ಹಿಮಾಲಯದ ಹಿಮಗಡ್ಡೆಗಳ ನಡುವೆ ಯೋಧರ ಯೋಗ
ಅಂತಾರಾಷ್ಟ್ರೀಯ
Warrior yoga


ಲೇಹ್ (ಲಡಾಖ್),21 ಜೂನ್ (ಹಿ.ಸ.) :

ಆ್ಯಂಕರ್ : ಹಿಮಭರಿತ ಪರ್ವತಗಳು, ಶೂನ್ಯಕ್ಕಿಂತ ಕಡಿಮೆ ತಾಪಮಾನ ಮತ್ತು ಸವಾಲಿನ ಪರಿಸ್ಥಿತಿಗಳ ನಡುವೆಯೂ ಯೋಗದ ಬಗ್ಗೆ ಇರುವ ಉತ್ಸಾಹಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು ಲಡಾಖ್ನ ಪ್ಯಾಂಗೊಂಗ್ ತ್ಸೋ ಪ್ರದೇಶ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ 47ನೇ ಬೆಟಾಲಿಯನ್ ಸಿಬ್ಬಂದಿ ಪ್ಯಾಂಗೊಂಗ್ ತ್ಸೋ ಸರೋವರದ ದಡದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.

ಹಿಮಾಲಯದ ಎತ್ತರದ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಯೋಗಾಸನಗಳು ಮತ್ತು ಪ್ರಾಣಾಯಾಮದ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮಹತ್ವವನ್ನು ಸಾರಿದರು. ಹಿಮಾಚ್ಛಾದಿತ ಕಣಿವೆಗಳ ನಡುವೆ ನಡೆದ ಈ ಯೋಗಾಭ್ಯಾಸ ಎಲ್ಲರ ಗಮನ ಸೆಳೆಯಿತು.

ಯೋಗವು ಕೇವಲ ವ್ಯಾಯಾಮವಲ್ಲ; ಆರೋಗ್ಯಕರ ಜೀವನಶೈಲಿ, ಮಾನಸಿಕ ನೆಮ್ಮದಿ ಮತ್ತು ಆಂತರಿಕ ಶಾಂತಿಗೆ ದಾರಿಯಾಗಿದೆ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಲಾಯಿತು. ಹಿಮಾಲಯದ ಶಿಖರಗಳಿಂದ ಹಿಡಿದು ವಿಶ್ವದ ವಿವಿಧ ರಾಷ್ಟ್ರಗಳವರೆಗೆ ಯೋಗ ಇಂದು ಜಾಗತಿಕ ಜನಾಂದೋಲನವಾಗಿ ಬೆಳೆದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande