ಬಳ್ಳಾರಿ : ಜಿಟಿಟಿಸಿ ಕೇಂದ್ರದಲ್ಲಿ ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಳ್ಳಾರಿ, 19 ಜೂನ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಇಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಬಹುಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ವಿಭಾಗಗಳ ಪೂರ್ಣಾವಧಿ ಅತಿಥಿ ಬೋಧಕರ ಹುದ
ಬಳ್ಳಾರಿ : ಜಿಟಿಟಿಸಿ ಕೇಂದ್ರದಲ್ಲಿ ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಬಳ್ಳಾರಿ, 19 ಜೂನ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಇಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಬಹುಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ವಿಭಾಗಗಳ ಪೂರ್ಣಾವಧಿ ಅತಿಥಿ ಬೋಧಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಟಿಟಿಸಿ ಸಂಸ್ಥೆಯ ಪ್ರಾಂಶುಪಾಲ ಮುತ್ತಣ್ಣ ದಮರ್ಂತಿ ಅವರು ತಿಳಿಸಿದ್ದಾರೆ.

ಬೋಧಕ ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ :

ಎಲೆಕ್ಟ್ರಿಕಲ್ : ಹುದ್ದೆ ಸಂಖ್ಯೆ 02, 3 ರಿಂದ 5 ವರ್ಷಗಳ ಅನುಭವ, ವಿದ್ಯಾರ್ಹತೆ ಡಿಪ್ಲೋಮಾ/ಇಇಇ ಇನ್ ಬಿಇ.

ಎಲೆಕ್ಟ್ರಾನಿಕ್ಸ್ : 01 ಹುದ್ದೆ, 3 ರಿಂದ 5 ವರ್ಷಗಳ ಅನುಭವ, ವಿದ್ಯಾರ್ಹತೆ ಬಿಇ/ಎಂ.ಟೆಕ್ ಇನ್ ಇ&ಸಿ.

ಮೆಕಾನಿಕಲ್ : ಹುದ್ದೆ 01, 2 ರಿಂದ 5 ವರ್ಷಗಳ ಅನುಭವ, ವಿದ್ಯಾರ್ಹತೆ ಡಿಪ್ಲೋಮಾ/ಬಿಇ/ಎಂ.ಟೆಕ್/ಡಿಟಿಡಿಎಂ/ಮೆಕಾನಿಕಲ್.

ಕಂಪ್ಯೂಟರ್ ಸೈನ್ಸ್ : ಹುದ್ದೆ 01, 2 ರಿಂದ 5 ವರ್ಷಗಳ ಅನುಭವ, ಬಿಇ/ಎಂ.ಟೆಕ್ ಇನ್ ಸಿಎಸ್.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ವಿಳಾಸ: ಜಿ.ಟಿ.ಟಿ.ಸಿ., ಐಶ್ವರ್ಯ ಕಾಲೋನಿ (ಐ.ಟಿ.ಐ. ಕ್ಯಾಂಪಸ್), ಕಂಟೋನ್ಮೆಂಟ್, ಬಳ್ಳಾರಿ - 583104 ಅಥವಾ ಮೊ.9620057086, ದೂ.08392-200087 ಗೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande