ಜುಲೈ ೧೧ ರಂದು ರಾಷ್ಟ್ರೀಯ ಲೋಕ ಅದಾಲತ್
ಜುಲೈ ೧೧ ರಂದು ರಾಷ್ಟ್ರೀಯ ಲೋಕ ಅದಾಲತ್
ಜುಲೈ ೧೧ ರಂದು ನಡೆಯಲಿರುವ ಲೋಕ ಅದಾಲತ್ ಬಗ್ಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಯಶ್ರೀ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಕೋಲಾರ, ೧೮ ಜೂನ್ (ಹಿ.ಸ) :

ಆ್ಯಂಕರ್ : ಜಿಲ್ಲೆಯಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೋಲಾರ, ಜಂಟಿಯಾಗಿ ಜುಲೈ ೧೧ ರಂದು ರಾಷ್ಟ್ರೀಯ ಲೋಕ ಅದಾಲತ್ ಅನ್ನು ಆಯೋಜಿಸಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಯಶ್ರೀ ತಿಳಿಸಿದ್ದಾರೆ.

ಕೋಲಾರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಈಗಾಗಲೇ ಸಾವಿರಾರು ಪ್ರಕರಣಗಳನ್ನು ಅದಾಲತ್ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಈ ಬಾರಿಯ ವಿಶೇಷ ಅದಾಲತ್ಗಾಗಿ ಚೆಕ್ ಬೌನ್ಸ್ ಪ್ರಕರಣಗಳಿಗೆ ಸಂಬAಧಿಸಿದAತೆ ಕೋಲಾರದಲ್ಲಿ ೩,೧೦೪, ಮಾಲೂರಿನಲ್ಲಿ ೧,೦೦೩, ಬಂಗಾರಪೇಟೆಯಲ್ಲಿ ೯೯೪, ಮುಳಬಾಗಿಲಿನಲ್ಲಿ ೯೦೫, ಕೆಜಿಎಫ್ನಲ್ಲಿ ೭೮೦ ಹಾಗೂ ಶ್ರೀನಿವಾಸಪುರದಲ್ಲಿ ೬೫೬ ಪ್ರಕರಣಗಳನ್ನು ಗುರುತಿಸಲಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಇದಲ್ಲದೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಈ ಜಿಲ್ಲೆಯ ೪೩ ಪ್ರಕರಣಗಳನ್ನು ಕೂಡ ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಸುಪ್ರೀಂ ಕೋರ್ಟ್ ಅದಾಲತ್ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಈ ದಿನಾಂಕದವರೆಗೆ ಸಂಖ್ಯೆಗಳು ಹೆಚ್ಚಾಗಬಹುದು ಎಂದು ಅವರು ತಿಳಿಸಿದರು.

ಅಂತಹ ಗುರುತಿಸಲಾದ ಪ್ರಕರಣಗಳ ಕಕ್ಷಿದಾರರು ಮತ್ತು ದಾವೆ ಹೂಡುವವರನ್ನು ಪ್ರತಿನಿಧಿಸುವ ವಕೀಲರು, ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ನಲ್ಲಿ ಭಾಗವಹಿಸಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಲೋಕ ಅದಾಲತ್ ಜೊತೆಗೆ, ಜುಲೈ ೧೮ ರಂದು ಚೆಕ್ ಬೌನ್ಸ್ ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲು ವಿಶೇಷ ಲೋಕ ಅದಾಲತ್, ಡ್ರೈವ್ ೨.೦ ಅನ್ನು ಸಹ ನಡೆಸಲಾಗುವುದು ಮತ್ತು ಜುಲೈ ೧೫ ರಂದು ಮಧ್ಯಸ್ಥಿಕೆ ಕೇಂದ್ರದ ಮುಂದೆ ಉಲ್ಲೇಖಿಸಲಾದ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ಅವರು ಹೇಳಿದರು.

ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಕೋಲಾರ ಜಿಲ್ಲೆಗೆ ಸಂಬ0ಧಿಸಿದ0ತೆ ಬಾಕಿ ಇರುವ ೪೩ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ನಮಗೆ ನಿರ್ದೇಶನ ನೀಡಲಾಗಿದೆ. ಅಂತಹ ಪ್ರಕರಣಗಳನ್ನು ಜುಲೈ ೨೧, ೨೨ ಮತ್ತು ೨೩ ರಂದು ವಿಶೇಷ ವಿಚಾರಣೆಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಬಡಿಗೇರ್ ಅವರು ಮಾತನಾಡಿ ಲೋಕ ಅದಾಲತ್ನಲ್ಲಿ ಕೇವಲ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಮಾತ್ರವಲ್ಲದೆ, ಕಂದಾಯ ಇಲಾಖೆ, ವಿದ್ಯುತ್ ಶಕ್ತಿ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ಸಂಬ0ಧಿಸಿದ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕೂಡ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಕೌಟುಂಬಿಕ ಆಸ್ತಿ ಹಂಚಿಕೆ ಹಾಗೂ ಸಿವಿಲ್ ವ್ಯಾಜ್ಯಗಳು. ಕೌಟುಂಬಿಕ ಪ್ರಕರಣಗಳು: ಗಂಡ-ಹೆAಡತಿ ನಡುವಿನ ಭಿನ್ನಾಭಿಪ್ರಾಯ, ಜೀವನಾಂಶ ಹಾಗೂ ವಿಚ್ಛೇದನ ಪ್ರಕರಣಗಳು. ಅಪಘಾತ ಪರಿಹಾರ ವಾಹನ ಅಪಘಾತದ ವಿಮಾ ಪರಿಹಾರ ಪ್ರಕರಣಗಳು. ಚೆಕ್ ಬೌನ್ಸ್ ಪ್ರಕರಣಗಳು: ಹಣಕಾಸು ವ್ಯವಹಾರದ ಚೆಕ್ ಅಮಾನ್ಯ ಪ್ರಕರಣಗಳು ಸೇರಿದಂತೆ ಮತ್ತಿತರ ಪ್ರಕರಣಗಳನ್ನು ಇಥ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದರು.

ನ್ಯಾಯಾಧೀಶರು, ವಕೀಲರು ಹಾಗೂ ಪಕ್ಷಗಾರರು ಜೊತೆಯಾಗಿ ಈ ಅದಾಲತ್ ಅನ್ನು ಯಶಸ್ವಿಗೊಳಿಸಬೇಕಿದೆ. ಸಾರ್ವಜನಿಕರು ಹಾಗೂ ಕಕ್ಷಿದಾರರು ಯಾವುದೇ ರೀತಿಯ ಭಯವಿಲ್ಲದೆ, ತಮಗೆ ನೀಡಲಾದ ನೋಟಿಸ್ ಆಧಾರದ ಮೇಲೆ ನ್ಯಾಯಾಲಯಕ್ಕೆ ಬಂದು ಈ ಉಚಿತ ರಾಜಿ ಸಂಧಾನ ಪ್ರಕ್ರಿಯೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲರು ಸಾರ್ವಜನಿಕರಲ್ಲಿ ವಿನಂತಿಸಿಕೊ0ಡರು.

ವಕೀಲರ ಸಂಘದ ಅಧ್ಯಕ್ಷರು ಎಲ್. ಶ್ರೀನಿವಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande