೆಮಿಯ ಹೊಸ ತರಬೇತಿ ಕಟ್ಟಡ ಮತ್ತು ಭೋಜನಾಲಯ ಸೇರಿದಂತೆ ಮೂರು ಯೋಜನೆಗಳು ಇದರಲ್ಲಿ ಸೇರಿವೆ.
ಕಾರ್ಯಕ್ರಮದಲ್ಲಿ ಕರ್ತವ್ಯದ ವೇಳೆ ಮೃತಪಟ್ಟ ಸಿಐಎಸ್ಎಫ್ ಸಿಬ್ಬಂದಿಯ ಕುಟುಂಬಗಳಿಗೆ ಒಂದು ಕೋಟಿ ರೂ. ಆರ್ಥಿಕ ನೆರವು ವಿತರಿಸಲಾಯಿತು. ಅಂಗವಿಕಲ ಅವಲಂಬಿತ ಮಕ್ಕಳಿಗೆ ವಿಶೇಷ ಮೋಟಾರು ಚಾಲಿತ ಗಾಲಿ ಕುರ್ಚಿ ಗಳನ್ನೂ ನೀಡಲಾಯಿತು.
ಸಿಐಎಸ್ಎಫ್ ಮಹಾನಿರ್ದೇಶಕ ಪ್ರವೀರ್ ರಂಜನ್ ಮಾತನಾಡಿ, ಸೈಬರ್ ದಾಳಿ, ಡ್ರೋನ್ ಗಳು ಮತ್ತು ತಂತ್ರಜ್ಞಾನ ಆಧಾರಿತ ಭದ್ರತಾ ಸವಾಲುಗಳನ್ನು ಎದುರಿಸಲು ಪಡೆ ತನ್ನ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ ಎಂದು ತಿಳಿಸಿದರು. ಜೊತೆಗೆ ಹರಿಯಾಣದ ನೂಹ್ನಲ್ಲಿ 1,024 ಸಿಬ್ಬಂದಿಯ ಮೊದಲ ಸಂಪೂರ್ಣ ಮಹಿಳಾ ಮೀಸಲು ಬೆಟಾಲಿಯನ್ ರಚನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಾಗಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.