ಯೋಗವು ಭಾರತದ ಅಮೂಲ್ಯ ಕೊಡುಗೆ : ಡಿ.ಕೆ. ಶಿವಕುಮಾರ್
ಬೆಂಗಳೂರು, 21 ಜೂನ್ (ಹಿ.ಸ.) : ಆ್ಯಂಕರ್ : ಯೋಗವು ಮಾನವಕುಲಕ್ಕೆ ಭಾರತದ ಶಾಶ್ವತ ಹಾಗೂ ಅಮೂಲ್ಯ ಕೊಡುಗೆಯಾಗಿದ್ದು, ಇಂದು ಅದು ಆರೋಗ್ಯ, ಸೌಹಾರ್ದತೆ ಮತ್ತು ಸಮಗ್ರ ಕಲ್ಯಾಣಕ್ಕಾಗಿ ಜಾಗತಿಕ ಚಳವಳಿಯಾಗಿ ಬೆಳೆದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನದ ಅ
Dks post


ಬೆಂಗಳೂರು, 21 ಜೂನ್ (ಹಿ.ಸ.) :

ಆ್ಯಂಕರ್ : ಯೋಗವು ಮಾನವಕುಲಕ್ಕೆ ಭಾರತದ ಶಾಶ್ವತ ಹಾಗೂ ಅಮೂಲ್ಯ ಕೊಡುಗೆಯಾಗಿದ್ದು, ಇಂದು ಅದು ಆರೋಗ್ಯ, ಸೌಹಾರ್ದತೆ ಮತ್ತು ಸಮಗ್ರ ಕಲ್ಯಾಣಕ್ಕಾಗಿ ಜಾಗತಿಕ ಚಳವಳಿಯಾಗಿ ಬೆಳೆದಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಇಂದಿನ ವೇಗದ ಜೀವನಶೈಲಿಯಲ್ಲಿ ಯೋಗವು ಸಮತೋಲನ, ಜಾಗೃತಿ ಮತ್ತು ಆಂತರಿಕ ಶಕ್ತಿಯ ಮಹತ್ವವನ್ನು ನೆನಪಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಾಚೀನ ಭಾರತೀಯ ಪರಂಪರೆಯಾದ ಯೋಗವು ಆರೋಗ್ಯಕರ ಜೀವನಶೈಲಿಗೆ ಪ್ರೇರಣೆಯಾಗಿದ್ದು, ಮುಂದಿನ ಪೀಳಿಗೆಗಳನ್ನು ಹೆಚ್ಚು ಶಾಂತಿಯುತ, ಆರೋಗ್ಯಕರ ಮತ್ತು ಜಾಗೃತ ಬದುಕಿನತ್ತ ಮುನ್ನಡೆಸಲಿ ಎಂದು ಅವರು ಆಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande