

ಕೊಪ್ಪಳ, 18 ಜೂನ್ (ಹಿ.ಸ.) :
ಆ್ಯಂಕರ್ : ನಗರಸಭೆ ಮುಂದಿನ ಬಲ್ಡೋಟ ಹಾಗೂ ಕಾರ್ಖಾನೆ ಮಾಲಿನ್ಯ ವಿರೋಧಿ 231ನೇ ದಿನದಲ್ಲಿ ಧರಣಿ ಮುಂದುವರೆಯಿತು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಬಲ್ಡೋಟ ಬಿ.ಎಸ್.ಪಿ.ಎಲ್. ಕಂಪನಿಯ ಬೃಹತ್ ಹೂಡಿಕೆ ವಿರೋಧಿಸಿ, ಗಿಣಿಗೇರಿ, ಅಲ್ಲಾನರ, ಹಿರೇಬಗನಾಳ, ಸುತ್ತುವರಿದ 28 ಮಾಲಿನ್ಯಕಾರಿ ಬೃಹತ್ ಕಾರ್ಖಾನೆಗಳನ್ನು ಜನರ ಆರೋಗ್ಯ, ಜೀವ ಉಳಿಸಲು ಶಾಶ್ವತವಾಗಿ ಬಂದ್ ಮಾಡಬೇಕು. ಬಸಾಪುರ ಕೆರೆ ಬಲ್ಡೋಟ ವಶದಿಂದ ಮೂಕ್ತಗೊಳಿಸಬೇಕು.
ನಗರದ ಪೂರ್ವ ಭಾಗದಲ್ಲಿ 2011ರಿಂದ ಬಲ್ಡೋಟ ಮಾಲಿಕತ್ವದ ಎಂಎಸ್ಪಿಎಲ್ ಪೆಲ್ಲೆಟ್ ಘಟಕದ ಕಂದು ಧೂಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದ್ದು ಈ ಘಟಕ ಬಂದ್ ಮಾಡಿ ಜನರ ಆರೋಗ್ಯ ಕಾಪಾಡಬೇಕು. ತುಂಗಭದ್ರಾ ನೀರು ಮಲಿನಗೊಳಿಸುತ್ತಿರುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಚಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಧರಣಿ ಮುಂದುವರೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಉಪನ್ಯಾಸಕ ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ರಾಜಶೇಖರ ಏಳುಭಾವಿ, ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತ್ರಿ ಬಸಾಪುರ, ಉಸ್ಮಾನಸಾಬ್ ಕಮ್ಮಾರ, ಈರಣ್ಣ ಹೊಸಗೇರಿ, ದುರುಗಪ್ಪ ಕನಕಮನಿ, ರಾಮಮ್ಮ ಸಿರವಾರ, ಮಖಬೂಲ್ ರಾಯಚೂರು, ಶಿವಪ್ಪ ಜಲ್ಲಿ, ಸುಂಕಮ್ಮ ಪಡಚಿಂತಿ, ರಣದಪ್ಪ ಕವಲೂರು, ರೇಣುಕಾ ಜಕ್ಕಲಿ, ಗಂಗಮ್ಮ ದೊಡ್ಡಮನಿ, ದುರುಗಮ್ಮ ಕುರುಗೋಡು, ವೆಂಕಟೇಶ ದೊಡ್ಡಮನಿ, ಭೀಮಪ್ಪ ಯಲಬುರ್ಗಾ ಇನ್ನೂ ಅನೇಕರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್