ವಿಜಯನಗರ ಕಾಲೋನಿಯಲ್ಲಿ ಮಕ್ಕಳ ಹಕ್ಕುಗಳು, ಕಾನೂನು & ಸುರಕ್ಷತೆ ಜಾಗೃತಿ
ಕೊಪ್ಪಳ, 19 ಜೂನ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಭಾಗ್ಯನಗರದ ವಿಜಯನಗರ ಕಾಲೋನಿಯಲ್ಲಿ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜ
Awareness of children's rights, law & safety


Awareness of children's rights, law & safety


ಕೊಪ್ಪಳ, 19 ಜೂನ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಭಾಗ್ಯನಗರದ ವಿಜಯನಗರ ಕಾಲೋನಿಯಲ್ಲಿ ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರೀವಿಕ್ಷಣಾಧಿಕಾರಿಗಳಾದ ಶಿವಲೀಲಾ ವನ್ನೂರು ಅವರು ಮಾತನಾಡಿ, ಮಕ್ಕಳೆಂದರೆ ಹೆಣ್ಣಿರಲಿ ಗಂಡು ಇರಲಿ 18 ವರ್ಷದೊಳಗಿನವರನ್ನು ನಾವು ಮಕ್ಕಳೇಂದು ಕರೆಯುತ್ತೇವೆ. ಮಕ್ಕಳ ನಡುವೆ ಎಂತಹದ್ದೇ ಕಾರಣಕ್ಕೂ ತಾರತಮ್ಯ ಮಾಡದಂತೆ ಹಾಗೂ ಮಕ್ಕಳಲ್ಲಿ ಕೀಳರಿಮೆಯನ್ನು ಉಂಟುಮಾಡದಂತೆ ಎಲ್ಲ ವಯಸ್ಕರು ಎಚ್ಚರ ವಹಿಸಬೇಕು. ಹುಟ್ಟಿದ ಎಲ್ಲ ಮಕ್ಕಳು ಆರೋಗ್ಯದಿಂದ ಜೀವಿಸುವ ಮತ್ತು ಬೆಳೆಯುವ ಹಕ್ಕನ್ನು ಸ್ವಾಭಾವಿಕವಾಗಿ ಹೊಂದಿದ್ದಾರೆ. ಹಿರಿಯರು ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಪ್ರತಿಯೊಂದು ಮಗು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಮಕ್ಕಳು ಮತ್ತು ಮಹಿಳೆಯರು ಭಿಕ್ಷಾಟನೆಗೆ ತೆರಳದಂತೆ ಕುಟುಂಬ ಹಾಗೂ ಸ್ಥಳಿಕರು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರದಿಂದ ಮಹಿಳೆಯರಿಗಾಗಿ ದೊರೆಯುವಂತಹ ಉದ್ಯೋಗಿನಿ ಯೋಜನೆ, ಗೃಹಲಕ್ಷ್ಮೀ ಯೋಜನೆಗಳ ಲಾಭ ಪಡೆದುಕೊಂಡು ವಿವಿಧ ಕೌಶಲ್ಯ ಕಲಿತು ವ್ಯಾಪಾರ ಮಾಡುವ ನಿಟ್ಟಿನಲ್ಲಿ ಸ್ವಾಲಂಬಿ ಬದಕು ಮಾಡಬೇಕು. ಮಕ್ಕಳಿಗೆ ಇರುವಂತಹ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-2009ರ ಅಡಿಯಲ್ಲಿ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು.

