ಬಂಗಾರಪೇಟೆ ಪೊಲೀಸರಿಂದ ಮನೆ ಕನ್ನ ಕಳವು ಆರೋಪಿಯ ಬಂಧನ
ಬಂಗಾರಪೇಟೆ ಪೊಲೀಸರಿಂದ ಮನೆ ಕನ್ನ ಕಳವು ಆರೋಪಿಯ ಬಂಧನ
ಬಂಗಾರಪೇಟೆ ಪೊಲೀಸರು ಬಂಧಿಸಿರುವ ಮನೆ ಕಳವು ಆರೋಪಿ ನರೇಶ್


ಕೋಲಾರ, ೧೧ ಜೂನ್ (ಹಿ.ಸ) :

ಆ್ಯಂಕರ್ : ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಮನೆ ಕಳವು ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ಸುಮಾರು ಎಂಟು ಲಕ್ಷ ರೂಪಾಯಿ ಮೌಲ್ಯದ ೮೦ ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಬಂಗಾರಪೇಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾ.೦೩ ರಂದು ರಾತ್ರಿ ಬಂಗಾರಪೇಟೆಯ ಬಾಬಾನಗರದಲ್ಲಿ ವಾಸವಾಗಿರುವ ದೂರುದಾರರಾದ ಮಾದವಿ ರವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಮುರಿದು ಮನೆಯ ಬಿರುವಿನಲ್ಲಿದ್ದ ೭೩ ಗ್ರಾಂ ಚಿನ್ನದ ಆಭರಣಗಳು ಮತ್ತು ರೂ.೭೦,೦೦೦/- ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಘಟನೆಯ ಬಗ್ಗೆ ಬಂಗಾರಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತ್ತು.

ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಲು ಬಂಗಾರಪೇಟೆ ಪೊಲೀಸ್ ಠಾಣೆ ನಿರೀಕ್ಷಕರಾದ ರವಿಕುಮಾರ್. ಸಿ ರವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು. ವಿಶೇಷ ಕಾರ್ಯಚರಣೆ ನಡೆಸಿದ ಅಪರಾಧ ಪತ್ತೆ ತಂಡದವರು ಕೆಜಿಎಫ್ ಆಂಡ್ರಸನ್ಪೇಟೆ ನಿವಾಸಿ ಆರೋಪಿ ನರೇಶ್ ರವರನ್ನು ಬಂಧಿಸಿ ಕಳುವು ಮಾಡಲಾಗಿದ್ದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ಸ್ಪೆಕ್ಟರ್ ರವಿಕುಮಾರ್. ಸಿ ಮತ್ತು ಸಿಬ್ಬಂದಿಯವರಾದ ಮಹೇಂದ್ರ ಕುಮಾರ್, ಮಂಜುನಾಥ್, ಷಹಜಹಾನ್ ನದಾಪ್, ವೇಣುಗೋಪಾಲ್, ವಿಜಯ್ಕುಮಾರ್, ಮಂಜುನಾಥ್, ಶ್ರೀನಿವಾಸ್, ಮುನೇಂದ್ರ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿವಾಂಶು ರಜಪೂತ್ ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande