





ಕುಡತಿನಿ, 12 ಜೂನ್ (ಹಿ.ಸ.) :
ಆ್ಯಂಕರ್ : ಕುಡತಿನಿ ಪಟ್ಟಣದ ಎರಡು ರಿಕ್ರಿಯೇಷನ್ ಕ್ಲಬ್ ಗಳ ಮೇಲೆ ಪೊಲೀಸರು ದಾಳಿ ನಡೆಸಿ, 69 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ
ಒಟ್ಟು ರೂ 2,14,602/- ಹಣ, 40 ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ, ಎರಡೂ ರಿಕ್ರಿಯೇಷನ್ ಕ್ಲಬ್ ಗಳ ಪರವಾನಿಗೆಗಳನ್ನು ರದ್ದು ಮಾಡಲು ಶಿಫಾರಸು ಮಾಡಿದ್ದಾರೆ.
ಬಸವೇಶ್ವರ ಸ್ಪೋಟ್ರ್ಸ ಅಂಡ್ ರಿಕ್ರಿಯೆಷನ್ ಅಸೋಸಿಯೇಷನ್ ಮತ್ತು ಗುರುರಾಯರ ರಿಕ್ರಿಯೆಷನ್ ಅಸೋಸಿಯೇಷನ್ ಕ್ಲಬ್ ವಿರುದ್ದ ಪ್ರಕರಣ ದಾಖಲಿಸಿರುವ ಪೊಲೀಸರು, ಒಟ್ಟು 69 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ರೂ 2,14,602/- ಹಣ, 40 ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳ ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್