ತಂದೆ-ತಾಯಿ ತೀರಿದ ಮಗು ಪೋಷಕರೊಂದಿಗೆ ವಾಸವಾಗಿದ್ದು ಶಾಲೆಗೆ ಹೋಗುತ್ತಿದ್ದರೆ ಅಂತಹ ಮಕ್ಕಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಪ್ರಾಯೋಜಿಕತ್ವ ಯೋಜನೆ ಸೌಲಭ್ಯ ಪಡೆದು ಆರ್ಥಿಕವಾಗಿ ಸಂಕಷ್ಟದಿಂದ ದೂರವಾಗುವಂತೆ ಅನುಕೂಲತೆಯನ್ನು ಪಡೆಯಬೇಕು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ-2012 ರಲ್ಲಿ ಜಾರಿಗೆ ಬಂದಿದ್ದು, ಯಾವುದೇ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದರೆ ಮತ್ತು ಮಕ್ಕಳ ದೆಹದ ಮೇಲೆ ಅಸುರಕ್ಷತ ಸ್ಪರ್ಶ ಮಾಡಿದರೆ ಘಟನೆಯ ಸ್ವರೂಪದ ಆಧಾರದ ಮೇಲೆ 20 ರಿಂದ ಜೀವಾವಧಿ ಮತ್ತು ಗಲ್ಲು ಶಿಕ್ಷೆಯನ್ನು ಸಹ ವಿಧಿಸಬಹುದು ಎಂದರು.

ಅಕ್ಕಪಡೆ ಪೊಲೀಸ್ ಅಧಿಕಾರಿ ಸಾವಿತ್ರಿ ಡಿ. ಅವರು ಮಾತನಾಡಿ, ಜಿಲ್ಲೆಯಲ್ಲಿ ರೈಲ್ವೆ ಸ್ಟೇಷನಗಳು, ಬಸ್ಸ್ ನಿಲ್ದಾಣಗಳಲ್ಲಿ, ದೇವಸ್ಥಾನ, ಸಿನಿಮಾ ಟಾಕೇಜ್, ಪ್ರವಾಸಿ ತಾಣಗಳಲ್ಲಿ, ಮಾಲ್ಗಳಲ್ಲಿ, ಬೀದಿಗಳಲ್ಲಿ, ಶಾಲಾ ಕಾಲೇಜ್ಗಳಲ್ಲಿ ಮತ್ತು ಕುಟುಂಬ ಹಾಗೂ ಸಮುದಾಯಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲೆ ದೈಹಿಕ, ಲೈಂಗಿಕ, ಮಾನಸಿಕ ಹಿಂಸೆಗಳು ಏನಾದರು ಯಾವುದೇ ವ್ಯಕ್ತಿ ನೀಡಿದಲ್ಲಿ ಅಕ್ಕಪಡೆಯ ಸಂಖ್ಯೆ 181 ಗೆ ಕರೆ ಮಾಹಿತಿ ನೀಡಿದರೆ, ಆ ಸ್ಥಳಕ್ಕೆ ಅಕ್ಕಪಡೆಯ ತಂಡ ರಕ್ಷಣೆಗಾಗಿ ಧಾವಿಸುತ್ತದೆ. ಹಾಗೂ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ತುರ್ತು ಪೊಲೀಸ್ ಉಚಿತ ಸಹಾಯವಾಣಿ ಸಂಖ್ಯೆ 112 ಗೂ ಸಹ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪ ಅವರು ಮಾತನಾಡಿ, ಬಾಲ್ಯ ವಿವಾಹ, ಬಾಲಕಾರ್ಮಿಕ, ಮಕ್ಕಳ ಭಿಕ್ಷಾಟನೆ ಲೈಂಗಿಕ ದೌರ್ಜನ್ಯ, ಕಾಣಿಯಾದ ಮಗು, ಮಗುಪತ್ತೆ, ಬಿದಿಯಲ್ಲಿ ಬಿಸಾಕಿದ ಮಗು, ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡುಬಂದಲ್ಲಿ ದಿನದ 24 ಗಂಟೆಗಳ ಕಾಲ ಚಾಲನೆಯಲ್ಲಿರುವ ಉಚಿತ ದೂರವಾಣಿ ಸಂಖ್ಯೆ ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಟ್ಟು ಮಗುವಿನ ರಕ್ಷಣೆ ವಿವಿಧ ಇಲಾಖೆಯ ಸಹಯೋಗದೊಂದಿಗೆ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ನಾಗರತ್ನ ಮತ್ತು ಚೈತ್ರ, ಶರಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande