ಪಠ್ಯದ ಜೊತೆಗೆ ಬಹು ಕೌಶಲ್ಯ ಕಲಿಯಲು ವಿದ್ಯಾರ್ಥಿಗಳಿಗೆ ಕರೆ
ಪಠ್ಯದ ಜೊತೆಗೆ ಬಹು ಕೌಶಲ್ಯ ಕಲಿಯಲು ವಿದ್ಯಾರ್ಥಿಗಳಿಗೆ ಕರೆ
ಕೋಲಾರ ಜಿಲ್ಲೆಯ ಕೆಜಿಎಫ್ನ ಬಿಇಎಂಎಲ್ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿAದ ಆಯೋಜಿಸಿದ್ದ ತರಬೇತಿ ಮೇಳವನ್ನು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ  ಕೆ ಶ್ರೀನಿವಾಸ ಉದ್ಘಾಟಿಸಿದರು.


ಕೋಲಾರ, ೧೮ ಜೂನ್ (ಹಿ.ಸ) :

ಆ್ಯಂಕರ್ : ಜಿಲ್ಲೆಯ ಹಲವು ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಪಠ್ಯದ ಜೊತೆ ಬಹು ಕೌಶಲ್ಯವನ್ನು ಹೊಂದಿದ್ದರೆ ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗವನ್ನು ಪಡೆಯುವುದು ಸುಲಭವಾಗುತ್ತದೆ ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಕೆ ಶ್ರೀನಿವಾಸ ಕರೆ ನೀಡಿದರು.

ಜಿಲ್ಲೆಯ ಕೆಜಿಎಫ್ನ ಬಿಇಎಂಎಲ್ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿ0ದ ಆಯೋಜಿಸಿದ್ದ ಶಿಶಿಕ್ಷ, ನಿಯೋಜನೆ ತರಬೇತಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಆಧುನಿಕ ಕೌಶಲ್ಯಗಳನ್ನು ಭೋದಿಸಲು ಅಗತ್ಯವಾದ ಯಂತ್ರೋಪಕರಣಗಳು ಹಾಗೂ ಭೋದನಾ ಸಿಬ್ಬಂದಿ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಲಾಗಿದ್ದು ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಕೌಶಲ್ಯತೆಯನ್ನು ಹೆಚ್ಚಿಸಿಕೊಂಡರೆ ಶೀಘ್ರ ಉದ್ಯೋಗ ದೊರೆಯಲು ಸಹಕಾರಿಯಾಗುತ್ತದೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕೆ.ಜಿ.ಎಫ್ ನಲ್ಲಿ ಆಯೋಜಿಸಲಾದ ಈ ಮೇಳದಲ್ಲಿ ಕೆ.ಜಿ.ಎಫ್, ಮಾಲೂರು ಹಾಗೂ ದೇವರಾಯಸಮುದ್ರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಹಾಗೂ ಹತ್ತು ಅನುದಾನಿತ, ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ೬೮೬ ಅಭ್ಯರ್ಥಿಗಳು ಹಾಗೂ ೧೪ ವಿವಿಧ ಕೈಗಾರಿಕೆ ಸಂಸ್ಥೆಗಳು ಪಾಲ್ಗೊಂಡಿದ್ದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಪರಿಪೂರ್ಣ ಕೌಶಲ್ಯತೆ ಹೊಂದಿರುವ ಮಾನವ ಸಂಪನ್ಮೂಲವಾಗಿ ಪರಿವರ್ತನೆ ಹೊಂದಲು ಸಾಧ್ಯ ಎಂದು ತಿಳಿಸಿದರು. ಕೈಗಾರಿಕಾ ಪರಿಸರದಲ್ಲಿ ಕಾರ್ಯ ನಿರ್ವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ತಂಡವಾಗಿ ಕಾರ್ಯನಿರ್ವಹಿಸುವ ಗುಣ, ಸಂವಹನ ಕೌಶಲ್ಯ, ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಇನ್ನು ಮುಂತಾದ ಕೌಶಲ್ಯಗಳು ಹೆಚ್ಚುತ್ತವೆ. ಶಿಶಿಕ್ಷÄ ತರಬೇತಿ ಪಡೆಯುವಾಗ ಅಭ್ಯರ್ಥಿಗಳಿಗೆ ಸ್ಟೆöÊಫಂಡ್ ನೀಡುವುದರಿಂದ ಆರ್ಥಿಕವಾಗಿ ಪೋಷಕರ ಮೇಲೆ ಅವಲಂಭಿತರಾಗುವುದು ತಪ್ಪುತ್ತದೆ ಹಾಗೂ ಅಭ್ಯರ್ಥಿಗಳು ತಮಗೆ ಅವಶ್ಯಕವಾದ ಸೌಲಭ್ಯಗಳನ್ನು ಪಡೆಯುವದರ ಜೊತೆಗೆ ಪೋಷಕರಿಗೂ ನೆರವಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿ.ಇ.ಎಂ.ಎಲ್ ಕಾರ್ಖಾನೆಯ ತರಬೇತಿ ಅಧಿಕಾರಿ ಮಿನಿ ಲಕ್ಷಿö್ಮÃ ಮಾತನಾಡಿ, ಬಿ.ಇ.ಎಂ.ಎಲ್ ಕಾರ್ಖಾನೆಯಲ್ಲಿ ಲಭ್ಯವಿರುವ ವಿವಿಧ ಶಿಶಿಕ್ಷÄ ತರಬೇತಿ ಯೋಜನೆಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪಾಲ್ಗೊಂಡ ವಿವಿಧ ಖಾಸಗಿ ಕೈಗಾರಿಕೆಗಳ ಪ್ರತಿ ನಿಧಿಗಳು ತಮ್ಮಲ್ಲಿ ಲಭ್ಯವಿರುವ ಶಿಶಿಕ್ಷÄ ತರಬೇತಿ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವೆಂಕಟೇಶ ಮಾತನಾಡಿ, ಈ ರೀತಿಯ ಮೇಳಗಳನ್ನು ಜಿಲ್ಲೆಯ ಹಲವು ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಆಯೋಜಿಸುವಂತೆ ಇಲಾಖೆ ವತಿಯಿಂದ ಸೂಚಿಸಿದ್ದು ಪ್ರಥಮವಾಗಿ ಕೆ.ಜಿ.ಎಫ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇಳವನ್ನು ಆಯೋಜಿಸಿರುವುದಾಗಿ ತಿಳಿಸಿದರು.

ಮೇಳದಲ್ಲಿ ವಿವಿಧ ಕೈಗಾರಿಕೆಗಳಲ್ಲಿ ಲಭ್ಯವಿರುವ ಅಪ್ರೆಂಟಿಸ್ಶಿಪ್, ಶಿಶಿಕ್ಷ ತರಬೇತಿಗೆ ಹಾಗೂ ಕೆಲವು ಕೈಗಾರಿಕೆಗಳಲ್ಲಿ ಶಿಶಿಕ್ಷ ತರಬೇತಿ ಪೂರೈಸಿರುವ ಅಭ್ಯರ್ಥಿಗಳಿಗೆ ಉದ್ಯೋಗಕ್ಕಾಗಿ ಆಯ್ಕೆ ಮಾಡಲಾಯಿತು. ಎಲ್ಲಾ ಕೈಗಾರಿಕಾ ಪ್ರತಿನಿಧಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು

ಸಂಸ್ಥೆಯ ಉಪ ಪ್ರಾಂಶುಪಾಲರಾದ ಕೆ.ಆರ್ ಶ್ರೀನಿವಾಸ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಂಶುಪಾಲರು, ಭೋಧನಾ ಹಾಗೂ ಭೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande